ETV Bharat / bharat

ಎಂಎಸ್​ಎಂಇ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಂದ ಚೀನಾ ಔಟ್​: ಕೇಂದ್ರದ ಮಹತ್ವದ ನಿರ್ಧಾರ

author img

By

Published : Jul 1, 2020, 7:01 PM IST

ಚೀನಾ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಂದ ಡ್ರ್ಯಾಗನ್​ ದೇಶದ ಕಂಪೆನಿಗಳಿಗೆ ಗೇಟ್​ ಪಾಸ್​ ನೀಡಲು ಮುಂದಾಗಿದೆ.

Gadkari
Gadkari

ನವದೆಹಲಿ: ಲಡಾಖ್​ನ ಗಾಲ್ವನ್​​ ಕಣಿವೆ ಸಂಘರ್ಷದಲ್ಲಿ ಚೀನಾ ಗುಂಡಿಗೆ ಭಾರತದ 22 ಯೋಧರು ಹುತಾತ್ಮರಾಗಿದ್ದು, ಚೀನಾಗೆ ಭಾರತ ವ್ಯಾಪಾರ-ವಹಿವಾಟು ಹಾಗೂ ಕೆಲವೊಂದು ಯೋಜನೆ ನಿಷೇಧ ಮಾಡುವ ಮೂಲಕ ತಿರುಗೇಟು ನೀಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ರೈಲ್ವೆ ಇಲಾಖೆ ಡ್ರ್ಯಾಗನ್​ ದೇಶದೊಂದಿಗಿನ 470 ಕೋಟಿ ರೂ. ಒಪ್ಪಂದ ಮುರಿದುಕೊಂಡಿತ್ತು. ಜೊತೆಗೆ ಅಲ್ಲಿನ 59 ಆ್ಯಪ್​ ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಹಾಕಿದೆ. ಇದೀಗ ಜಂಟಿ ಉದ್ಯಮ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಚೀನಾ ಕಂಪೆನಿಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಂಪೂರ್ಣವಾಗಿ ನಿಷೇಧ ಹೇರಲಾಗುವುದು ಎಂದು ತಿಳಿಸಿದ್ದಾರೆ.

ಎಂಎಸ್​ಎಂಇ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಚೀನಾ ಹೂಡಿಕೆ ಮಾಡಲು ಯಾವುದೇ ರೀತಿಯ ಪ್ರೋತ್ಸಾಹ ಇರುವುದಿಲ್ಲ ಎಂದಿರುವ ಗಡ್ಕರಿ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಿಂದಲೂ ದೂರ ಇಡುವುದಾಗಿ ತಿಳಿಸಿದ್ದಾರೆ.

ರಸ್ತೆ ನಿರ್ಮಾಣ ಮಾಡುವ ಕಂಪನಿಗಳು ಚೀನಾ ಪಾಲುದಾರಿಕೆ ಹೊಂದಿದ್ದರೆ ಅವುಗಳಿಗೆ ನಾವು ಅನುಮತಿ ನೀಡುವುದಿಲ್ಲ ಎಂದಿರುವ ನಿತಿನ್​ ಗಡ್ಕರಿ, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೆದ್ದಾರಿ ಇಲಾಖೆಗೆ ಮಾಹಿತಿ ರವಾನೆ ಮಾಡಲಾಗಿದೆ ಎಂದಿದ್ದಾರೆ.

ಚೀನಾದ 59 ಆ್ಯಪ್​ಗಳ ಮೇಲೆ ನಿಷೇಧ ಹೇರಿಕೆ ಮಾಡಿರುವ ಕೇಂದ್ರ ಸರ್ಕಾರ, ಈ ಹಿಂದೆ ಅಲ್ಲಿನ ಕಂಪೆನಿ ಜತೆ ರೈಲ್ವೆ ಇಲಾಖೆ ಹೊಂದಿದ್ದ 470 ಕೋಟಿ ರೂ. ಒಪ್ಪಂದ ಕೂಡ ಮುರಿದು ಕೊಂಡಿದೆ. ಇನ್ನು ಮಹಾರಾಷ್ಟ್ರ ಸರ್ಕಾರ ಕೂಡ ಚೀನಾ ಕಂಪೆನಿ ಜತೆಗಿನ ಅನೇಕ ಒಪ್ಪಂದ ಮುರಿದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.