ETV Bharat / bharat

ಕಾಶ್ಮೀರ ಕುರಿತ ವಿಶ್ವಸಂಸ್ಥೆ ಕಾರ್ಯದರ್ಶಿ ಮಧ್ಯಸ್ಥಿಕೆ ಪ್ರಸ್ತಾಪಕ್ಕೆ ಭಾರತ ಸ್ಪಷ್ಟ ನಕಾರ! - ಜಮ್ಮು ಮತ್ತು ಕಾಶ್ಮೀರ ಲೇಟೆಸ್ಟ್ ನ್ಯೂಸ್

ಜಮ್ಮು ಮತ್ತು ಕಾಶ್ಮೀರದ ಜನತೆಯ ಮೂಲಭೂತ ಹಕ್ಕ ಮತ್ತು ಜೀವಿಸುವ ಹಕ್ಕಿಗೆ ಬೆದರಿಕೆ ಒಡ್ಡುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ವಿಶ್ವಾಸಾರ್ಹ ಮತ್ತು ನಿರಂತರ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ತಿಳಿ ಹೇಳುತ್ತದೆ ಎಂಬ ಭರವಸೆ ಇದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ಕುಮಾರ್‌ ಹೇಳಿದ್ದಾರೆ.

India rejects mediation offer by UN Secretary-General on Kashmir,ವಿಶ್ವಸಂಸ್ಥೆ ಕಾರ್ಯದರ್ಶಿ ಪ್ರಸ್ಥಾಪಿಸಿದ ಮಧ್ಯಸ್ಥಿಕೆ ತಿರಸ್ಕರಿಸಿದ ಭಾರತ
ರವೀಶ್ ಕುಮಾರ್
author img

By

Published : Feb 17, 2020, 7:42 AM IST

ನವದೆಹಲಿ: ಕಾಶ್ಮೀರ ಕುರಿತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರಸ್ತಾಪಿಸಿದ ಮಧ್ಯಸ್ಥಿಕೆಯ ಪ್ರಸ್ತಾಪವನ್ನು ವಿದೇಶಾಂಗ ಸಚಿವಾಲಯ ಭಾನುವಾರ ತಿರಸ್ಕರಿಸಿದೆ. ಬದಲಿಗೆ 'ಪಾಕಿಸ್ತಾನವು ಅಕ್ರಮವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡ ಪ್ರದೇಶವನ್ನು ಖಾಲಿ ಮಾಡಿಸುವತ್ತ ಗಮನ ಹರಿಸಬೇಕು' ಎಂದಿದೆ.

  • Raveesh Kumar, MEA on comments made by Secretary-General of United Nations (UNSG) in Islamabad: Further issues, if any, would be discussed bilaterally. There is no role or scope for third party mediation. https://t.co/h4zRauRdeb

    — ANI (@ANI) February 16, 2020 " class="align-text-top noRightClick twitterSection" data=" ">

ಇಸ್ಲಾಮಾಬಾದ್‌ನಲ್ಲಿ ಗುಟೆರೆಸ್ ಪ್ರಸ್ತಾಪಿಸಿದ ವಿಷಯಗಳಿಗೆ ಉತ್ತರಿಸಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, 'ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿ ಮುಂದುವರೆದಿದೆ. ಅಕ್ರಮ ಮತ್ತು ಬಲವಂತವಾಗಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನ ಖಾಲಿ ಮಾಡಿಸುವತ್ತ ಗಮನಹರಿಸಬೇಕು. ಇತರೆ ಸಮಸ್ಯೆಗಳನ್ನ ದ್ವಿಪಕ್ಷೀಯವಾಗಿ ಚರ್ಚಿಸಲಾಗುವುದು. ತೃತೀಯ ಮಧ್ಯಸ್ಥಿಕೆಗೆ ಯಾವುದೇ ಅಗತ್ಯತೆ ಇಲ್ಲ' ಎಂದಿದ್ದಾರೆ.

ಭಾರತ, ಜಮ್ಮು ಮತ್ತು ಕಾಶ್ಮೀರದ ಜನತೆಯ ಮೂಲಭೂತ ಹಕ್ಕ ಮತ್ತು ಜೀವಿಸುವ ಹಕ್ಕಿಗೆ ಬೆದರಿಕೆ ಒಡ್ಡುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ವಿಶ್ವಾಸಾರ್ಹ ಮತ್ತು ನಿರಂತರ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ತಿಳಿ ಹೇಳುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.

ನಾಲ್ಕು ದಿನಗಳ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಮತ್ತು ಗಡಿಯುದ್ದಕ್ಕೂ ಉಂಟಾಗಿರುವ ಉದ್ವಿಗ್ನತೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಪರಮಾಣು ಶಕ್ತಿ ಹೊಂದಿರುವ ಉಭಯ ದೇಶಗಳು ಗರಿಷ್ಠ ಸಂಯಮ ಕಾಪಾಡಿಕೊಳ್ಳುವುದು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.