ETV Bharat / bharat

’ನನಗೆ ಮೋದಿ ಅಭಿನಂದನೆಗಿಂತ ರೋಗಿಗಳ ಆರೈಕೆಯೇ ಮುಖ್ಯ’: ನರ್ಸ್​ ಅಂತರಾಳದ ಮಾತು - ಕೊರೊನಾ ಬಿಕ್ಕಟ್ಟಿನಲ್ಲಿ ನರ್ಸ್​ ಸೇವೆ ಅಪಾರ

ಮೇ 12 ಎಂದರೆ ತಟ್ಟನೆ ನೆನಪಾಗೋದು ನರ್ಸ್​​ಗಳು. ಏಕೆಂದರೆ ಅಂದು ಅವರ ದಿನ. ಕೊರೊನಾ ಬಿಕ್ಕಟಿನಲ್ಲೂ ಮನೆ, ಗಂಡ ಹಾಗೂ ಮಗುವಿನಿಂದ ದೂರ ಉಳಿದು ಸೇವೆಯಲ್ಲಿ ಮಗ್ನರಾಗಿರುವ ಶುಶ್ರೂಷಕಿಯರಿಗೆ ಅದೆಷ್ಟು ಬಾರಿ ಅಭಿನಂದನೆ ಸಲ್ಲಿಸಿದರೂ ಸಾಲದು.

International Nurses Day
ಅಂತಾರಾಷ್ಟ್ರಿಯ ನರ್ಸ್​ ದಿನಾಚರಣೆ
author img

By

Published : May 12, 2020, 5:23 PM IST

'ಕೊರೊನಾ ವೈರಸ್​​ನಿಂದ ಜಗತ್ತೇ ತಲ್ಲಣಗೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರೂ ಊಹಿಸದ ರೀತಿ ಶುಶ್ರೂಷಕಿರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಾತುಗಳು ಔಷಧಕ್ಕಿಂತ ಹೆಚ್ಚು ಸದ್ಗುಣ.

ಈ ಮಾತು ಹೇಳಿದ್ದು, ಸೋಂಕಿನಿಂದ ಗುಣಮುಖರಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​. ಸೋಂಕು ತಗುಲಿದಾಗ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಜಾನ್ಸನ್​​ ಅವರು, ಕಣ್ಣಿನ ರೆಪ್ಪೆಯಂತೆ ಕಾಪಾಡಿದ ನರ್ಸ್​​ ಜೆನ್ನಿ ಮೆಕ್‌ಗೀ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದರು.

ಮನೆ, ಗಂಡ ಹಾಗೂ ಮಗುವಿನಿಂದ ದೂರ ಉಳಿದು, ಸೇವೆಯಲ್ಲಿ ಮಗ್ನರಾಗಿರುವ ಶುಶ್ರೂಷಕಿಯರ ಸಂಖ್ಯೆ ಜಗತ್ತಿನಲ್ಲಿ ಎಷ್ಟೋ. ಅಂತಹವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಇಂತಹ ಬಿಕ್ಕಟ್ಟಿನಲ್ಲೂ ಕೆಲಸ ಮಾಡುತ್ತಿರುವ ಅವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಕರ್ನಾಟಕದ ಬೆಳಗಾವಿಯ ಮಿಲಾನ್​ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್​ ಸುನಂದಾ ಅವರ ವಿಡಿಯೋ ಕೂಡ ಅದಕ್ಕೆ ಸಂಬಂಧಿಸಿದ್ದಿದೆ.

ಅಮ್ಮಾ...ಬಾ...

ಕೈ ಚಾಚಿ ಅಮ್ಮಾ...ಎಂದು ಕರೆಯುತ್ತಾ, ಬಿಕ್ಕಿ ಬಿಕ್ಕಿ ಅಳುತ್ತ ಅಮ್ಮಾ... ಎಂದು ಕೂಗುತ್ತಿತ್ತು. ಆದರೆ, ತಾಯಿ ಪರಿಸ್ಥಿತಿಯೇ ಬೇರೆ. ಕಂದಮ್ಮ ಒಂದೇ ಸಮನೆ ಅಳುತ್ತಾ ಕೂಗುತ್ತಿದ್ದರೂ ಕಣ್ಣೀರು ಹಾಕುತ್ತಾ ಆಸ್ಪತ್ರೆಯೊಳಗೆ ಹೋದ ಆ ಹೆತ್ತ ತಾಯಿಯ ಹೃದಯ ಎಷ್ಟು ನೋವು ಅನುಭವಿಸಿರಬೇಡ. ಗಂಡ, ಮಗುವಿನಿಂದ ದೂರ ಉಳಿದು ಕೊರೊನಾ ವಿರುದ್ಧ. ಹೋರಾಡುತ್ತಿದ್ದ ಸುನಂದಾ ಅವರಿಗೆ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಸ್ವತಃ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರೇ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

ಮತ್ತೊಂದು ಮನಕಲುಕುವ ಕತೆಯಿದು?

ಅವರು ವಿಶಾಖಪಟ್ಟಣದ ಮಿಮ್ಸ್​ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕೆಗೆ 5 ವರ್ಷದ ಮಗುವಿದೆ. ಆ ಮಗುವಿಗೆ ಆಕೆಯೇ ಎಲ್ಲ. ತಾಯಿಯನ್ನು ಬಿಟ್ಟು ಮಗು ಒಂದು ಕ್ಷಣವೂ ಬಿಟ್ಟಿರಲಾರದು.

ತಾಯಿ ಕಾಣಿಸಿಕೊಳ್ಳದಿದ್ದರೆ ಕಂದಮ್ಮ ಬಿಕ್ಕಿ, ಬಿಕ್ಕಿ ಅಳುತ್ತದೆ. ಆದರೆ, ಮಗುವನ್ನು ನೋಡಿಕೊಳ್ಳದ ಪರಿಸ್ಥಿತಿಯಲ್ಲಿ ತಾಯಿ ಇಲ್ಲ. ತಮಗೆ ಒಪ್ಪಿಸಿರುವ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಬೇಕು ಎಂದು ಬಯಸಿರುವ ಆಕೆ, ಮಗುವನ್ನು ತನ್ನ ತವರಿಗೆ ಕಳುಹಿಸಿಕೊಟ್ಟು ದಿನಾಲೂ ವಿಡಿಯೋ ಕಾಲ್​ ಮೂಲಕ ಮಾತಾಡಿಸುತ್ತಾರೆ.

ಆದರೆ, ಮಗುವಿನ ಕಣ್ಣಲ್ಲಿ ಮಾತ್ರ ನೀರು ನಿಲ್ಲುತ್ತಿಲ್ಲ. ಕೊರೊನಾ ಆರಂಭವಾದಾಗ ಮಗುವನ್ನು ತವರಿಗೆ ಕಳುಹಿಸಿರುವ ಆಕೆ ಈವರೆಗೂ ಮಗುವನ್ನು ನೋಡಿಲ್ಲ. ರೋಗಿಗಳನ್ನು ಕಾಪಾಡುವುದೇ ನಮ್ಮ ಧ್ಯೇಯ ಎಂದು ರೋಗಿಗಳಿಗೆ ಔಷಧ ನೀಡುತ್ತಾ, ಅವರಿಗೆ ಮಾನಸಿಕ ಸ್ಥೈರ್ಯ ತುಂಬುತ್ತಿದ್ದಾರೆ ಈ ನರ್ಸ್.

ಮೋದಿ ಮೆಚ್ಚುಗೆ ಪಡೆದ ಛಾಯಾ

ಇವರು ಪುಣೆಯ ನಾಯುಡು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನರ್ಸ್​​​ ಛಾಯಾ ಜಗ್ತಾಪ್. ನಿತ್ಯ 12 ಗಂಟೆ ಸೇವೆ. ಛಾಯಾ ಒಂದೂವರೆ ತಿಂಗಳಿನಿಂದ ಕೊರೊನಾ ಸೋಂಕಿತರಿರುವ ವಾರ್ಡಿನಲ್ಲೇ ಸೇವೆ ಸಲ್ಲಿಸುತ್ತಿದ್ದಾಳೆ.

ಒಂದು ದಿನ ಆಸ್ಪತ್ರೆಗೆ ಕರೆ ಬಂತು. ಫೋನ್​ ಛಾಯಾಗೆ ಕೊಡಿ ಎಂದರು. ಆಗ ಛಾಯಾಗೆ ಫೋನ್​ ಕನೆಕ್ಟ್​ ಮಾಡಿ ಮೇಡಮ್​ ಲೈನ್​ನಲ್ಲಿ ಇರಿ ನಿಮ್ಮೊಂದಿಗೆ ಪ್ರಧಾನಿ ಮೋದಿ ಅವರು ಮಾತಾನಾಡುತ್ತಾರೆ ಎಂದರು. ಆದರೆ, ಛಾಯಾಗೆ ಅರ್ಥ ಆಗಲಿಲ್ಲ. ಅಷ್ಟರೊಳಗಾಗಲೇ ನಮಸ್ಕಾರ ಛಾಯ ಎಂದರು ಮೋದಿ. ಆಕೆಯೂ ನಮಸ್ಕಾರ ಎಂದರು. ನೀವು ಮಾಡುತ್ತಿರುವ ಸೇವೆಗೆ ಅಭಿನಂದನೆ. ಎಲ್ಲರಿಗೂ ಮಾದರಿಯಾಗಿದ್ದೀರಿ. ಹೀಗೆ ಸೇವೆ ಮುಂದುವರೆಸಿ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಫೋನ್​ ಇಟ್ಟ ಬಳಿಕ ಎಲ್ಲರೂ ಚಪ್ಪಾಳೆ ತಟ್ಟಿ ಛಾಯಾಗೆ ಅಭಿನಂದನೆ ಸಲ್ಲಿಸಿದರು. ಅದಾದ ಕೆಲವೇ ನಿಮಿಷಗಳಲ್ಲಿ ಈಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು. ಪ್ರಧಾನಿ ಅಭಿನಂದನೆಗಿಂತ ಕೊರೊನಾ ಸೋಂಕಿತರು ಗುಣಮುಖರಾಗುವುದೇ ನನಗೆ ಹೆಚ್ಚು ಆನಂದ ತರಿಸುತ್ತದೆ. ಮೋದಿ ಅವರ ಪ್ರಶಂಸೆ ನನಗೆ ಕೆಲಸ ಮಾಡಲು ಮತ್ತಷ್ಟು ಬಲ ತಂದಿದೆ ಎನ್ನುತ್ತಾರೆ ಛಾಯಾ. ಕಣ್ಣಿಗೆ ಕಾಣದ ಇಂತಹ ನರ್ಸ್​ಗಳ ಸಂಖ್ಯೆ ಎಷ್ಟಿರಬೇಡ. ನೀವೇ ಊಹಿಸಿ. ದಾದಿಯರೇ ಅಭಿನಂದನೆ. ನಿಮ್ಮ ಸೇವೆಗೊಂದು ಸಲಾಂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.