ನವದೆಹಲಿ: ಜೆ ಪಿ ನಡ್ಡಾ ಅವರನ್ನು ಇಂದು ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇನ್ಮುಂದೆ ಅಮಿತ್ ಶಾ ಅವರ ಸ್ಥಾನವನ್ನು ಜೆ ಪಿ ನಡ್ಡಾ ತುಂಬಲಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಹುದ್ದೆ ಆಯ್ಕೆ ಸಂಬಂಧ ಇಂದು ಬೆಳಗ್ಗೆ ನಾಮಪತ್ರ ಸಲ್ಲಿಕೆ,ಚುನಾವಣೆ ಪ್ರಕ್ರಿಯೆ ನಡೆಯಿತು. ಆದರೆ, ಜಗತ್ ಪ್ರಕಾಶ್ ನಡ್ಡಾ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆ ಪಿ ನಡ್ಡಾ ಅವರು ಹಿಮಾಚಲಪ್ರದೇಶದಿಂದ ರಾಜ್ಯಸಭೆ ಪ್ರವೇಶಿಸಿದ್ದಾರೆ. 2019 ರ ಜೂನ್ನಲ್ಲಿ ಅವರನ್ನು ಬಿಜೆಪಿಯ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
-
PM Narendra Modi: I am confident that under his (#JPNadda) leadership, party will go ahead by abiding its basic principles and ideologies. We will have to face more challenges than what we faced as a political party in the opposition. https://t.co/QGHI2Ykxim
— ANI (@ANI) January 20, 2020 " class="align-text-top noRightClick twitterSection" data="
">PM Narendra Modi: I am confident that under his (#JPNadda) leadership, party will go ahead by abiding its basic principles and ideologies. We will have to face more challenges than what we faced as a political party in the opposition. https://t.co/QGHI2Ykxim
— ANI (@ANI) January 20, 2020PM Narendra Modi: I am confident that under his (#JPNadda) leadership, party will go ahead by abiding its basic principles and ideologies. We will have to face more challenges than what we faced as a political party in the opposition. https://t.co/QGHI2Ykxim
— ANI (@ANI) January 20, 2020
ಆಯ್ಕೆ ಬಳಿಕ ನಡ್ಡಾರಿಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ನಿತಿನ್ ಗಡ್ಕರಿ ಸೇರಿ ಹಲವು ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೆಪಿಎನ್‌ರಿಗೆ ಅಭಿನಂದಿಸಿದ್ದಾರೆ.
-
Newly elected BJP President #JPNadda : A simple worker like me, who didn't have a political background, who hails from a remote place in Himachal Pradesh - if someone like me is being given this responsibility then it is the speciality of BJP and it is possible only in BJP. pic.twitter.com/wV5VO78Xen
— ANI (@ANI) January 20, 2020 " class="align-text-top noRightClick twitterSection" data="
">Newly elected BJP President #JPNadda : A simple worker like me, who didn't have a political background, who hails from a remote place in Himachal Pradesh - if someone like me is being given this responsibility then it is the speciality of BJP and it is possible only in BJP. pic.twitter.com/wV5VO78Xen
— ANI (@ANI) January 20, 2020Newly elected BJP President #JPNadda : A simple worker like me, who didn't have a political background, who hails from a remote place in Himachal Pradesh - if someone like me is being given this responsibility then it is the speciality of BJP and it is possible only in BJP. pic.twitter.com/wV5VO78Xen
— ANI (@ANI) January 20, 2020
ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಂ ಮೋದಿ, ನಡ್ಡಾ ಅವರು ನನಗೆ ತುಂಬಾ ಹಳೆಯ ಸ್ನೇಹಿತ. ಅವರ ನೇತೃತ್ವದಲ್ಲಿ ಪಕ್ಷವು ತನ್ನ ಮೂಲತತ್ವ ಹಾಗೂ ಸಿದ್ಧಾಂತಗಳನ್ನು ಪಾಲಿಸಿಕೊಂಡು ಉತ್ತಮ ರೀತಿ ಕಾರ್ಯ ಮುಂದುವರೆಸಲಿದೆ ಎಂಬ ವಿಶ್ವಾಸವಿದೆ ಎಂದರು.
ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ರಿಮೋಟ್ ಪ್ರದೇಶವಾದ ಹಿಮಾಚಲಪ್ರದೇಶದಿಂದ ಬಂದ ನನ್ನಂತ ಕಾರ್ಯಕರ್ತನಿಗೆ ಇಂತಹ ದೊಡ್ಡ ಜವಾಬ್ದಾರಿ ನೀಡಿರುವುದು ಬಿಜೆಪಿಯ ವಿಶೇಷತೆ ತೋರಿಸುತ್ತದೆ. ಇದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿ ಪಕ್ಷದ ಮುಖಂಡರಿಗೆ ಜೆ ಪಿ ನಡ್ಡಾ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.