ನವದೆಹಲಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೂಲದ ಪ್ರಮುಖ ಬಿಲ್ಡರ್ಗಳ ಮನೆಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ, 520 ಕೋಟಿ ರೂಪಾಯಿ ಮೌಲ್ಯದ ತೆರಿಗೆ ಪಾವತಿಸದ ಮತ್ತು ಬಚ್ಚಿಟ್ಟ ಆದಾಯವನ್ನು ಪತ್ತೆ ಹಚ್ಚಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಬೊರಿವಿಲಿ, ಮೀರಾ ರಸ್ತೆ ಮತ್ತು ಭಯಂದರ್ ಪ್ರದೇಶಗಳಲ್ಲಿ ಜ.12ರಂದು ಕಾರ್ಯಾಚರಣೆ ನಡೆಸಲಾಗಿತ್ತು. ಆಗ ತರಿಗೆ ವಂಚಿಸಿದ 10.16 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಇದರ ಮುಂದುವರಿದ ಭಾಗವಾಗಿ ನಡೆದ ಕಾರ್ಯಾಚರಣೆಗಳಲ್ಲಿ ಈಗ ಮತ್ತೆ ತೆರಿಗೆ ತಪ್ಪಿಸಿದ 520 ಕೋಟಿ ರೂ. ಆದಾಯ ಪತ್ತೆ ಹಚ್ಚಲಾಗಿದೆ.
ಭೂಮಿ ಮತ್ತು ಫ್ಲ್ಯಾಟ್‌ಗಳ ಮಾರಾಟದ ಮೇಲಿನ ಅಕ್ರಮ ಹಣ, ಅಸುರಕ್ಷಿತ ಸಾಲಗಳ ವಸತಿ ನಮೂದು, ನಗದು ಸಾಲದ ಸ್ವರೂಪದ ರಶೀದಿಗಳು ಇದರಲ್ಲಿ ಸೇರಿವೆ. ಕಾರ್ಯಾಚರಣೆ ವೇಳೆ ಕಂಡುಬಂದ ಕೆಲವು ಲಾಕರ್‌ಗಳನ್ನು ಇನ್ನೂ ತೆರೆಯಲಾಗಿಲ್ಲ ಎಂದು ತಿಳಿಸಲಾಗಿದೆ.
ಇದನ್ನೂ ಓದಿ...ಗೃಹ ಉಳಿತಾಯ ದುಪ್ಪಟ್ಟು: ಕಾರ್ಪೊರೇಟ್ಗೂ ಸಾಲ ಕೊಡಬಲ್ಲ ಜನರ ಕೈಲಿರುವ ದುಡ್ಡೆಷ್ಟು ಗೊತ್ತೇ?