ETV Bharat / bharat

ಕೋಚಿಂಗ್​ ಸೆಂಟರ್​ ಮೇಲೆ ಐಟಿ ದಾಳಿ, 30 ಕೋಟಿ ನಗದು,150 ಕೋಟಿ ಅಘೋಷಿತ ಆದಾಯ ಪತ್ತೆ! - ಗ್ರೀನ್​ ಪಾರ್ಕ್​ ಸ್ಪರ್ಧಾತ್ಮಕ ಪರೀಕ್ಷೆ

ತಮಿಳುನಾಡಿನಲ್ಲಿ ಉದ್ಯಮ ಸಮೂಹ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರುಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬರೋಬ್ಬರಿ 30 ಕೋಟಿ ರೂ ತೆರಿಗೆ ಪಾವತಿಸದ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 150 ಕೋಟಿ ರೂ ಗೂ ಹೆಚ್ಚು ಅಘೋಷಿತ ಆದಾಯವಿದೆ ಎಂದು ಇಲಾಖೆ ಹೇಳಿದೆ.

ಕೋಚಿಂಗ್​ ಸೆಂಟರ್ ಮೇಲೆ ಐಟಿ ದಾಳಿ
author img

By

Published : Oct 12, 2019, 11:45 PM IST

ಚೆನ್ನೈ: ತಮಿಳುನಾಡು ಮೂಲದ ಬ್ಯುಸಿನೆಸ್​ ಗ್ರೂಪ್​ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಗಳು, ನೀಟ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡುತ್ತಿದ್ದ ತರಬೇತಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿದೆ. ಈ ವೇಳೆ ಶಿಕ್ಷಣ ಸಂಸ್ಥೆಯ ಆಡಿಟೋರಿಯಂನ ಒಳಗಡೆ ಸುಮಾರು 30 ಕೋಟಿ ರೂಪಾಯಿ ತೆರಿಗೆ ಪಾವತಿಸದ ಹಣವನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸುಮಾರು 150 ಕೋಟಿ ರೂ ಹೆಚ್ಚು ಅಘೋಷಿತ ಆದಾಯವಿರುವ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

Income tax deportment
ಆದಾಯ ತೆರಿಗೆ ಇಲಾಖೆಯಿಂದ ಪ್ರಕಟಣೆ ​​

ಗ್ರೀನ್​ ಪಾರ್ಕ್​ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೋಚಿಂಗ್​ ಸೆಂಟರ್‌ನಲ್ಲಿ 30 ಕೋಟಿ ರೂ ನಗದು ಹಣ ಸಿಕ್ಕಿದೆ. ಉಳಿದಂತೆ ವಿವಿಧ ರೀತಿಯ ದಾಖಲೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

IT raids on coaching institutes
ಐಟಿ ದಾಳಿಗೊಳಗಾದ ಗ್ರೀನ್ ಪಾರ್ಕ್ ಶಿಕ್ಷಣ ಸಂಸ್ಥೆ

ತರಬೇತಿ ಕೇಂದ್ರ ಮಾತ್ರವಲ್ಲದೇ ಶಿಕ್ಷಣ ಸಂಸ್ಥೆಗಳೂ ಸಹ ಈ ಹೆಸರಿನಲ್ಲಿದ್ದು ಶಾಲೆಯಲ್ಲಿ 5 ಸಾವಿರ ವಿದ್ಯಾರ್ಥಿಗಳು, ಸ್ಪರ್ಧಾ ತ್ಮಕ ಸೆಂಟರ್​​ನಲ್ಲಿ ನೀಟ್​ ಪರಿಕ್ಷೆಗಾಗಿ 2 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುತ್ತಿದ್ದು, ಇದರಲ್ಲಿ ಕಳೆದ ವರ್ಷ 700 ವಿದ್ಯಾರ್ಥಿಗಳು ತೇರ್ಗಡೆಯಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತರಬೇತಿಗಾಗಿ ಬರುವ ವಿದ್ಯಾರ್ಥಿಗಳಿಂದ ಅತಿ ಹೆಚ್ಚಿನ ರೀತಿಯಲ್ಲಿ ಶುಲ್ಕ ಪಡೆದುಕೊಳ್ಳುತ್ತಿದ್ದ ಸಂಸ್ಥೆ, ಅವರಿಗೆ ಅರ್ಧ ಹಣದ ರಸೀದಿ ಮಾತ್ರ ನೀಡುತ್ತಿತ್ತು ಎಂದು ತಿಳಿದು ಬಂದಿದೆ.

IT raids on coaching institutes
ಕೋಚಿಂಗ್​ ಸೆಂಟರ್ ಮೇಲೆ ಐಟಿ ದಾಳಿ, ದಾಖಲೆಗಳನ್ನು ಕೊಂಡೊಯ್ಯುತ್ತಿರುವುದು

Intro:Body:

ಕೋಚಿಂಗ್​ ಸೆಂಟರ್​ ಮೇಲೆ ಐಟಿ ದಾಳಿ... ಬರೋಬ್ಬರಿ 150 ಕೋಟಿ ರೂ. ಕಪ್ಪು ಹಣ ವಶಕ್ಕೆ!

ಚೆನ್ನೈ: ತಮಿಳುನಾಡು ಮೂಲಕ ಬ್ಯುಸಿನೆಸ್​ ಗ್ರೂಪ್​ ನಡೆಸುತ್ತಿದ್ದ ಕೋಚಿಂಗ್ ಸಂಸ್ಥೆವೊಂದರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಬರೋಬ್ಬರಿ 150 ಕೋಟಿ ಕಪ್ಪು ಹಣ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಐಟಿ ಇಲಾಖೆಯಿಂದ ಶೋಧಕಾರ್ಯ ಮುಂದುವರಿದಿದೆ. 

ತಮಿಳುನಾಡು ಮೂಲಕ ಗ್ರೀನ್​ ಪಾರ್ಕ್​ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೋಚಿಂಗ್​ ಸೆಂಟರ್​ವೊಂದರಲ್ಲಿ ಬರೋಬ್ಬರಿ 30 ಕೋಟಿ ರೂ ನಗದು ರೂಪದಲ್ಲಿ ಸಿಕ್ಕಿದೆ.ಉಳಿದಂತೆ ವಿವಿಧ ರೀತಿಯ ದಾಖಲೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು,ಅದು ಬರೋಬ್ಬರಿ 150ಕೋಟಿ ರೂ ಬೆಲೆ ಬಾಳಲಿದೆ ಎಂದು ತಿಳಿದು ಬಂದಿದೆ. 

ತರಬೇತಿ ಕೇಂದ್ರ ಮಾತ್ರವಲ್ಲದೇ ಶಿಕ್ಷಣ ಸಂಸ್ಥೆಗಳು ಸಹ ಈ ಹೆಸರಿನಲ್ಲಿದ್ದು ಶಾಲೆಯಲ್ಲಿ 5 ಸಾವಿರ ವಿದ್ಯಾರ್ಥಿಗಳು, ಸ್ಪರ್ದಾತ್ಮಕ  ಸೆಂಟರ್​​ನಲ್ಲಿ ನೀಟ್​ಗಾಗಿ 2 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುತ್ತಿದ್ದು, ಇದರಲ್ಲಿ ಕಳೆದ ವರ್ಷ 700 ವಿದ್ಯಾರ್ಥಿಗಳು ಪಾಸ್​ ಆಗಿ ವೈದ್ಯಕೀಯ ಸೇವೆ ಸಲ್ಲಿಕೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ತರಬೇತಿಗಾಗಿ ಬರುವ ವಿದ್ಯಾರ್ಥಿಗಳಿಂದ ಅತಿ ಹೆಚ್ಚಿನ ರೀತಿಯಲ್ಲಿ ಶುಲ್ಕ ಪಡೆದುಕೊಳ್ಳುತ್ತಿದ್ದ ತರಬೇತಿ ಸಂಸ್ಥೆ, ಅವರಿಗೆ ಅರ್ಧ ಹಣದ ರಸೀದಿ ಮಾತ್ರ ಸಲ್ಲಿಕೆ ಮಾಡುತ್ತಿತ್ತು ಎಂದು ತಿಳಿದು ಬಂದಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.