ETV Bharat / bharat

ಬೆದರಿಕೆ ನಡುವೆ ಮುಂಬೈಗೆ ಕಂಗನಾ: ಶಿವಸೇನಾ ನಾಯಕರಿಗೆ ಸವಾಲು!

ಶಿವಸೇನಾ ನಾಯಕರ ಬೆದರಿಕೆಯಿದ್ದರೂ ಬಾಲಿವುಡ್ ನಟಿ ಕಂಗನಾ ರಣಾವತ್​ ಮುಂಬೈಗೆ ಆಗಮಿಸಲು ಸಜ್ಜಾಗಿದ್ದು, ಹಿಮಾಚಲ ಪ್ರದೇಶದಿಂದ ಹರಿಯಾಣಕ್ಕೆ ಬಂದು ಅಲ್ಲಿಂದ ಮುಂಬೈಗೆ ವಿಮಾನ ಪ್ರಯಾಣ ಕೈಗೊಳ್ಳಲಿದ್ದಾರೆ.

Kangna Ranaut
ಕಂಗನಾ ರಣಾವತ್
author img

By

Published : Sep 9, 2020, 10:08 AM IST

Updated : Sep 9, 2020, 10:28 AM IST

ಮುಂಬೈ: ಶಿವಸೇನೆಯಿಂದ ಬೆದರಿಕೆ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈಗೆ ಇಂದು ಧಾವಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದ ಮಂಡಿಯಿಂದ ಚಂಡೀಗಢಕ್ಕೆ ತೆರಳಿದ್ದು, ಅಲ್ಲಿಂದ ವಿಮಾನದ ಮೂಲಕ ನೇರವಾಗಿ ಮುಂಬೈಗೆ ಬರಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಂಗನಾ ನಾನು ರಾಣಿ ಲಕ್ಷ್ಮೀಬಾಯಿಯ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ನನ್ನ ಚಿತ್ರಗಳಲ್ಲಿ ಪ್ರದರ್ಶಿಸಿ ಅಳವಡಿಸಿಕೊಂಡಿದ್ದೇನೆ. ನನ್ನೂರಾದ ಮಹಾರಾಷ್ಟ್ರಕ್ಕೆ ಬರದಂತೆ ತಡೆಯುತ್ತಿರುವುದು ತುಂಬಾ ದುಃಖದ ವಿಚಾರ. ತಪ್ಪಿನ ವಿರುದ್ಧ ಧ್ವನಿಯೆತ್ತುತ್ತೇನೆ. ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • #WATCH Himachal Pradesh: Actor Kangana Ranaut offered prayers at a temple in Kothi area of Hamirpur district earlier today.

    She is en route Chandigarh from Mandi District. From Chandigarh, she will be leaving for Mumbai. pic.twitter.com/Yvls0VA4To

    — ANI (@ANI) September 9, 2020 " class="align-text-top noRightClick twitterSection" data=" ">

ಚಂಡೀಗಢಕ್ಕೆ ತೆರಳುವ ಮೊದಲು ಕಂಗನಾ ಹಿಮಾಚಲ ಪ್ರದೇಶದ ಹಂಪಿಪುರ ಜಿಲ್ಲೆಯ ಕೋಠಿ ಪ್ರದೇಶದಲ್ಲಿರುವ ದೇವಾಲಯವೊಂದರಲ್ಲಿ ಪೂಜೆ ಸಲ್ಲಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಎರಡನೇ ಬಾರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಮಂಡಿ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ದೇವೇಂದರ್ ಶರ್ಮಾ ಮಾಹಿತಿ ನೀಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರದ ಶಿವಸೇನೆ ಹಾಗೂ ಕಂಗನಾ ನಡುವೆ ವಾಕ್ಸಮರ ನಡೆದಿತ್ತು. ಈ ವೇಳೆ ಮುಂಬೈಗೆ ಮಿನಿ ಪಾಕಿಸ್ತಾನ ಎಂದು ಕಂಗನಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವೇಳೆ ಶಿವಸೇನಾ ನಾಯಕರು ಕೂಡಾ ಮುಂಬೈಗೆ ಬರದಂತೆ ಬೆದರಿಕೆವೊಡ್ಡಿದ ಹಿನ್ನೆಲೆ ನಟಿಗೆ ಕೇಂದ್ರ ಸರ್ಕಾರ ವೈ ಪ್ಲಸ್​ ( Y-plus) ಭದ್ರತೆ ನೀಡಿದೆ.

Last Updated : Sep 9, 2020, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.