ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ (ಪಿಎಜಿಡಿ) 110 ಸ್ಥಾನಗಳನ್ನು ಗಳಿಸಿದೆ. ಈ ಮಧ್ಯೆ ಮೈತ್ರಿ ಕೂಟದ ವಿರುದ್ಧವಾಗಿ ಹಲವು ನಾಯಕರು, ವಿವಿಧ ಕ್ಷೇತ್ರಗಳಲ್ಲಿ ಬಂಡಾಯ ನಾಯಕರಾಗಿ ಸ್ಪರ್ಧಿಸಿದ್ದು ಮೈತ್ರಿಯ ಬಿರುಕಿಗೆ ಕಾರಣವಾಗಿದೆ.
ಪೀಪಲ್ಸ್ ಕಾನ್ಫರೆನ್ಸ್‌ನ ಇಬ್ಬರು ಹಿರಿಯ ನಾಯಕರು ಪಕ್ಷದ ಮುಖ್ಯಸ್ಥ ಸಾಜಾದ್ ಲೋನ್ ಅವರಿಗೆ ಪತ್ರ ಬರೆದು ಪಿಎಜಿಡಿ ಮೈತ್ರಿಕೂಟದ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕ ಅಬ್ದುಲ್ ಗನಿ ವಕಿಲ್ ಮತ್ತು ಇಮ್ರಾನ್ ಅನ್ಸಾರಿ ಅವರು ಡಿಡಿಸಿ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಬಂಡಾಯ ಸ್ಪರ್ಧೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
2019 ರ ಆಗಸ್ಟ್ 5 ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370 ಕಾಯ್ದೆಯನ್ನು ಮರಳಿ ತರಲು ಪಿಡಿಪಿ ಸೇರಿ ಇತರ ಪಕ್ಷಗಳು ಪಿಎಜಿಡಿಯನ್ನು ರಚಿಸಿದವು. ಈ ಒಕ್ಕೂಟದ ನೇತೃತ್ವವನ್ನು ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರಾಗಿ ಫಾರೂಕ್ ಅಬ್ದುಲ್ಲಾ ಮತ್ತು ಪಿಡಿಪಿಯ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷರಾಗಿದ್ದಾರೆ.
ರಾಜಕೀಯ ಪಕ್ಷಗಳು ಒಗ್ಗೂಡಿ ಡಿಡಿಸಿ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಿದರೂ, ವಕಿಲ್, ಅನ್ಸಾರಿ, ಪಿಡಿಪಿಯ ಫಯಾಜ್ ಅಹ್ಮದ್ ಮಿರ್ ಮತ್ತು ಎನ್‌ಸಿಯ ಬಶರತ್ ಬುಖಾರಿ ಸೇರಿದಂತೆ ಹಲವು ನಾಯಕರು ಮೈತ್ರಿಕೂಟ ತಿರಿಸ್ಕರಿಸಿ ಹೊರ ಬಂದಿದ್ದಾರೆ.
ಆಪ್ನಿ ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಖಾರಿ ಸಜಾದ್ ಲೋನ್, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಆರೋಪ ಕೇಳಿ ಬಂದ ನಂತರ ಭಿನ್ನಾಭಿಪ್ರಾಯಗಳು ಉದ್ಭವಿಸಿದವು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಪಿಎಜಿಡಿಯನ್ನು ಹತ್ತಿಕ್ಕಲು ಊಹಾಪೋಹಗಳನ್ನು ಸೃಷ್ಟಿಸಲಾಗ್ತಿದೆ. ನಾವು ಕೇವಲ ಚುನಾವಣಾ ಕಾರ್ಯಕ್ಕೆ ಒಗ್ಗೂಡಿಲ್ಲ. ಬದಲಾಗಿ, ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುವ ಸಲುವಾಗಿ ಒಂದಾಗಿದ್ದೇವೆ ಎಂದಿದ್ದಾರೆ.