ETV Bharat / bharat

ತಗ್ಗದ ಕೊರೊನಾರ್ಭಟ: ಜಾರ್ಖಂಡ್​ನಲ್ಲಿ ಜುಲೈ 31 ರವರೆಗೆ ಮತ್ತೆ ಲಾಕ್​ಡೌನ್ - ಜಾರ್ಖಂಡ್​ನಲ್ಲಿ ಲಾಕ್​ಡೌನ್ ಘೋಷಣೆ

ಜುಲೈ 31 ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದ್ದು, ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳಗಳು, ಶಾಲೆಗಳು, ಹೋಟೆಲ್​ಗಳು, ಸ್ಪಾ ಮತ್ತು ಸಲೂನ್​ಗಳನ್ನು ಮುಚ್ಚಲಾಗುತ್ತದೆ ಎಂದು ಜಾರ್ಖಂಡ್ ಸರ್ಕಾರ ತಿಳಿಸಿದ್ದಾರೆ.

Jharkhand extends COVID-19 lockdown
ಜಾರ್ಖಂಡ್​ನಲ್ಲಿ ಜುಲೈ 31 ರವರೆಗೆ ಲಾಕ್​ಡೌನ್
author img

By

Published : Jun 27, 2020, 5:48 PM IST

ರಾಂಚಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಅನ್ನು ಜುಲೈ 31 ರವರೆಗೆ ವಿಸ್ತರಿಸಿ ಜಾರ್ಖಂಡ್ ಸರ್ಕಾರ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಲಾಕ್​ಡೌನ್ ವಿಸ್ತರಿಸಲು ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಇಂದು ಸುತ್ತೋಲೆ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳಗಳು, ಶಾಲೆಗಳು, ಹೋಟೆಲ್​, ಸ್ಪಾ ಮತ್ತು ಸಲೂನ್​ಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.

  • कोरोना से संघर्ष में हमें आप सबके सहयोग से अब तक हमें अपेक्षित सफलता मिली है, पर संघर्ष अभी जारी है।

    स्थिति की गम्भीरता को देखते हुए राज्य सरकार ने लॉकडाउन 31 जुलाई तक बढ़ाने का फ़ैसला लिया है।

    पीछे, समय समय पर लॉकडाउन में दी गयी रियायतें जारी रहेंगी। pic.twitter.com/TJQOoIsvP4

    — Hemant Soren (घर में रहें - सुरक्षित रहें) (@HemantSorenJMM) June 26, 2020 " class="align-text-top noRightClick twitterSection" data=" ">

ಲಾಕ್‌ಡೌನ್ ವಿಸ್ತರಣೆಯ ನಿಬಂಧನೆಗಳನ್ನು ತಮ್ಮ ಪ್ರದೇಶದಲ್ಲಿ ಗಂಭೀರವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲಾಡಳಿತಗಳಿಗೆ ನಿರ್ದೇಶಿಸಲಾಗಿದೆ. ತುರ್ತು ಕೆಲಸದ ಹೊರತಾಗಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ಸಿನಿಮಾ ಥಿಯೇಟರ್​, ರಾಜಕೀಯ, ಧಾರ್ಮಿಕ, ಕ್ರೀಡೆ, ಮನರಂಜನೆ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಶಾಲೆಗಳು, ಜಿಮ್‌ಗಳು, ಕೋಚಿಂಗ್ ಸಂಸ್ಥೆಗಳು, ಸ್ವಿಮ್ಮಿಂಗ್​ ಪೂಲ್​ ಸಹ ಮುಚ್ಚಲ್ಪಡುತ್ತವೆ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಸಂಪೂರ್ಣ ನಿಷೇಧಿಸಲಾಗುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್, ಗುಟ್ಕಾ ಮತ್ತು ತಂಬಾಕು ಸೇವನೆಯನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾರ್ಖಂಡ್​ನಲ್ಲಿ ಇಲ್ಲಿಯವರೆಗೆ 2,300 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 15 ಜನ ಸಾವಿಗೀಡಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.