ಶ್ರೀನಗರ: ಕಳೆದೆರಡು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಕಾರ್ಯನಿರತ ಸೈನಿಕರ ಮೇಳೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಸಿಆರ್ಪಿಎಫ್ನ ಇಬ್ಬರು ಯೋಧರು ಹುತಾತ್ಮರಾಗಿದ್ದ ಘಟನೆ ನಡೆದಿತ್ತುರು. ಇದೀಗ ಇದರ ಹೊಣೆ ಐಸಿಸ್ ಹೊತ್ತುಕೊಂಡಿದೆ.
ಮಂಗಳವಾರ ಸಂಜೆ ಬಿಜ್ ಬೇಹ್ರಾದ ಗೋರಿವಾನ್ ಚೌಕ್ ಸಮೀಪ ಶಂಕಿತ ಉಗ್ರರು ಗ್ರೆನೇಡ್ ಎಸೆದ ಪರಿಣಾಮ ಹೆಡ್ ಕಾನ್ಸ್ಟೇಬಲ್ ಶಿವ್ಲಾಲ್ ನೀಟಾಂ ಹುತಾತ್ಮರಾಗಿ, ನೀಟಾಮ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನ ಆಸ್ಪತ್ರೆಗೆ ದಾಖಸುವ ವೇಳೆ ಹುತಾತ್ಮರಾಗಿದ್ದರು.
ಗ್ರೆನೇಡ್ ಎಸೆದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಉಗ್ರರ ಮೇಲೆ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದರು. ಇದೀಗ ದಾಳಿಯ ಹೊಣೆ ಇಸ್ಲಾಮಿಕ ಉಗ್ರ ಸಂಘಟನೆ ಐಸಿಸ್ ಹೊತ್ತುಕೊಂಡಿದ್ದು, ದಾಳಿ ನಡೆಸಿದ್ದು ನಾವೇ ಎಂದು ಹೇಳಿದೆ. ಕಳೆದ ಕೆಲ ದಿನಗಳಿಂದ ಕಣಿವೆ ನಾಡಿನಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ, ಇಲ್ಲಿಯವರೆಗೆ 10ಕ್ಕೂ ಹೆಚ್ಚು ಉಗ್ರರ ಬಲಿ ಪಡೆದುಕೊಂಡಿದ್ದಾರೆ.