ನವದೆಹಲಿ: ಹಿಂದೂಸ್ತಾನಿ ಸಂಗೀತ ಲೋಕದ ದಿಗ್ಗಜ ಪದ್ಮ ವಿಭೂಷಣ ಪಂಡಿತ್ ಜಸ್ರಾಜ್ ನಿಧನರಾಗಿದ್ದಾರೆ. ಮೇವಾತಿ ಘರಾಣಾದ ಪಂಡಿತ್ ಜಸ್ರಾಜ್ ಅಮೆರಿಕದ ನ್ಯೂಜೆರ್ಸಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪಂಡಿತ್ ಜಸ್ರಾಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಪುತ್ರಿ ದುರ್ಗಾ ಜಸ್ರಾಜ್ ಹೇಳಿದ್ದಾರೆ. ಪಂಡಿತ್ ಜಸ್ರಾಜ್ ನಿಧನದಿಂದ ಸಂಗೀತ ಲೋಕದಲ್ಲಿ ಶೂನ್ಯ ಆವರಿಸಿದೆ.
1930ರ ಜನವರಿ 28 ರಂದು ಹರಿಯಾಣದ ಹಿಸ್ಸಾರ್ ಜಿಲ್ಲೆಯ ಪಿಲಿ ಮಂಡೋರಿ ಎಂಬಲ್ಲಿ ಜನಿಸಿದ ಪಂಡಿತ್ ಜಸ್ರಾಜ್ ಅವರಿಗೆ ಸಣ್ಣ ಪ್ರಾಯದಲ್ಲೇ ಸಂಗೀತ ಸರಸ್ವತಿ ಒಲಿದಿದ್ದಳು. ಇವರ ತಂದೆ ಪಂಡಿತ್ ಮೋತಿರಾಮ್. ಜಸ್ರಾಜ್ ಅವರಿಗೆ ನಾಲ್ಕು ವರ್ಷ ಆಗಿದ್ದಾಗ ತಂದೆ ಇಹಲೋಕ ತ್ಯಜಿಸಿದ್ದರು. ಹೀಗಾಗಿ ಪ್ರಾಥಮಿಕ ಸಂಗೀತಾಭ್ಯಾಸ ನಡೆದದ್ದು ಸಹೋದರ ಪಂಡಿತ್ ಮಣಿರಾಮ್ ಅವರಲ್ಲಿ. ಜಸ್ರಾಜ್ ಅವರ ನಾಲ್ಕು ತಲೆಮಾರುಗಳು ಕೂಡ ಸಂಗೀತದೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದವು. ಹಿಂದೂಸ್ತಾನಿ ಸಂಗೀತ ಪರಂಪರೆಯ ಅಸಾಧಾರಣ ವೈವಿಧ್ಯವನ್ನು ಜಗತ್ತಿಗೆ ಪರಿಚಯಿಸಿದವರು ಪಂಡಿತ್ ಜಸ್ರಾಜ್.
ತಮ್ಮ ಜೀವನದ 80ಕ್ಕೂ ಹೆಚ್ಚು ವರ್ಷಗಳನ್ನು ಸಂಗೀತಕ್ಕೆ ಮೀಸಲಿಟ್ಟ ಪಂಡಿತ್ ಜಸ್ರಾಜ್, ಭಾರತ ಮಾತ್ರವಲ್ಲದೆ ಅಮೆರಿಕ ಮತ್ತು ಕೆನಡಾದಲ್ಲೂ ಸಂಗೀತದ ಗಾನಸುಧೆ ಹರಿಸಿದ್ದರು. ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದವರು ಪಂಡಿತ್ ಜಸ್ರಾಜ್. ಸಂಗೀತ ಲೋಕಕ್ಕೆ ಪಂಡಿತ್ ಜಸ್ರಾಜ್ ಅವರು ನೀಡಿದ ವಿಶಿಷ್ಟ ಕೊಡುಗೆ ಪರಿಗಣಿಸಿ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಸೌರಮಂಡಲದ ಗ್ರಹವೊಂದಕ್ಕೆ ಪಂಡಿತ್ ಜಸ್ರಾಜ್ ಹೆಸರಿಟ್ಟಿತ್ತು. ಮಂಗಳ ಮತ್ತು ಗುರು ಗ್ರಹದ ನಡುವಿನ ನಿರ್ವಾತ ಪ್ರದೇಶದಲ್ಲಿರುವ 2006 ವಿಪಿ 32 (ನಂಬರ್-300128) ಹೆಸರಿನ ಸಣ್ಣದಾದ ಗ್ರಹಕ್ಕೆ 'ಪಂಡಿತ್ ಜಸ್ರಾಜ್' ಎಂದು ಹೆಸರಿಡಲಾಗಿತ್ತು.
ಪಂಡಿತ್ ಜಸ್ರಾಜ್ 1952ರಲ್ಲಿ ಚೊಚ್ಚಲ ಸಂಗೀತ ಕಚೇರಿ ನಡೆಸಿಕೊಟ್ಟಿದ್ದರು. ನೇಪಾಲದ ರಾಜ ತ್ರಿಭುವನ್ ಬಿರ್ ಬಿಕ್ರಮ್ ಶಾ ಅವರ ಸಮ್ಮುಖದಲ್ಲಿ ಸಂಗೀತ ಕಚೇರಿ ನಡೆದಿತ್ತು.
ಪಂಡಿತ್ ಜಸ್ರಾಜ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
-
The unfortunate demise of Pandit Jasraj Ji leaves a deep void in the Indian cultural sphere. Not only were his renditions outstanding, he also made a mark as an exceptional mentor to several other vocalists. Condolences to his family and admirers worldwide. Om Shanti. pic.twitter.com/6bIgIoTOYB
— Narendra Modi (@narendramodi) August 17, 2020 " class="align-text-top noRightClick twitterSection" data="
">The unfortunate demise of Pandit Jasraj Ji leaves a deep void in the Indian cultural sphere. Not only were his renditions outstanding, he also made a mark as an exceptional mentor to several other vocalists. Condolences to his family and admirers worldwide. Om Shanti. pic.twitter.com/6bIgIoTOYB
— Narendra Modi (@narendramodi) August 17, 2020The unfortunate demise of Pandit Jasraj Ji leaves a deep void in the Indian cultural sphere. Not only were his renditions outstanding, he also made a mark as an exceptional mentor to several other vocalists. Condolences to his family and admirers worldwide. Om Shanti. pic.twitter.com/6bIgIoTOYB
— Narendra Modi (@narendramodi) August 17, 2020
''ಸಂಗೀತ ದಂತಕಥೆ ಮತ್ತು ಯಾರಿಗೂ ಸಾಟಿಯಿಲ್ಲದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದ ಪಂಡಿತ್ ಜಸ್ರಾಜ್ ನಿಧನ ನನಗೆ ಬೇಸರ ತಂದಿದೆ. 8 ದಶಕಗಳ ಕಾಲ ಸಂಗೀತ ಸರಸ್ವತಿಯ ಆರಾಧನೆಯಲ್ಲಿ ಮಗ್ನರಾಗಿದ್ದ ಪದ್ಮ ವಿಭೂಷಣ ಪಂಡಿತ್ ಜಸ್ರಾಜ್ ಜನರನ್ನು ಸಂಗೀತ ಲೋಕಕ್ಕೆ ಕೊಂಡೊಯ್ದಿದ್ದರು. ಅವರ ಕುಟುಂಬ, ಸ್ನೇಹಿತರು ಮತ್ತು ಸಂಗೀತ ವಿದ್ವಾಂಸರಿಗೆ ಸಂತಾಪ'' ಎಂದು ರಾಷ್ಟ್ರಪತಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
''ಪಂಡಿತ್ ಜಸ್ರಾಜ್ ನಿಧನದಿಂದ ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹುದೊಡ್ಡ ಶೂನ್ಯ ಆವರಿಸಿದೆ. ಅವರೊಬ್ಬ ಸಂಗೀತ ದಿಗ್ಗಜ, ಜೊತೆಗೆ ಅನೇಕ ಗಾಯಕರಿಗೆ ಮಾರ್ಗದರ್ಶಕರಾಗಿ ಗುರುತಿಸಿಕೊಂಡವರು. ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರಿಗೆ ನನ್ನ ಸಂತಾಪ'' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.