ರಾಜೌರಿ(ಜಮ್ಮು ಕಾಶ್ಮೀರ): ಪಾಕಿಸ್ತಾನ ಸೇನೆಯ ಕದನ ವಿರಾಮ ಉಲ್ಲಂಘನೆಯ ನಂತರ ಮಂಜಕೋಟ್‌ನ ಖೋರಿ ನಾಡರ್ ಗ್ರಾಮದಲ್ಲಿ ಅರಣ್ಯ ಪ್ರದೇಶದ ದೊಡ್ಡ ಭಾಗ ಬೆಂಕಿಗೆ ಆಹುತಿಯಾಗುತ್ತಿರುವುದು ಕಂಡುಬಂದಿದೆ.
ಕಳೆದ ಕೆಲವು ದಿನಗಳಿಂದ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆ(ಲೈನ್ ಆಫ್ ಕಂಟ್ರೋಲ್) ಯ ಬಳಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಕಿಸ್ತಾನ ನಡೆಸುತ್ತಿರುವ ತೀವ್ರ ಗುಂಡಿನ ದಾಳಿಯಿಂದ ಹಲವಾರು ಮನೆಗಳಿಗೆ ಹಾನಿಯಾಗಿದೆ ಮತ್ತು ಪ್ರಾಣಿಗಳು ಸಹ ಸಾವನ್ನಪ್ಪಿವೆ. ಈ ಬೆಂಕಿ ದಾಳಿ, ಗುಂಡಿನ ಚಕಮಕಿಗೆ ಅಂಜಿ ಗಡಿ ಭಾಗದ ಜನರು ಪ್ರಾಣ ಉಳಿಸಿಕೊಳ್ಳಲು ಕೆಲವು ಭೂಗತ ಬಂಕರ್‌ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.