ETV Bharat / bharat

ಭಾರತ, ಚೀನಾ ಸಂಘರ್ಷ: ಗಡಿಯಿಂದ ಹಿಂದೆ ಸರಿಯಲು ಉಭಯ ಸೇನೆಗಳು ಒಪ್ಪಿಗೆ - ಸಿಡಿಎಸ್ ಮುಖ್ಯಸ್ಥ ಜನರಲ್ ಬಿಪಿನ್ ರಾವತ್

ನವೆಂಬರ್ 6 ರಂದು ಚುಶುಲ್‌ನಲ್ಲಿ ನಡೆದ 8 ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಗಡಿಯಿಂದ ಸೇನೆ ಹಿಂತೆಗೆದುಕೊಳ್ಳುವ ವಿಚಾರವಾಗಿ ಚರ್ಚಿಸಿವೆ.

in Ladakh
ಉಭಯ ಸೇನೆಗಳು ಒಪ್ಪಿಗೆ
author img

By

Published : Nov 11, 2020, 2:05 PM IST

ನವದೆಹಲಿ: ಲಡಾಖ್​ನಲ್ಲಿ ಭಾರತ, ಚೀನಾ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಗಡಿಯಿಂದ ಹಿಂದೆ ಸರಿಯಲು ಉಭಯ ಸೇನೆಗಳು ಒಪ್ಪಿಗೆ ಸೂಚಿಸಿವೆ.

ನವೆಂಬರ್ 6 ರಂದು ಚುಶುಲ್ ಪ್ರದೇಶದಲ್ಲಿ ನಡೆದ 8 ನೇ ಕಾರ್ಪ್ಸ್​​​ ಕಮಾಂಡರ್ ಮಟ್ಟದ ಸಭೆಯಲ್ಲಿ ಸೇನೆ ಹಿಂತೆಗೆದುಕೊಳ್ಳುವ ವಿಚಾರವಾಗಿ ಮಾತುಕತೆ ನಡೆಸಲಾಯಿತು. ಎಲ್​ಎಸಿಯಿಂದ ಟ್ಯಾಂಕ್​ಗಳು, ಶಸ್ತ್ರಸಜ್ಜಿತ ಸಿಬ್ಬಂದಿ, ವಾಹನಗಳನ್ನು ಹಿಂತೆಗೆದುಕೊಂಡು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು.

ಚರ್ಚೆಯಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಮತ್ತು ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶನಾಲಯದ ಜನರಲ್ ಬ್ರಿಗೇಡಿಯರ್ ಘಾಯ್ ಭಾಗವಹಿಸಿದ್ದರು.

ಎರಡೂ ಕಡೆಯವರು ಶೇಕಡಾ 30 ರಷ್ಟು ಸೈನಿಕರನ್ನು ಮೂರು ದಿನಗಳೊಳಗೆ ಹಿಂತೆಗೆದುಕೊಳ್ಳಬೇಕಿತ್ತು. ಚೀನಾ ಸೇನೆ, ಫಿಂಗರ್ 8ರ ಪೂರ್ವ ವಲಯದಿಂದ ಹಿಂದೆ ಸರಿಯಲು ಸಮ್ಮತಿ ಸೂಚಿಸಿದ್ದು, ಭಾರತೀಯ ಸೇನೆ ಕೂಡ ಮರಳಲಿದೆ. ಚುಂಗುಲ್ ಮತ್ತು ರೆಜಾಂಗ್ ಹಾಗೂ ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯ ಮೇಲೆ ಬೀಡು ಬಿಟ್ಟಿದ್ದ ಸೇನೆಗಳು ವಾಪಸ್​ ಆಗಲಿವೆ.

ಈ ವರ್ಷದ ಜೂನ್​ನಲ್ಲಿ ನಡೆದ ಗಾಲ್ವಾನ್ ಕಣಿವೆಯ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಕಮಾಂಡಿಂಗ್ ಆಫೀಸರ್ ಸೇರಿ ಅನೇಕ ಚೀನೀ ಸೈನಿಕರು ಕೂಡ ಮೃತಪಟ್ಟಿದ್ದರು.

ಎನ್‌ಎಸ್‌ಎ ಮುಖ್ಯಸ್ಥ ಅಜಿತ್ ದೋವಲ್, ಸಿಡಿಎಸ್ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಮತ್ತು ವಾಯುಪಡೆಯ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸಾರ್ಹ ಭದ್ರತಾ ತಂಡ ಗಡಿ ಸಂಘರ್ಷ ನಿವಾರಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.