ಚೈಬಾಸಾ (ಜಾರ್ಖಂಡ್): ಕಾರೈಕೇಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಹುತಾತ್ಮರಾಗಿದ್ದಾರೆ.
ಗುಂಡಿನ ಕಾರ್ಯಾಚರಣೆ ವೇಳೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಾಥುರಾಮ್ ಮೀನಾ ಅವರ ಅಂಗರಕ್ಷಕ ಮತ್ತು ಪೊಲೀಸ್ ಮಾಹಿತಿದಾರ ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಕೊಲ್ಹಾನ್ ಡಿಐಜಿ ರಾಜೀವ್ ರಂಜನ್ ಖಚಿತಪಡಿಸಿದ್ದಾರೆ.
ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.