ETV Bharat / bharat

ವಿಶೇಷ ಅಂಕಣ: ಚೀನಾ ಗಡಿ ವಿವಾದ; ಭಾರತಕ್ಕೆ ಜಪಾನ್‌ನ ಬೆಂಬಲ! - ಭಾರತಕ್ಕೆ ಜಪಾನ್‌ನ ಬೆಂಬಲ

ಭಾರತ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ಭಾರತವನ್ನು ಜಪಾನ್‌ನ ರಾಯಭಾರಿ ಸತೋಶಿ ಸುಜುಕಿ ಬೆಂಬಲಿಸಿದ್ದಾರೆ.

India Japan in context of China India faceoff
ಭಾರತಕ್ಕೆ ಜಪಾನ್‌ನ ಬೆಂಬಲ
author img

By

Published : Jul 3, 2020, 10:31 PM IST

ನವದೆಹಲಿ: ಜಪಾನ್‌ನ ಜಲಗಡಿಯೊಳಗೆ ಚೀನಾದ ಎರಡು ಕರಾವಳಿ ಪಡೆಯ ಹಡಗುಗಳು ಒಳ ನುಸುಳಿದ್ದಕ್ಕೆ ಚೀನಾದ ವಿರುದ್ಧ ಶುಕ್ರವಾರ ಜಪಾನ್‌ ಕೂಡ ತೀವ್ರ ಟೀಕೆ ವ್ಯಕ್ತಪಡಿಸಿದೆ. ಸದ್ಯ ಭಾರತ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತವನ್ನು ಜಪಾನ್‌ನ ರಾಯಭಾರಿ ಸತೋಶಿ ಸುಜುಕಿ ಬೆಂಬಲಿಸಿದ್ದಾರೆ.

ವಿವೇಕಾನಂದ ಫೌಂಡೇಶನ್‌ ಹಮ್ಮಿಕೊಂಡಿದ್ದ “ಕೋವಿಡ್ ನಂತರದ ಕಾಲದಲ್ಲಿ ಭಾರತ-ಜಪಾನ್ ಸಂಬಂಧಗಳು” ಎಂಬ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಲಡಾಖ್‌ನಲ್ಲಿ ಚೀನಾ ಜೊತೆಗೆ ಹಂಚಿಕೊಂಡಿರುವ ವಾಸ್ತವ ಗಡಿ ರೇಖೆಯಲ್ಲಿ ಯಾವುದೇ ಬದಲಾವಣೆಯ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರಿಗೆ ತಿಳಿಸಿದ್ದಾರೆ. “ಎಫ್‌ಎಸ್‌ ಶ್ರಿಂಗ್ಲಾ ಜೊತೆಗೆ ಉತ್ತಮ ಮಾತುಕತೆ ನಡೆಸಿದ್ದೇವೆ” ಎಂದು ಚರ್ಚೆಯ ನಂತರ ಸುಜುಕಿ ಟ್ವೀಟ್ ಮಾಡಿದ್ದಾರೆ.

“ಭಾರತ ಸರ್ಕಾರದ ಸಹನಶೀಲ ನಿಲುವು ಸೇರಿದಂತೆ ಎಲ್‌ಎಸಿಯಲ್ಲಿ ಪ್ರಸ್ತುತ ಸ್ಥಿತಿಗತಿಗಳ ಕುರಿತು ಅವರು ನೀಡಿದ ಮಾಹಿತಿ ಮೆಚ್ಚುಗೆಯಾಗಿದೆ. ಮಾತುಕತೆಯ ಮೂಲಕ ಶಾಂತಿಯುತ ಪರಿಹಾರವನ್ನು ಜಪಾನ್ ಕೂಡ ನಿರೀಕ್ಷಿಸುತ್ತದೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ಸ್ವಯಂ ಪ್ರೇರಿತ ಬದಲಾವಣೆಯ ಪ್ರಯತ್ನವನ್ನು ಜಪಾನ್ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ. ಕಳೆದ ತಿಂಗಳು ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ಸೇನೆಯೊಂದಿಗಿನ ಸಂಘರ್ಷದಲ್ಲಿ ಭಾರತದ 20 ಸಿಬ್ಬಂದಿ ಹುತಾತ್ಮರಾಗಿದ್ದರು. ಇದರ ನಂತರದಲ್ಲಿ, ಭಾರತ ಮತ್ತು ಚೀನಾ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಯನ್ನು ನಡೆಸಿ, ಸನ್ನಿವೇಶವನ್ನು ತಹಬಂದಿಗೆ ತರುವ ಪ್ರಯತ್ನ ನಡೆಸಿದೆ.

ಪೂರ್ವ ಚೀನಾ ಸಮುದ್ರದಲ್ಲಿನ ವಿವಾದಿತ ಸೆಂಕಾಕು ದ್ವೀಪದ ಬಳಿ ಚೀನಾದ ಕರಾವಳಿ ಪಡೆಯ ಹಡಗುಗಳು ಒಳನುಸುಳಿದ್ದಕ್ಕಾಗಿ ಜಪಾನ್ ಶುಕ್ರವಾರವಷ್ಟೇ ತೀವ್ರ ಟೀಕೆ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಸುಜುಕಿ ಈ ಹೇಳಿಕೆ ನೀಡಿದ್ದಾರೆ.

ವರದಿಗಳ ಪ್ರಕಾರ, ಗುರುವಾರ ಸಂಜೆ ಸೆಂಕಾಕು ದ್ವೀಪದ (ಬೀಜಿಂಗ್‌ ಈ ದ್ವೀಪವನ್ನು ದಿಯಾವು ಎಂದು ಕರೆಯುತ್ತದೆ) ಬಳಿ ಎರಡು ಚೀನಾ ಹಡಗುಗಳು ಜಲಗಡಿಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಜಪಾನ್‌ನ ಹಡಗಿನ ಬಳಿ ಈ ಹಡಗುಗಳು ಬಂದಿದ್ದವು ಎಂದು ಹೇಳಲಾಗಿದೆ.

ಶುಕ್ರವಾರ ಟೋಕಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಸುಗಾ, ಜಪಾನ್ ಮೀನುಗಾರಿಕೆ ಹಡಗಿನ ಸಮೀಪದ ಆಗಮಿಸದಂತೆ ಚೀನಾ ಹಡಗುಗಳನ್ನು ತಡೆಯಲಾಯಿತು ಮತ್ತು ತಕ್ಷಣವೇ ಇವು ಸೆಂಕಾಕು ದ್ವೀಪದ ಸಮೀಪದಿಂದ ವಾಪಸಾದವು ಎಂದಿದ್ದಾರೆ. “ಈ ಸನ್ನಿವೇಶವನ್ನು ನಾವು ಶಾಂತಿಯುತವಾಗಿ ಮತ್ತು ಗಂಭೀರವಾಗಿ ಪರಿಹರಿಸುವ ಪ್ರಕ್ರಿಯೆ ಮುಂದುವರಿಸಿದ್ದೇವೆ” ಎಂದು ಸುಗಾ ಹೇಳಿದ್ದಾರೆ.

ಜೂನ್ 22 ರ ನಂತರ ಇದೇ ಮೊದಲ ಬಾರಿಗೆ ಚೀನಾ ಹಡಗುಗಳು ಜಪಾನ್‌ನ ಜಲಗಡಿಯನ್ನು ಉಲ್ಲಂಘಿಸಿವೆ. ಇದಕ್ಕೂ ಮೊದಲು, ನಿರಂತರವಾಗಿ 80 ದಿನಗಳವರೆಗೆ ಈ ಪ್ರದೇಶಕ್ಕೆ ಚೀನಾ ಹಡಗುಗಳನ್ನು ಕಳುಹಿಸಿತ್ತು. ಚೀನಾ ಮತ್ತು ಜಪಾನ್‌ಗಳೆರಡೂ ಈ ದ್ವೀಪ ತಮ್ಮದು ಎಂದು ಹೇಳಿಕೊಳ್ಳುತ್ತವೆಯಾದರೂ, 2012 ರಿಂದಲೂ ಟೊಕಿಯೋದ ಆಡಳಿತದಲ್ಲಿ ಈ ದ್ವೀಪ ಇದೆ. ಇದರ ವ್ಯಾಪ್ತಿಯು ಐದು ನಿರ್ಜನ ದ್ವೀಪಗಳು ಮತ್ತು 800 ಚ. ಮೀ ಇಂದ 4.32 ಚ. ಕಿ.ಮೀವರೆಗಿನ ಮೂರು ಬಂಡೆಗಲ್ಲುಗಳು ಒಳಗೊಂಡಿವೆ. ಇತ್ತೀಚಿನ ದಿನಗಳಲ್ಲಿ ಈ ವಲಯದಲ್ಲಿ ಚೀನಾ ತೋರುತ್ತಿರುವ ವಸಾಹತುಶಾಹಿ ವರ್ತನೆಯ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ.

'ಈಟಿವಿ ಭಾರತ'ದ ಜೊತೆ ಮಾತನಾಡಿದ ಅಬ್ಸರ್ವರ್‌ ರೀಸರ್ಚ್‌ ಫೌಂಡೇಶನ್‌ನ ಹಿರಿಯ ಸಂಶೋಧಕ ಮತ್ತು ಜಪಾನ್ ಅಧ್ಯಯನದಲ್ಲಿ ಪ್ರಮುಖ ಭಾರತೀಯ ಚಿಂತಕ ಕೆ.ವಿ.ಕೇಶವನ್‌, ಈ ವಲಯದಲ್ಲಿ ಭಾರತ ಮತ್ತು ಜಪಾನ್ ವ್ಯೂಹಾತ್ಮಕ ಪಾಲುದಾರರು ಎಂಬ ಹಿನ್ನೆಲೆಯಲ್ಲಿ ಸುಜುಕಿ ಈ ಹೇಳಿಕೆಯನ್ನು ನಾವು ವ್ಯಾಖ್ಯಾನಿಸಬಹುದಾಗಿದೆ ಎಂದಿದ್ದಾರೆ. ಚೀನಾ ಕುರಿತು ನಾವು ವಿಪಕ್ಷೀಯವಷ್ಟೇ ಅಲ್ಲ, ಇತರ ವ್ಯೂಹಗಳಲ್ಲೂ ಭಾರತ ಮತ್ತು ಜಪಾನ್ ಸಮಾನ ಮನಸ್ಕತೆಯನ್ನು ಹೊಂದಿದೆ ಎಂದು ಕೇಶವನ್ ಹೇಳಿದ್ದಾರೆ.

2017 ರಲ್ಲಿ ಭಾರತ-ಭೂತಾನ್-ಚೀನಾ ಅಂತಾರಾಷ್ಟ್ರೀಯ ಗಡಿಯಾದ ಡೋಕ್ಲಾಂನಲ್ಲಿ 73 ದಿನಗಳವರೆಗೆ ಭಾರತ ಮತ್ತು ಚೀನಾ ಯೋಧರು ಸಂಘರ್ಷಕ್ಕಿಳಿದಿದ್ದಾಗಲೂ ಭಾರತದ ಪರವಾಗಿ ಇದೇ ರೀತಿಯ ಹೇಳಿಕೆಯನ್ನು ಆಗಿನ ಜಪಾನೀಸ್‌ ರಾಯಭಾರಿ ಕೆಂಜಿ ಹಿರಾಮತ್ಸು ಹೇಳಿದ್ದನ್ನು ಇಲ್ಲಿ ಅವರ ನೆನಪಿಸಿದ್ದಾರೆ. ಇದು ನಮ್ಮ ಪಾಲುದಾರಿಕೆಯ ಸ್ಪಷ್ಟ ಅಭಿವ್ಯಕ್ತಿ. ಪೂರ್ವ ಚೀನಾ ಸಮುದ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ನಾವು ಅಷ್ಟೇ ಸಹಾನುಭೂತಿ ಹೊಂದಿದ್ದೇವೆ ಎಂದು ಕೇಶವನ್‌ ಹೇಳಿದ್ದಾರೆ.

2014ರಲ್ಲಿ ಪೂರ್ವ ಏಷ್ಯಾ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ಭಾರತ ಮತ್ತು ಜಪಾನ್‌ ಸಂಬಂಧವು “ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆ” ಮಟ್ಟಕ್ಕೆ ಏರಿಕೆ ಕಂಡಿದೆ. ವಿಪಕ್ಷೀಯ ಸಂಬಂಧದ ಜೊತೆಗೆ, ಇಂಡೋ-ಪೆಸಿಫಿಕ್ ವಲಯದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನವದೆಹಲಿ ಮತ್ತು ಟೋಕಿಯೋ ಸಮಾನ ಕಾಳಜಿಯನ್ನು ಹೊಂದಿದೆ. ಇಂಡೋ-ಪೆಸಿಫಿಕ್ ವಲಯವು ಜಪಾನ್‌ನ ಪೂರ್ವ ಕರಾವಳಿಯಿಂದ ಆಫ್ರಿಕಾದ ಪೂರ್ವ ಕರಾವಳಿಯವರೆಗೆ ವ್ಯಾಪಿಸಿದೆ.

ಈ ವಲಯದಲ್ಲಿ ಭೌಗೋಳಿಕ ಏಕಸ್ವಾಮ್ಯವನ್ನು ಭಾರತ ಮತ್ತು ಜಪಾನ್ ಘೋಷಿಸುತ್ತಿದೆ ಮತ್ತು ಈ ಭೌಗೋಳಿಕ ವಿವಾದದಲ್ಲಿ ಯಾವ ದೇಶವೂ ಸೇನೆಯನ್ನು ಬಳಸಬಾರದು ಎಂಬ ನಿಲುವನ್ನು ಹೊಂದಿದ್ದೇವೆ. ನಾವು ಪರಸ್ಪರ ಚರ್ಚೆಯಲ್ಲಿ ನಂಬಿಕೆ ಇರಿಸಿದ್ದೇವೆ. ಸಮುದ್ರ ಗಡಿಯಲ್ಲಿ ನ್ಯಾವಿಗೇಶನ್‌ನ ಸ್ವಾತಂತ್ರ್ಯದಲ್ಲಿ ನಂಬಿಕೆ ಇರಿಸಿದ್ದೇವೆ ಎಂದು ಕೇಶವನ್ ಹೇಳಿದ್ದಾರೆ.

ಈ ಸಂಬಂಧದಲ್ಲಿ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ದುಸ್ಸಾಹಸವನ್ನು ಇನ್ನೊಂದು ಉದಾಹರಣೆ ಎಂದು ಅವರು ಉಲ್ಲೇಖಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಇತರ ದೇಶಗಳ ಜೊತೆಗೆ ಸ್ಪ್ರಾಟ್ಲೆ ಮತ್ತು ಪಾರಾಸೆಲ್‌ ದ್ವೀಪಗಳ ಕುರಿತ ವಿವಾದಲ್ಲಿ ತೊಡಗಿಸಿಕೊಂಡಿದೆ. ಸ್ಪ್ರಾಟ್ಲಿ ದ್ವೀಪಗಳನ್ನು ಬ್ರುನೈ, ಮಲೇಷ್ಯಾ ಮತ್ತು ಫಿಲಿಪೀನ್ಸ್, ತೈವಾನ್ ಮತ್ತು ವಿಯೆಟ್ನಾಂ ಕೂಡ ತನ್ನದು ಎಂದು ಹೇಳಿಕೊಳ್ಳತ್ತವೆ. ಪ್ಯಾರಾಸೆಲ್ ದ್ವೀಪಗಳನ್ನು ವಿಯೆಟ್ನಾಮ್ ಮತ್ತು ತೈವಾನ್ ತಮ್ಮದು ಎಂದು ಹೇಳಿಕೊಳ್ಳುತ್ತವೆ.

2016 ರಲ್ಲಿ ಹಾಗ್ ಮೂಲದ ಶಾಶ್ವತ ರಾಜಿ ನ್ಯಾಯಾಲಯವು ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪೀನ್ಸ್‌ನ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆದೇಶಿಸಿದೆ. ಈ ಸಮುದ್ರವು ವಿಶ್ವದಲ್ಲೇ ಅತ್ಯಂತ ಕಾರ್ಯನಿರತ ಶಿಪ್ಪಿಂಗ್ ಮಾರ್ಗವಿದೆ. ಫಿಲಿಪೀನ್ಸ್‌ನ ಮೀನುಗಾರಿಕೆ ಮತ್ತು ಪೆಟ್ರೋಲಿಯಂ ಉತ್ಖನನದಲ್ಲಿ ಚೀನಾ ಮಧ್ಯಪ್ರವೇಶಿಸಿದೆ, ಸಮುದ್ರದಲ್ಲಿ ಕೃತಕ ದ್ವೀಪವನ್ನು ನಿರ್ಮಿಸಿದೆ ಮತ್ತು ತನ್ನ ವಲಯದಲ್ಲೇ ಮೀನುಗಾರರು ಮೀನುಗಾರಿಕೆ ನಡೆಸುವಂತೆ ನಿರ್ಬಂಧಿಸುವಲ್ಲಿ ಚೀನಾ ವಿಫಲವಾಗಿದೆ ಎಂದು ಕೋರ್ಟ್‌ ಆದೇಶಿಸಿದೆ. ಆದರೂ, ಕಳೆದ ತಿಂಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಜಲಗಡಿ ನೀತಿಗಳನ್ನು ಚೀನಾ ಉಲ್ಲಂಘಿಸುತ್ತಿರುವುದಾಗಿ ವಿಯೆಟ್ನಾಂ ಮತ್ತು ಫಿಲಿಪೀನ್ಸ್‌ ಆರೋಪಿಸಿವೆ.

“ಇಡೀ ವಿಶ್ವವೇ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಮುಳುಗಿದ್ದರೆ, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಬೇಜವಾಬ್ದಾರಿಯಿಂದ ವರ್ತನೆ ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಇದು ಕೆಲವು ವಲಯಗಳನ್ನೇ ಆತಂಕಕ್ಕೆ ಸಿಲುಕಿಸಿದೆ” ಎಂದು ವಿಯೆಟ್ನಾಂ ಪ್ರಧಾನಿ ಎನ್‌ಗುಯೆನ್‌ ಫುವಾನ್ ಫುಕ್ ಆಗ್ನೇಯ ಏಷ್ಯಾ ದೇಶಗಳ ಸಂಘಟನೆ (ಆಸಿಯಾನ್) ನಾಯಕರ ವರ್ಚುವಲ್‌ ಮೀಟಿಂಗ್‌ನಲ್ಲಿ ಹೇಳಿದ್ದಾರೆ.

ರಾಯಭಾರಿ ಸುಜುಕಿ ಅವರ ಮಾತುಗಳೂ ಕೂಡ ಅಮೆರಿಕದ ಜೊತೆಗೆ ಭಾರತ ಹಾಗೂ ಜಪಾನ್ ಸಹಸಂಬಂಧದ ಮಹತ್ವವನ್ನು ಸೂಚಿಸುತ್ತವೆ. ಇಂಡೋ-ಪೆಸಿಫಿಕ್‌ನಲ್ಲಿ ಈ ಮೂರೂ ದೇಶಗಳು ಶಾಂತಿ ಮತ್ತು ಸೌಹಾರ್ದತೆಗೆ ಶ್ರಮಿಸುತ್ತಿವೆ. ಈ ವಲಯದಲ್ಲಿ ಬೀಜಿಂಗ್‌ನ ಹೆಚ್ಚುತ್ತಿರುವ ಹೆಜ್ಜೆಗುರುತುಗಳನ್ನು ಗಮನಿಸಿ ಈ ಕ್ರಮವು ಅತ್ಯಂತ ಪ್ರಮುಖ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಮುದ್ರ ಕಾನೂನುಗಳಿಗಾಗಿ ವಿಶ್ವಸಂಸ್ಥೆ ಕನ್ವೆನ್ಷನ್ (ಯುಎನ್‌ಸಿಎಲ್‌ಒಎಸ್) ಗೆ ಚೀನಾ ಬದ್ಧವಾಗಿರಬೇಕು ಎಂದಿರುವ ಕೇಶವನ್‌, ಪೂರ್ವ ಚೀನಾ ಸಮುದ್ರದಲ್ಲಿ ಸೆಂಕಾಕು ದ್ವೀಪದ ಮೇಲೆ ತಮ್ಮ ಸ್ವಾಮಿತ್ವವನ್ನು ಚೀನಾ ಹೇಗೆ ಸಾಧಿಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಚೀನಾ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿದೆ. ಕಾನೂನುಗಳಿಗೆ ಚೀನಾ ಬದ್ದವಾಗಿರಬೇಕು. ಲಡಾಖ್‌ನಲ್ಲೂ ಚೀನಾ ಇದೇ ರೀತಿಯ ಕಾನೂನು ಉಲ್ಲಂಘನೆಯನ್ನೇ ಮಾಡುತ್ತಿದೆ. ಹೀಗಾಗಿ ಜಪಾನ್‌ ನಮ್ಮ ಬೆಂಬಲಕ್ಕೆ ನಿಂತಿದೆ. ಡೋಕ್ಲಾಂ ವಿವಾದದ ಸಮಯದಲ್ಲೂ ಜಪಾನ್‌ನ ನಮ್ಮ ಬೆಂಬಲಕ್ಕೆ ಇದೇ ಕಾರಣಕ್ಕೆ ನಿಂತಿತ್ತು ಎಂದು ಕೇಶವನ್‌ ಹೇಳಿದ್ದಾರೆ.

ಅರುಣಿಮಾ ಭುಯಾನ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.