ETV Bharat / bharat

ದೇಶದಲ್ಲಿ ಕೋವಿಡ್​-19​​ ಸಮುದಾಯ ಪ್ರಸರಣ ಹಂತದಲ್ಲಿಲ್ಲ: ಕೇಂದ್ರ ಸ್ಪಷ್ಟನೆ - ಸಮುದಾಯ ಪ್ರಸರಣ

ದೇಶದಲ್ಲಿ ಕೊರೊನಾ ಹರಡುವಿಕೆಯು ಶೇ. 1ಕ್ಕಿಂತ ಕಡಿಮೆ ಇದೆ. ನಗರ ಪ್ರದೇಶಗಳು ಮತ್ತು ಹಲವು ಧಾರಕ ವಲಯ ಕಂಟೈನ್​​ಮೆಂಟ್​ ಝೋನ್​ಗಳಲ್ಲಿ ಪ್ರಕರಣದ ಪ್ರಮಾಣವು ಹೆಚ್ಚಾಗಿದೆ. ಆದರೆ ಸಮುದಾಯ ಪ್ರಸರಣ ಹಂತದಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ICMR
ಕೋವಿಡ್​-19
author img

By

Published : Jun 12, 2020, 6:07 AM IST

ನವದೆಹಲಿ: ಮುಂಬೈ ಮತ್ತು ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿದ್ದರೂ ಕೂಡ, ದೇಶದಲ್ಲಿ ಕೋವಿಡ್​-19​​ ಸಮುದಾಯ ಪ್ರಸರಣ ಹಂತದಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ದೇಶದಲ್ಲಿ ಕೊರೊನಾ ಹರಡುವಿಕೆಯು ಶೇ. 1ಕ್ಕಿಂತ ಕಡಿಮೆ ಇದೆ. ನಗರ ಪ್ರದೇಶಗಳು ಮತ್ತು ಹಲವು ಕಂಟೈನ್​​ಮೆಂಟ್​ ಝೋನ್​ಗಳಲ್ಲಿ ಪ್ರಕರಣದ ಪ್ರಮಾಣವು ಹೆಚ್ಚಾಗಿದೆ. ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು ಭಾರತವು ಸಮುದಾಯ ಪ್ರಸರಣ ಹಂತದಲ್ಲಿಲ್ಲ ಎಂದಿದ್ದಾರೆ.

ಲಾಕ್‌ಡೌನ್ ಮತ್ತು ಕಠಿಣ ಕ್ರಮಗಳು ದೇಶದಲ್ಲಿ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಸಿರೊ-ಸಮೀಕ್ಷೆಯಿಂದ ತಿಳಿದುಬಂದಿದೆ. ಸಿರೊ-ಸಮೀಕ್ಷೆಯು ಎರಡು ಭಾಗಗಳನ್ನು ಹೊಂದಿದೆ, ಮೊದಲನೆಯದು, ಸಾಮಾನ್ಯ ಪ್ರದೇಶಗಳಲ್ಲಿನ ಕೊರೊನಾ ಪ್ರಕರಣಗಳ ಬಗ್ಗೆ ತಿಳಿಸುತ್ತದೆ. ಹಾಗೆಯೇ ಎರಡನೆಯದು ಹಾಟ್​ಸ್ಪಾಟ್​​ ನಗರಗಳ ಕಂಟೈನ್​​ಮೆಂಟ್​​ ವಲಯಗಳಲ್ಲಿನ ಸೋಂಕಿನ ಪ್ರಮಾಣದ ಮಾಹಿತಿ ನೀಡುತ್ತದೆ ಎಂದು ಬಲರಾಮ್ ಭಾರ್ಗವ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೊದಲ ಭಾಗ ಪೂರ್ಣಗೊಂಡಿದೆ ಮತ್ತು ಎರಡನೆಯದು ನಡೆಯುತ್ತಿದೆ ಎಂದು ಅವರು ಹೇಳಿದರು, ರಾಜ್ಯ ಆರೋಗ್ಯ ಇಲಾಖೆಗಳು, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹಯೋಗದೊಂದಿಗೆ ಐಸಿಎಂಆರ್ ಈ ಸಮೀಕ್ಷೆಯನ್ನು ಮೇ ತಿಂಗಳಲ್ಲಿ ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಲಾಕ್‌ಡೌನ್ ಮತ್ತು ಅಗತ್ಯ ಕ್ರಮಗಳು ವೈರಸ್​​ ವೇಗವಾಗಿ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಸೋಂಕಿನ ಪ್ರಮಾಣ ಮತ್ತು ಹರಡುವಿಕೆ ತಡೆಯಲು ರಾಜ್ಯಗಳು ಕಂಟೈನ್​​ಮೆಂಟ್ ಝೋನ್​ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕು. ಪರಿಣಾಮಕಾರಿ ಕಣ್ಗಾವಲು ವ್ಯವಸ್ಥೆ ಮತ್ತು ನಿಯಂತ್ರಣ ತಂತ್ರಗಳನ್ನು ಅಗತ್ಯವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.