ETV Bharat / bharat

ಕರ್ನಾಟಕ, ದೆಹಲಿಯಲ್ಲಿ ಕೋವಿಡ್​ ಸಾವುಗಳ ಸಂಖ್ಯೆ ಹೆಚ್ಚಳ: ಕೇಂದ್ರ ಸರ್ಕಾರ ಮಾಹಿತಿ - ಕೇಂದ್ರ ಸರ್ಕಾರ ಮಾಹಿತಿ

ನಿನ್ನೆ ಒಂದೇ ದಿನ ದೇಶದಲ್ಲಿ 11,72,179 ಕೋವಿಡ್​ ಟೆಸ್ಟ್​​ ನಡೆಸಲಾಗಿದ್ದು, ಪ್ರತಿದಿನ ಅತಿ ಹೆಚ್ಚು ಕೊರೊನಾ ಟೆಸ್ಟ್​ ಮಾಡುವುದರಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

Rajesh Bhushan, Secretary, Union Health Ministry

author img

By

Published : Sep 3, 2020, 6:09 PM IST

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತ ಪ್ರಕರಣಗಳಿಗಿಂತಲೂ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆದರೆ ಮಹಾಮಾರಿಯಿಂದಾಗಿ ಕರ್ನಾಟಕ ಹಾಗೂ ದೆಹಲಿಯಲ್ಲಿ ಪ್ರತಿದಿನ ಅತಿ ಹೆಚ್ಚು ಜನರು ಸಾವನ್ನಪ್ಪುತ್ತಿರುವುದಾಗಿ ತಿಳಿಸಿದೆ.

ದೆಹಲಿಯಲ್ಲಿ ಶೇ.50ರಷ್ಟು ಮತ್ತು ಕರ್ನಾಟಕದಲ್ಲಿ ಶೇ 9.6ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್​ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 11 ಲಕ್ಷಕ್ಕೂ ಹೆಚ್ಚು ಕೊರೊನಾ ಟೆಸ್ಟ್​​ ನಡೆಸಲಾಗಿದ್ದು, ನಿನ್ನೆ ಒಂದೇ ದಿನ 68 ಸಾವಿರಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಮಾಹಿತಿ

ಐದು ರಾಜ್ಯಗಳಲ್ಲಿ ಹೆಚ್ಚು ಕೇಸ್​

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಶೇ. 62ರಷ್ಟು ಕೊರೊನಾ ಸೋಂಕಿತ ಪ್ರಕರಣಗಳಿದ್ದು, ಶೇ 70ರಷ್ಟು ಕೊರೊನಾ ಮಹಾಮಾರಿಯಿಂದ ಸಾವನ್ನಪ್ಪಿದ್ದವರು ಕೇವಲ ಕರ್ನಾಟಕ, ಆಂಧ್ರಪ್ರದೇಶ, ನವದೆಹಲಿ, ತಮಿಳುನಾಡು ಹಾಗೂ ಮಹಾರಾಷ್ಟ್ರದವರಾಗಿದ್ದಾರೆ.

ದೇಶದಲ್ಲಿ ಕಡಿಮೆ ಸೋಂಕಿತ ಪ್ರಕರಣ

ಇತರೆ ದೇಶಗಳಿಗೆ ಹೋಲಿಕೆ ಮಾಡಿದಾಗ ನಮ್ಮಲ್ಲಿ ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆ ಇದೀಗ ಕಡಿಮೆಯಾಗಿದ್ದು, ಸಾವಿನ ಪ್ರಕರಣದಲ್ಲೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 4,50,00,000 ಕೋವಿಡ್​​ ಟೆಸ್ಟ್​​ ನಡೆಸಲಾಗಿದ್ದು, ಇಷ್ಟೊಂದು ಟೆಸ್ಟ್​ ನಡೆಸಿರುವುದು ಕೇವಲ ನಾವು ಹಾಗೂ ಅಮೆರಿಕ ಎಂದು ಹೇಳಿದ್ದಾರೆ.

  • There is an increase in the case fatality trajectory in two states - Karnataka and Delhi. Delhi has seen 50% and Karnataka has seen 9.6% increase in average daily case fatality: Rajesh Bhushan, Secretary, Union Health Ministry. #COVID19 https://t.co/OSPp42Li4d

    — ANI (@ANI) September 3, 2020 " class="align-text-top noRightClick twitterSection" data=" ">

ಅತಿ ಹೆಚ್ಚು ಡಿಸ್ಚಾರ್ಜ್​​

ದೇಶದಲ್ಲಿ 29 ಲಕ್ಷಕ್ಕೂ ಅಧಿಕ ಗುಣಮುಖ ಕೇಸ್​​ಗಳಿದ್ದು, ಕಳೆದ 24 ಗಂಟೆಯಲ್ಲಿ 68,584 ಜನರು ಡಿಸ್ಚಾರ್ಜ್​​ ಆಗಿದ್ದಾರೆ. ಇದು ಸೋಂಕಿತ ಪ್ರಕರಣಗಳಿಗಿಂತಲೂ 3.5ರಷ್ಟು ಹೆಚ್ಚಿದೆ. ಸದ್ಯ ದೇಶದಲ್ಲಿ 8,15,538 ಸಕ್ರಿಯ ಪ್ರಕರಣಗಳಿವೆ ಎಂದು ಅವರು ತಿಳಿಸಿದ್ದಾರೆ. ಜತೆಗೆ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಉತ್ತರಪ್ರದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಜಾರಿಯಲ್ಲಿರುವ ಲಾಕ್​ಡೌನ್​ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.