ETV Bharat / bharat

ಹಥ್ರಾಸ್ ​ಪ್ರಕರಣದಲ್ಲಿ ಪಿಎಫ್​ಐ ಸಂಘಟನೆ ಕೈವಾಡದ ಶಂಕೆ: ನಾಲ್ವರ ಬಂಧನ - ಪಿಎಫ್​ಐಯ ನಾಲ್ಕು ವ್ಯಕ್ತಿಗಳ ಬಂಧನ

ಹಥ್ರಾಸ್​ ಹಿಂಸಾಚಾರದಲ್ಲಿ ಪಿಎಫ್​ಐ ಭಾಗಿಯಾಗಿದೆ ಎಂಬ ಮಾತುಗಳು ಕೇಳಿಬರುತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾದೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ವ್ಯಕ್ತಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಪಿಎಫ್​ಐ  ಸಂಘಟನೆಯ ನಾಲ್ಕು ವ್ಯಕ್ತಿಗಳ ಬಂಧನ
ಪಿಎಫ್​ಐ ಸಂಘಟನೆಯ ನಾಲ್ಕು ವ್ಯಕ್ತಿಗಳ ಬಂಧನ
author img

By

Published : Oct 6, 2020, 9:56 PM IST

ಲಖನೌ: ದೆಹಲಿಯಿಂದ ಹಥ್ರಾಸ್​ಗೆ ತೆರಳುತ್ತಿದ್ದ ನಾಲ್ವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಪಿಎಫ್​ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರನ್ನು ಮುಜಫರ್​​ ನಗರದ ಅತೀಕ್-ಉರ್ ರೆಹಮಾನ್, ಮಲಪ್ಪುರಂನ ಸಿದ್ದೀಕ್, ಬಹ್ರೇಚ್‌ನ ಮಸೂದ್ ಅಹ್ಮದ್ ಮತ್ತು ರಾಂಪುರದ ಆಲಂ ಎಂದು ಗುರುತಿಸಲಾಗಿದೆ.

ಉತ್ತರಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಂಗ ತರುವಂತಹ ಅವರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಕೆಲವು ಸಾಹಿತ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಲಯಾಳಂ ಸುದ್ದಿ ಪೋರ್ಟಲ್‌ಗಳಿಗಾಗಿ ಕೆಲಸ ಮಾಡುತ್ತಿರುವ ದೆಹಲಿ ಮೂಲದ ಪತ್ರಕರ್ತನೊಬ್ಬ ಈ ಬಂಧಿತ ನಾಲ್ಕು ಜನರಲ್ಲಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರ ಮೇಲೆ ಸೆಕ್ಷನ್ 151ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉತ್ತರಪ್ರದೇಶದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಾಲ್ವರು ಆರೋಪಿಗಳಿಗೆ ಪಿಎಫ್‌ಐ ಮತ್ತು ಅದರ ಸಹಾಯಕ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ)ನೊಂದಿಗೆ ಸಂಬಂಧವಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಸಂಘಟನೆಯ ಪಾಲ್ಗೊಳ್ಳುವಿಕೆಗಾಗಿ ಯುಪಿ ಪೊಲೀಸರು ಈ ಹಿಂದೆ ಪಿಎಫ್‌ಐ ನಿಷೇಧವನ್ನು ಕೋರಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಸಿಎಂ ಯೋಗಿ ಹೇಳಿಕೆ:

ನಮ್ಮ ಸರ್ಕಾರವನ್ನು ಉರುಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪಿತೂರಿ ಮಾಡಲಾಗುತ್ತಿದೆ. ರಾಜ್ಯದ ಹಥ್ರಾಸ್​ನಲ್ಲಿ 19 ವರ್ಷದ ದಲಿತ ಮಹಿಳೆಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರದ ವಿಷಯವನ್ನು ಇಟ್ಟುಕೊಂಡು, ಜಾತಿ ಮತ್ತು ಕೋಮು ಗಲಭೆಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ನಾಲ್ವರ ಬಂಧನ ಖಂಡಿಸಿದ ಪಿಎಫ್‌ಐ:

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಬಂಧನವನ್ನು ಖಂಡಿಸಿದೆ. ಇದು ಶೋಚನೀಯ ಮತ್ತು ಕಾನೂನುಬಾಹಿರ ಎಂದು ಹೇಳಿದೆ. ಉತ್ತರಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ವಿಫಲವಾಗಿದೆ. ಹಥ್ರಾಸ್​ ಪ್ರಕರಣದಿಂದ ಎಲ್ಲರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಪಿಎಫ್​ಐ ಅನ್ನು ಸರ್ಕಾರ ಎಳೆದು ತಂದಿದೆ. ಆದರೆ, ಪಾಪ್ಯುಲರ್ ಫ್ರಂಟ್ ಯುಪಿ ಸರ್ಕಾರದ ಬೆದರಿಕೆಗೆ ಬಗ್ಗುವುದಿಲ್ಲ. ಸರ್ಕಾರ ಸಿಎಫ್‌ಐ ನಾಯಕರು ಮತ್ತು ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ” ಎಂದು ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಹೇಳಿದರು.

ಪಿಎಫ್‌ಐ ಎಂದರೇನು:

ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಹಲವಾರು ಮುಸ್ಲಿಂ ಸಂಘಟನೆಗಳು ಮುಖ್ಯವಾಗಿ ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ (ಕೆಎಫ್‌ಡಿ), ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (ಎನ್‌ಡಿಎಫ್) ಮತ್ತು ಮಣಿತಾ ನೀತಿ ಪಸರಾಯ್ (ಎಂಎನ್‌ಪಿ) ಒಗ್ಗೂಡಿ ಪಿಡಿಐಯನ್ನು 2006ರಲ್ಲಿ ರಚಿಸಿದವು. ಮುಸ್ಲಿಂ ಸಮುದಾಯ, ವಿಶೇಷವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕುರಿತು ಹೋರಾಡಲು ಇದನ್ನು ಸ್ಥಾಪಿಸಲಾಗಿತ್ತು. ಆ ಬಳಿಕ 2006ರ ನವೆಂಬರ್​ನಲ್ಲಿ ಕೇರಳದಲ್ಲಿ ಪಿಎಫ್​ಐ ಅನ್ನು ಇತರ ಮೂರು ಮುಸ್ಲಿಂ ಸಂಘಟನೆಗಳನ್ನ ಸೇರಿಸಿಕೊಂಡು ಸ್ಥಾಪನೆ ಮಾಡಲಾಯಿತು.

ಪಿಎಫ್‌ಐನನ್ನು ಹೇಗೆ ರಚಿಸಲಾಯಿತು?

ಆರಂಭಿಕ ದಿನಗಳಲ್ಲಿ ಎನ್‌ಡಿಎಫ್‌ನ ಚಟುವಟಿಕೆಗಳು ಕೇರಳಕ್ಕೆ ಸೀಮಿತವಾಗಿತ್ತು. ಆದರೆ ಜನಪ್ರಿಯತೆ ಗಳಿಸಿದ ನಂತರ ರಾಜ್ಯಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸುವ ಮತ್ತು ಏಕೀಕೃತ ಸಂಘಟನೆಯನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಸಮಾನ ಮನಸ್ಕ ಸಂಘಟನೆಗಳನ್ನು ವಿಲೀನಗೊಳಿಸಿತು.

ಮುಂದಿನ ಮೂರು ವರ್ಷಗಳಲ್ಲಿ ಗೋವಾದ ನಾಗರಿಕರ ವೇದಿಕೆ, ರಾಜಸ್ಥಾನದ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕ ಸೊಸೈಟಿ, ಪಶ್ಚಿಮ ಬಂಗಾಳದ ನಗರಿಕ್ ಅಧಿಕಾರ ಸುರಕ್ಷ ಸಮಿತಿ, ಮಣಿಪುರದ ಲಿಲಾಂಗ್ ಸಾಮಾಜಿಕ ವೇದಿಕೆ ಮತ್ತು ಆಂಧ್ರಪ್ರದೇಶದ ಸಾಮಾಜಿಕ ನ್ಯಾಯ ಸಂಘ - ಪಿಎಫ್‌ಐನೊಂದಿಗೆ ವಿಲೀನಗೊಳ್ಳಲಿವೆ. ವಿವಿಧ ರಾಜ್ಯಗಳ ಪಿಎಫ್‌ಐನ ಚಟುವಟಿಕೆಗಳು ಕೇರಳದಲ್ಲಿ ಪ್ರಬಲವಾಗಿದೆ.

ಆರೋಪಗಳು:

ಈ ವರ್ಷದ 2020ರ ಆರಂಭದಲ್ಲಿ ದೇಶಾದ್ಯಂತ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗಾಗಿ ಧನಸಹಾಯ ನೀಡಿದ ಆರೋಪ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಮೇಲೆ ಆರೋಪಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು ಈ ಹಿಂದೆ ಸಂಘಟನೆಯನ್ನು ನಿಷೇಧಿಸಲು ಕೋರಿದ್ದರು. ದೆಹಲಿಯಲ್ಲಿ ನಡೆದ ಗಲಭೆಯ ಪಿತೂರಿಯ ಹಿಂದೆ ಪಿಎಫ್‌ಐ ಕೈವಾಡವಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇತ್ತೀಚೆಗೆ ಆಗಸ್ಟ್ 11 ರ ಡಿಜಿ ಹಳ್ಳಿ ಹಿಂಸಾಚಾರದಲ್ಲಿ ಬೆಂಗಳೂರು ಪೊಲೀಸರು ಪಿಎಫ್‌ಐ ಪಾತ್ರ ಇರುವ ಬಗ್ಗೆ ಸುಳಿವು ನೀಡಿದ್ದಾರೆ.

ಪಿಎಫ್‌ಐ ನಿಷೇಧಿಸುವ ಪ್ರಸ್ತಾಪವಿದೆಯೇ?

ಪಿಎಫ್‌ಐ ಅನ್ನು ನಿಷೇಧಿಸಬೇಕೆ ಎಂದು ನಿರ್ಧರಿಸಲು 2017 ರ ಅಕ್ಟೋಬರ್ ಮೊದಲ ವಾರದಲ್ಲಿ ಗೃಹ ಸಚಿವಾಲಯವು ಸರಣಿ ಸಭೆಗಳನ್ನು ನಡೆಸಿತು. ಪಿಎಫ್‌ಐ ಸದಸ್ಯರು ಭಾಗಿಯಾಗಿರುವ ಎಲ್ಲ ಪ್ರಕರಣಗಳನ್ನೂ ಸಚಿವಾಲಯ ಪರಿಶೀಲಿಸಿದೆ.

ನಿಷೇಧಕ್ಕೆ ಹೊಸ ಪ್ರಸ್ತಾಪ ಏಕೆ?

1 ಜನವರಿ 2020, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಉತ್ತರಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಿಎಫ್‌ಐ ಪಾತ್ರವನ್ನು ಶಂಕಿಸಲಾಗಿದೆ. ಮತ್ತು ಸಂಸ್ಥೆಯ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೃಹ ಸಚಿವಾಲಯ ನಿರ್ಧರಿಸುತ್ತದೆ ಎಂದು ಹೇಳಿದರು. ಜಾರ್ಖಂಡ್ ಮತ್ತು ಅಸ್ಸೋಂ ಸೇರಿದಂತೆ ಕೆಲವು ರಾಜ್ಯಗಳು ಇದನ್ನು ನಿಷೇಧಿಸಲು ಅಗ್ರಹಿಸಿವೆ.

ಕರ್ನಾಟಕದಲ್ಲಿ ಇತ್ತೀಚಿನ ಭಯೋತ್ಪಾದನೆ ಮತ್ತು ಹಿಂಸಾಚಾರದ ಘಟನೆಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಾತ್ರವಿದೆ ಎಂದು ಒಪ್ಪಿಕೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನವರಿಯಲ್ಲಿ ಜನವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.