ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮತ್ತೆ ಕ್ರಿಯಾಶೀಲನಾಗಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಜೆಇಎಂ ರಾಕ್ಷಸ ಮಸೂದ್ ಅಜರ್ ಸದ್ಯದಲ್ಲೇ ಭಾರತದ ಮೇಲೆ ಮತ್ತೊಂದು ದಾಳಿಗೆ ಸಂಚು ನಡೆಸಿದ್ದಾನೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ.
ಇತ್ತೀಚೆಗೆ ಪಾಕಿಸ್ತಾನದ ಬಹವಾಲ್ಪುರದಲ್ಲಿ ಜೈಶ್ ಮುಖ್ಯಸ್ಥ ನಿಷೇಧಿತ ಭಯೋತ್ಪಾದನಾ ಗುಂಪುಗಳ ಉನ್ನತ ಕಮಾಂಡರ್ಗಳೊಂದಿಗೆ ಸಭೆಯನ್ನು ನಡೆಸಿದ್ದಾನೆ. ಈ ವೇಳೆ ಭಾರತದ ಮೇಲೆ ದಾಳಿ ನಡೆಸಲು ಉನ್ನತ ಮಟ್ಟದ ತರಬೇತಿ ಹೊಂದಿರುವ ಭಯೋತ್ಪಾದಕರನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದಾನೆ ಎಂದು ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ.
ಅಷ್ಟೇ ಅಲ್ಲದೇ, ಇಂಟಲಿಜೆನ್ಸ್ ವರದಿ ಪ್ರಕಾರ ಅಜರ್ ಆರೋಗ್ಯವಾಗಿದ್ದು, ಈ 17 ವರ್ಷಗಳಲ್ಲಿ ಯಾವುದೇ ಆಸ್ಪತ್ರೆ ಮೆಟ್ಟಿಲೇರಿಲ್ಲವಂತೆ. ಆದರೆ, ಸಂದರ್ಶನವೊಂದರಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ, ಫೆಬ್ರವರಿ 14, 2019ರಂದು ನಡೆದ ಪುಲ್ವಾಮಾ ದಾಳಿಯ ನಂತರ ಅಜರ್ ಅಸ್ವಸ್ಥರಾಗಿದ್ದಾರೆ. ಅವರು ಮನೆಯಿಂದ ಹೊರ ಬರುವ ಸ್ಥಿತಿಯಲ್ಲೂ ಇಲ್ಲ ಎಂದಿದ್ದರು. ಆದ್ರೆ ಪಾಪಿ ಅಜರ್ ಮಾತ್ರ ಭಾರತದ ವಿರುದ್ಧದ ತನ್ನ ಕಾರ್ಯಾಚರಣೆಯನ್ನ ಎಗ್ಗಿಲ್ಲದೇ ಮುಂದುವರೆಸಿದ್ದಾನೆ.