ನವದೆಹಲಿ : ಸೋಮವಾರ 29,091 ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 99,75,958 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಪ್ರತಿನಿತ್ಯ ಕೊರೊನಾ ಕೇಸ್ಗಳ ಹಾಗೂ ಸಾವಿನ ಸಂಖ್ಯೆ ಕೂಡ ತಗ್ಗುತ್ತಿದೆ. ಕಳೆದ 24 ಗಂಟೆಗಳಲ್ಲಿ 16,375 ಸೋಂಕಿತರು ಪತ್ತೆಯಾಗಿದ್ದು, 496 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,03,56,845 ಹಾಗೂ ಮೃತರ ಸಂಖ್ಯೆ 1,49,850ಕ್ಕೆ ಏರಿಕೆಯಾಗಿದೆ.
ಉಳಿದಂತೆ 2,31,036 ಕೇಸ್ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ನೀವು ಮುಟ್ಟಿದ ವಸ್ತುಗಳ ಮೇಲ್ಮೈ ಹಾಗೂ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸುತ್ತಿರಿ. ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಅತ್ಯಗತ್ಯ.
-
#IndiaFightsCorona
— Ministry of Health (@MoHFW_INDIA) January 5, 2021 " class="align-text-top noRightClick twitterSection" data="
अक्सर छुए जाने वाली सतहों को नियमित रूप से साफ करना हमारी दिनचर्या का हिस्सा होना चाहिए। ऐसा कर के हम COVID-19 के संक्रमण से सुरक्षित रह सकते हैं। 2 गज की दूरी, मास्क है ज़रूरी।
#Unite2FightCorona pic.twitter.com/fYefBoSb5X
">#IndiaFightsCorona
— Ministry of Health (@MoHFW_INDIA) January 5, 2021
अक्सर छुए जाने वाली सतहों को नियमित रूप से साफ करना हमारी दिनचर्या का हिस्सा होना चाहिए। ऐसा कर के हम COVID-19 के संक्रमण से सुरक्षित रह सकते हैं। 2 गज की दूरी, मास्क है ज़रूरी।
#Unite2FightCorona pic.twitter.com/fYefBoSb5X#IndiaFightsCorona
— Ministry of Health (@MoHFW_INDIA) January 5, 2021
अक्सर छुए जाने वाली सतहों को नियमित रूप से साफ करना हमारी दिनचर्या का हिस्सा होना चाहिए। ऐसा कर के हम COVID-19 के संक्रमण से सुरक्षित रह सकते हैं। 2 गज की दूरी, मास्क है ज़रूरी।
#Unite2FightCorona pic.twitter.com/fYefBoSb5X
ಇವುಗಳನ್ನು ಪಾಲಿಸುವುದರಿಂದ ಕೋವಿಡ್-19 ಸೋಂಕಿನಿಂದ ನಿಮ್ಮನ್ನ ರಕ್ಷಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ. ನಿನ್ನೆ ಮತ್ತೆ 9 ಮಂದಿಗೆ ಬ್ರಿಟನ್ ಸೋಂಕು ಅಂಟಿದ್ದು, ದೇಶದಲ್ಲಿನ ರೂಪಾಂತರ ಕೊರೊನಾ ಪ್ರಕರಣ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಜನವರಿ 4ರವರೆಗೆ 17,65,31,997 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,96,236 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.