ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಉರುಳಾಗಿರುವ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಚಿದು ಜೊತೆ ಕಾರ್ಯನಿರ್ವಹಿಸಿದ್ದ ಆರು ಮಂದಿ ಅಧಿಕಾರಿಗಳು ಇಂದು ಸಿಬಿಐ ವಿಶೇಷ ಕೋರ್ಟ್ಗೆ ಹಾಜರಾಗಲಿದ್ದಾರೆ.
ಆರು ಅಧಿಕಾರಿಗಳು ನ.29ರಂದು ಸಿಬಿಐ ವಿಶೇಷ ಕೋರ್ಟ್ಗೆ ಹಾಜರಾಗುವಂತೆ ಜಡ್ಜ್ ಅಜಯ್ ಕುಮಾರ್ ಕುಹರ್ ಸಮನ್ಸ್ ಜಾರಿ ಮಾಡಿದ್ದರು.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಈಗಾಗಲೇ ಸಿಬಿಐ 14 ಮಂದಿ ಮೇಲೆ ಚಾರ್ಜ್ಶೀಟ್ ತಯಾರಿಸಿದೆ. ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಅವರ ಲೆಕ್ಕಿಗ ಎಸ್.ಭಾಸ್ಕರನ್, ಐಎನ್ಎಕ್ಸ್ ಮಾಜಿ ನಿರ್ದೇಶಕ ಪೀಟರ್ ಮುರ್ಖಜಿ ಸೇರಿದಂತೆ 14 ಮಂದಿಯ ಮೇಲೆ ಚಾರ್ಜ್ಶೀಟ್ ದಾಖಲಾಗಿದೆ.
ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿರುವ 14 ಮಂದಿಯಲ್ಲಿ, ನಾಲ್ಕು ಕಂಪನಿ, ಆರು ಪ್ರಜಾ ಪ್ರತಿನಿಧಿಗಳು ಹಾಗೂ ಉಳಿದವರು ಖಾಸಗಿ ವ್ಯಕ್ತಿಗಳು ಎಂದು ಸಿಬಿಐ ಹೇಳಿದೆ.
INX ಮೀಡಿಯಾ ಪ್ರಕರಣ: ಚಿದು ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ಪ್ರಕಟಿಸಲಿದೆ. ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರೀಸದಸ್ಯ ಪೀಠದಿಂದ ಹೊರಬೀಳಲಿರುವ ತೀರ್ಪಿನಲ್ಲಿ ಚಿದು ಬಿಡುಗಡೆ ಅಥವಾ ಜೈಲುವಾಸ ಮುಂದುವರಿಕೆ ನಿರ್ಧಾರವಾಗಲಿದೆ.