ETV Bharat / bharat

ಜೂ. 25ರಿಂದ ಪುನಾರಂಭಕ್ಕೆ ಜೆಎನ್​ಯು ಸಜ್ಜು - ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಸುದ್ದಿ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕೂಡ ಜೂನ್ 25ರಿಂದ ಪುನಾರಂಭಗೊಳ್ಳಲು ಸಜ್ಜಾಗಿದೆ.

ಜೂ.25 ರಿಂದ ಪುನಾರಂಭಗೊಳ್ಳಲಿರುವ ಜೆಎನ್​ಯು
ಜೂ.25 ರಿಂದ ಪುನಾರಂಭಗೊಳ್ಳಲಿರುವ ಜೆಎನ್​ಯು
author img

By

Published : May 9, 2020, 10:52 PM IST

ನವದೆಹಲಿ: ಲಾಕ್​ಡೌನ್​ ನಿಯಮಗಳ ಸಡಲಿಕೆ ಬೆನ್ನಲ್ಲೇ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕೂಡ ಪುನಾರಂಭಗೊಳ್ಳಲು ಸಜ್ಜಾಗಿದೆ. ಜೂನ್ 25 ಮತ್ತು ಜೂನ್ 30ರ ನಡುವೆ ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಮರಳುವ ನಿರೀಕ್ಷೆ ಇದೆ.

ಕೊರೊನಾ ಪರಿಸ್ಥಿತಿ ಮತ್ತು ಯುಜಿಸಿ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಶೈಕ್ಷಣಿಕ ವರ್ಷ ಘೋಷಿಸಲಾಗಿದೆ. ಈ ಶೈಕ್ಷಣಿಕ ಕ್ಯಾಲೆಂಡರ್​ಅನ್ನು ಎಲ್ಲಾ ಶಾಲೆಗಳ ಡೀನ್​ ಮತ್ತು ವಿಶೇಷ ಕೇಂದ್ರಗಳ ಅಧ್ಯಕ್ಷರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಜುಲೈ 31ರೊಳಗೆ ಪರೀಕ್ಷೆಗಳು ಪೂರ್ಣಗೊಳ್ಳಲಿವೆ ಎಂದು ಜೆಎನ್‌ಯು ಉಪಕುಲಪತಿ ಜಗದೇಶ್ ಕುಮಾರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಮುಂದಿನ ಸೆಮಿಸ್ಟರ್ ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ. ಪರೀಕ್ಷೆಯ ಫಲಿತಾಂಶಗಳು ಬರುವವರೆಗೆ ಕಾಯದೇ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ನೋಂದಾಯಿಸಲು ಮತ್ತು ಮುಂದಿನ ಸೆಮಿಸ್ಟರ್‌ಗೆ ತೆರಳಲು ಅವಕಾಶವಿದೆ ಎಂದು ಜೆಎನ್‌ಯು ತಿಳಿಸಿದೆ.

ಕೊನೆಯ ಸೆಮಿಸ್ಟರ್‌ನಂತೆ ಸಂಪೂರ್ಣ ಮಾನ್ಸೂನ್ ಸೆಮಿಸ್ಟರ್ ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿರುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೂ ನೋಂದಾಯಿಸಿಕೊಳ್ಳಬಹುದು. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು ಡಿಸೆಂಬರ್ 31, 2020ಕ್ಕೆ ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯವು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.