ಪಿತೊರಗಢ(ಉತ್ತರಾಖಂಡ): ಭಾರತದೊಂದಿಗೆ ಪ್ರಬಲ ಸವಾಲೊಡ್ಡುತ್ತಿರುವ ಚೀನಾದ ದಾಳಿಯನ್ನು ಮಟ್ಟಹಾಕಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗೆ ತರಬೇತಿಯನ್ನು 10,000 ರಿಂದ 17,000 ಅಡಿ ಎತ್ತರದಲ್ಲಿ ನೀಡುತ್ತಿದೆ.
ಹೆಚ್ಚುತ್ತಿರುವ ಉದ್ವಿಗ್ನತೆ ಸಮನಗೊಳಿಸಲು ಮತ್ತು ಚೀನಾದ ಆಕ್ರಮಣಗಳಿಂದ ಗಡಿ ರಕ್ಷಿಸಲು ಐಟಿಬಿಪಿಯ ಹಿಮವೀರ್, ತಮ್ಮ ಜಾಗರೂತೆಯ ರಕ್ಷಣೆಗೆ ಸಿದ್ಧವಾಗುತ್ತಿದೆ. ಐಟಿಬಿಪಿಯ 7ನೇ ಬೆಟಾಲಿಯನ್ ಇಂಡೋ-ಚೀನಾ ಗಡಿಯಲ್ಲಿ ಗುಂಜಿಯಿಂದ ಲಿಪು ಪಾಸ್ ಮತ್ತು ಜೋಲಿಂಗ್‌ಕಾಂಗ್‌ವರೆಗೆ ನೆಲೆಗೊಂಡಿದೆ.
10,000 ರಿಂದ 17,000 ಅಡಿ ಎತ್ತರದಲ್ಲಿ ಪುರುಷ ಮತ್ತು ಮಹಿಳಾ ಯೋಧರು ಸೇರಿದಂತೆ ಹಿಮವೀರ್ ಪಡೆ, ಗಡಿಯಲ್ಲಿ 24X7 ಕಣ್ಗಾವಲಿನಲ್ಲಿ ತೊಡಗಿದ್ದಾರೆ. ಯುದ್ಧದಂತಹ ಸಂದರ್ಭಗಳನ್ನು ಎದುರಿಸಲು ಅವರು ಇಕ್ಕಟ್ಟಾದ ಭೌಗೋಳಿಕ ಪರಿಸ್ಥಿತಿಗಳ ನಡುವೆ ಕಠಿಣ ತರಬೇತಿ ಪಡೆಯುತ್ತಿದ್ದಾರೆ.
ಹಿಮಾಲಯನ್ ಪ್ರದೇಶದ ಕಠಿಣ ಹವಾಮಾನ ಪರಿಸ್ಥಿತಿಗಳನ್ನು ಮೆಟ್ಟಿ ನಿಲುತ್ತಿದ್ದಾರೆ. ಇಂಡೋ-ಚೀನಾ ಗಡಿ ವ್ಯಾಪ್ತಿಯಲ್ಲಿ ಪ್ರತಿವರ್ಷ ಸುಮಾರು 6 ತಿಂಗಳು ಹಿಮದ ಅಡಿಯಲ್ಲಿ ಸಂಪೂರ್ಣವಾಗಿ ಮುಳುಗಿರುತ್ತದೆ.
ಚಳಿಗಾಲದ ವೇಲೆ ಮೈನಸ್ 45 ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ ಅಪಾಯಕಾರಿ ಹಿಮನದಿಗಳು ಮತ್ತು ಅದೃಶ್ಯ ನೈಸರ್ಗಿಕ ಅಪಾಯಗಳ ಎದುರಿಸಿ ಐಟಿಬಿಪಿ ಸಿಬ್ಬಂದಿ, ತಮ್ಮ ಸೇವಾ ಅವಧಿಯ ಹೆಚ್ಚಿನ ಸಮಯವನ್ನು ಇಲ್ಲಿ ಕಳೆಯುತ್ತಾರೆ.
ಗಡಿ ಭದ್ರತೆಯ ಹೊರತಾಗಿ ಹಿಮವೀರ್ ಪಡೆ ಸಿಬ್ಬಂದಿಗೆ ಕಡಿಮೆ ಆಮ್ಲಜನಕ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳ ಸವಾಲುಗಳನ್ನು ಎದುರಿಸುವಂತಹ ಸಾಮರ್ಥ್ಯ ಧಕ್ಕಿಸಿಕೊಳ್ಳಬೇಕಾಗುತ್ತದೆ.
ಐಟಿಬಿಪಿಯ 7ನೇ ಬೆಟಾಲಿಯನ್ ಲಿಪುಲೇಖ್ ಗಡಿಯಲ್ಲಿ ಪೋಸ್ಟ್ ಮಾಡಲಾಗಿದ್ದು, ಗಡಿಯನ್ನು ನೋಡಿಕೊಳ್ಳುವುದರ ಜೊತೆಗೆ ಕೈಲಾಶ್ ಮಾನಸ ಸರೋವರ ಯಾತ್ರೆಯ ಸಮಯದಲ್ಲಿ ಭಕ್ತರಿಗೆ ನೆರವಾಗುತ್ತಾರೆ.