ETV Bharat / bharat

ವಿಶೇಷ ಅಂಕಣ: ಲಡಾಖ್‌ನಲ್ಲಿ ಭಾರತ-ಚೀನಾ ಬಿಕ್ಕಟ್ಟು... ಪರಿಸ್ಥಿತಿ ತಿಳಿಗೊಳಿಸಬಲ್ಲದೇ ಜಾಣ ನಡೆ?

author img

By

Published : May 27, 2020, 1:55 PM IST

ಪ್ಯಾಂಗ್ಯಾಂಗ್‌ ಸರೋವರದ ಉತ್ತರದ ದಂಡೆ ಮತ್ತು ಗಲ್ವಾನ್‌ ನದಿ ಕಣಿವೆ ಪ್ರದೇಶಗಳನ್ನೂ ಒಳಗೊಂಡಂತೆ ಪೂರ್ವ ಲಡಾಖ್‌ನ ಐದು ತಾಣಗಳಲ್ಲಿ 1200ರಿಂದ 1500 ಪಿಎಲ್‌ಎ ಸೈನಿಕರು ಭಾರತೀಯ ಸೇನೆಯ ಕಣ್ಣಲ್ಲಿ ಕಣ್ಣಿಟ್ಟು ನಿಂತಿದ್ದಾರೆ ಎಂದಷ್ಟೇ ಮಾಧ್ಯಮದಲ್ಲಿ ವರದಿಯಾಗಿದೆ.

INDIA-CHINA STAND OFF
ಲಡಾಖ್‌ನಲ್ಲಿ ಭಾರತ-ಚೀನಾ ಬಿಕ್ಕಟ್ಟು

ಹೈದರಾಬಾದ್: ಹಲವಾರು ಸಂಕೀರ್ಣ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಈಗ ಎದ್ದು ಕಾಣುವ ರೀತಿ ಉಲ್ಬಣಿಸಿದ್ದು ಉಭಯ ದೇಶಗಳ ನಡುವೆ ಒತ್ತಡ ಹಾಗೂ ಪ್ರಯಾಸದಾಯಕ ವಾತಾವರಣ ಉಂಟು ಮಾಡಿದೆ. ಇಡೀ ಬೆಳವಣಿಗೆ “ಕ್ಷೇತ್ರೀಯ” ವಿಷಯ ಕುರಿತಾಗಿದ್ದು, 4,000 ಕಿಮೀ ಉದ್ದದ ಹಾಗೂ ಇದುವರೆಗೆ ಗುರುತಿಸಿರದ ವಾಸ್ತವ ನಿಯಂತ್ರಣ ಗಡಿ ರೇಖೆಗೆ (ಎಲ್‌ಒಸಿ – ಲೈನ್‌ ಆಫ್‌ ಆಕ್ಚುಯಲ್‌ ಕಂಟ್ರೋಲ್)‌ ಸಂಬಂಧಿಸಿದ ಜಿದ್ದಿನ ವಿಷಯಗಳನ್ನು ಇದು ಒಳಗೊಂಡಿದೆ.

ಪ್ಯಾಂಗ್ಯಾಂಗ್‌ ಸರೋವರದ ಉತ್ತರದ ದಂಡೆ ಮತ್ತು ಗಲ್ವಾನ್‌ ನದಿ ಕಣಿವೆ ಪ್ರದೇಶಗಳನ್ನೂ ಒಳಗೊಂಡಂತೆ ಪೂರ್ವ ಲಡಾಖ್‌ನ ಐದು ತಾಣಗಳಲ್ಲಿ 1200ರಿಂದ 1500 ಪಿಎಲ್‌ಎ ಸೈನಿಕರು ಭಾರತೀಯ ಸೇನೆಯ ಕಣ್ಣಲ್ಲಿ ಕಣ್ಣಿಟ್ಟು ನಿಂತಿದ್ದಾರೆ ಎಂದಷ್ಟೇ ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ, ಮಾಮೂಲು ಸಂದರ್ಭಗಳಲ್ಲಿ ಇದ್ದುದಕ್ಕಿಂತ ಹೆಚ್ಚಿನ ಪ್ರಮಾಣದ ಸೇನಾ ಜಮಾವಣೆ ಎಲ್‌ಒಸಿಯ ಇಕ್ಕೆಲದಲ್ಲಿಯೂ ಕಂಡು ಬರುತ್ತಿರುವದು ವಾಸ್ತವದ ಬೆಳವಣಿಗೆ.

ಹೀಗಿದ್ದರೂ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಚೀನಾ ಆಗಲಿ, ಭಾರತವಾಗಲಿ ಕೆರಳಿಸುವಂತಹ ಅಥವಾ ಅತಿರೇಕವಾಗುವಂತಹ ಯಾವುದೇ ಅಧಿಕೃತ ಹೇಳಿಕೆಯನ್ನು ಇದುವರೆಗೆ ನೀಡದಿರುವ ಮೂಲಕ ಸಂಯಮದ ನಡವಳಿಕೆಯನ್ನು ಪ್ರದರ್ಶಿಸಿವೆ. ಆದರೆ, ಈ ಜಾಣ ಮತ್ತು ಸಂಯಮದ ನಡೆಯು ಸದ್ಯದ ತ್ವೇಷಮಯ ಪರಿಸ್ಥಿತಿಯನ್ನು ಹಂತಹಂತವಾಗಿ ಶಮನಗೊಳಿಸಬಲ್ಲುದೆ..?

ಈ ರಾಜಕೀಯ ಮತ್ತು ಸೈನಿಕ ವೈಷಮ್ಯದ ನಡುವೆಯೇ, ಕೋವಿಡ್‌ 19 ದಿಗ್ಬಂಧನದಿಂದಾಗಿ ಭಾರತದಲ್ಲಿ ಸಿಲುಕಿಕೊಂಡಿರುವ ತನ್ನ ನಾಗರಿಕರನ್ನು ಮುಂದಿನ ವಾರ – ಅಂದರೆ ಜೂನ್‌ ಪ್ರಾರಂಭದಲ್ಲಿ, “ವಾಪಾಸ್‌ ಕರೆತರುವುದಾಗಿ” ಬೀಜಿಂಗ್‌ ಘೋಷಿಸಿದೆ. ಲಕ್ಷಗಟ್ಟಲೇ ಚೀನಿ ನಾಗರಿಕರು ಜಗತ್ತಿನ ವಿವಿಧೆಡೆ ದಿಗ್ಬಂಧನದಲ್ಲಿ ಸಿಲುಕಿಕೊಂಡಿದ್ದರೂ, ಭಾರತದಲ್ಲಿರುವ ತನ್ನ ಕೆಲವು ಸಾವಿರ ನಾಗರಿಕರನ್ನಷ್ಟೇ ವಾಪಾಸ್‌ ಕರೆದೊಯ್ಯುವುದಾಗಿ ಚೀನಾ ಹೇಳಿರುವುದು ಉದ್ದೇಶಪೂರ್ವಕ ಹಾಗೂ ಏಕೋದ್ದೇಶದ ನಡೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಈ ಹಿನ್ನೆಲೆಯಲ್ಲಿ, ಜಗತ್ತಿನ ಎರಡು ಬೃಹತ್‌ ದೇಶಗಳ (ಜನಸಂಖ್ಯಾ ದೃಷ್ಟಿಯಿಂದ ಮಾತ್ರ) ನಡುವಿನ ಈ ದ್ವಿಪಕ್ಷೀಯ ಸಂಬಂಧಗಳ ನಡುವೆ ಅಸಂಗತತೆ ಮತ್ತು ಭಿನ್ನಾಭಿಪ್ರಾಯಗಳ ಯುಕ್ತಾಯುಕ್ತತೆಯನ್ನು ಮೊದಲು ಪರಾಮರ್ಶಿಸುವ ಅವಶ್ಯಕತೆಯಿದೆ. ಏಕೆಂದರೆ, ಎರಡೂ ದೇಶಗಳ ನಡುವಿನ ಘಟನಾವಳಿಗಳನ್ನು ಪ್ರಚೋದಿಸಿರುವ ಈ ಬಿಕ್ಕಟ್ಟು ಮತ್ತು ನಿಕಟ ಭವಿಷ್ಯದಲ್ಲಿ ಅದು ಅನಾವರಣಗೊಳಿಸಬಹುದಾದ ಸನ್ನಿವೇಶಗಳನ್ನು ಈ ಸಂದರ್ಭದಲ್ಲಿ ಪರಿಗಣಿಸಬೇಕಿದೆ.

ಭಾರತ ಮತ್ತು ಚೀನಾ ಸ್ವಾತಂತ್ರ್ಯ ಪಡೆದಿದ್ದು ಕ್ರಮವಾಗಿ 1947 ಹಾಗೂ 1949ರಲ್ಲಿ. ಎರಡೂ ದೇಶಗಳು ಸಾಮ್ರಾಜ್ಯಗಳು ಹಾಗೂ ಪ್ರಾಚೀನ ನಾಗರಿಕತೆಯ ಪರಂಪರೆಯನ್ನು ಹೊಂದಿರುವಂಥವು. ಆಧುನಿಕ ದೇಶದ ದೃಷ್ಟಿಯಿಂದ ಎರಡೂ ದೇಶಗಳು ಇನ್ನೂ ಎಳೆಯ ವಯಸ್ಸಿನಲ್ಲಿರುವಂಥವು. ವಸಾಹತುಶಾಹಿ ಆಡಳಿತದಿಂದಾಗಿ 19ನೇ ಶತಮಾನದಲ್ಲಿ ಎರಡೂ ದೇಶಗಳಲ್ಲಿ ಅವುಗಳದೇ ಆದ ಗಡಿ ವಿಂಗಡಣೆ ನಡೆಯಿತು. ವಸಾಹತುಶಾಹಿಯ ಒತ್ತಡದಿಂದಾಗಿ ಭಾರತ ಮತ್ತು ಚೀನಾ ನಡುವೆ ಕೆಲವು ಗಡಿಗಳು ನಿರ್ಮಾಣವಾಗಿದ್ದರೆ, ಇದರ ಪರಿಣಾಮವಾಗಿ ಪರಸ್ಪರ ಸಮ್ಮತಿಯಿಂದ ಉಂಟಾಗಿರುವ ಗಡಿಗಳು ಈಗಲೂ ಅಗೋಚರವಾಗಿಯೇ ಇವೆ.

ಸಂಕೀರ್ಣ ಗಡಿ ವಿವಾದದ ಕಾರಣಕ್ಕಾಗಿ ಉಭಯ ದೇಶಗಳು1962ರ ಅಕ್ಟೋಬರ್‌ನಲ್ಲಿ ಕಿರು ಅವಧಿಯ ಯುದ್ಧ ನಡೆಸಿದ್ದು, ಯಾವುದೇ ಒಪ್ಪಂದವಿಲ್ಲದೇ ಅದು ಅಂತ್ಯಗೊಂಡಿತ್ತು. ಅದಾದ ಬಹುತೇಕ ಏಳು ದಶಕಗಳ ನಂತರವೂ ಅದೇ ಅಸಹಜ ನಿಷ್ಕ್ರಿಯ ಪರಿಸ್ಥಿತಿ ಹಾಗೇ ಮುಂದುವರಿದಿದೆ. ಹೀಗಾಗಿ ಎರಡೂ ದೇಶಗಳು ಕಾಲ್ಪನಿಕವಾಗಿ ಎಲ್‌ಒಎಸಿ (ಲೈನ್‌ ಆಫ್‌ ಆಕ್ಚುವಲ್‌ ಕಂಟ್ರೋಲ್‌) - ವಾಸ್ತವ ನಿಯಂತ್ರಣ ಗಡಿ ರೇಖೆಯನ್ನು ಹೊಂದಿವೆ. ಇದರ ಜೊತೆಗೆ ಎರಡೂ ದೇಶಗಳು ಹೇಳಿಕೊಳ್ಳುವ ಗಡಿ ರೇಖೆಯೊಂದಿದ್ದು, ಆಯಾ ದೇಶಗಳ ಸೇನೆಗಳು ಗಸ್ತು ತಿರುಗಬಹುದಾದ ಮಿತಿಯನ್ನು ಅದು ಒಳಗೊಂಡಿದೆ. ಹೀಗಾಗಿ ಒಂದು ಸಿಸಿಎಲ್‌ – ಚೈನೀಸ್‌ ಕ್ಲೇಮ್‌ ಲೈನ್‌ (ಚೀನಾ ಹೇಳಿಕೊಳ್ಳುವ ಗಡಿ ರೇಖೆ) ಹಾಗೂ ಭಾರತ ಹೇಳಿಕೊಳ್ಳುವಂತಹ ಇನ್ನೊಂದು ಗಡಿ ರೇಖೆ ಉದ್ಭವಿಸಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ಹಿಂದೆ ಉಭಯ ದೇಶಗಳು ಹೇಳಿಕೊಳ್ಳುವ ಗಡಿ ರೇಖೆಯೊಂದು ಅಂತಿಮ ರಾಜಕೀಯ ನಿಲುವಳಿಗಾಗಿ ಕಾಯುತ್ತಿದೆಯಾದರೂ – ವಾಸ್ತವ ಪರಿಸ್ಥಿತಿ ಮಾತ್ರ ಪೂರ್ತಿ ಭಿನ್ನವಾಗಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆಯ ಇಕ್ಕೆಲದಲ್ಲಿ ಉಭಯ ದೇಶಗಳು ನಡೆಸುವ ಹಕ್ಕಿನ ಪಹರೆಯು ಈ ಹಿಂದೆ ಹಲವಾರು ಸಲ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದ್ದು, ಎರಡೂ ದೇಶಗಳ ನಡುವೆ ಒಪ್ಪಂದವೊಂದನ್ನು ತಂದಿದೆ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಒಪ್ಪಂದಕ್ಕೆ ಸಮ್ಮತಿ ಸಿಕ್ಕಿತ್ತು ಹಾಗೂ ನಂತರ ಪಿ.ವಿ. ನರಸಿಂಹರಾವ್‌ ಅವರ ಪ್ರಧಾನಮಂತ್ರಿ ಅವಧಿಯಲ್ಲಿ ಅದಕ್ಕೆ ಔಪಚಾರಿಕ ರೂಪು ಸಿಕ್ಕಿತು. ಹೀಗಾಗಿ, ವಾಸ್ತವ ಗಡಿ ನಿಯಂತ್ರಣ ರೇಖೆಯ ಎರಡೂ ಕಡೆ, ಕಣ್ಣಳತೆ ದೂರದಲ್ಲಿಯೇ ಗಣನೀಯ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಲಾಗಿದ್ದರೂ – ಸಿಟ್ಟಿಗೆದ್ದು ಒಂದೇ ಒಂದು ಗುಂಡು ಹಾರಿದ ಘಟನೆ ಕಳೆದ ೨೫ ವರ್ಷಗಳಲ್ಲಿ ಒಮ್ಮೆಯೂ ಸಂಭವಿಸಿಲ್ಲ. ಕಳೆದ ಒಂದು ದಶಕದಲ್ಲಿ ಮೂರು ಪ್ರಮುಖ ಸೈನಿಕ ಉದ್ವೇಗದ ಘಟನೆಗಳು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ – ದೆಪ್ಸಾಂಗ್‌ (2013) ಚುಮರ್‌ (2014) ಮತ್ತು ದೊಕ್ಲಮ್‌ (2017) ವಲಯದಲ್ಲಿ ನಡೆದಿದ್ದವು. ಆದರೆ, ಪ್ರತಿಯೊಂದು ಘಟನೆಯೂ ರಾಜಕೀಯ-ರಾಜತಾಂತ್ರಿಕ ದಾರಿಯಲ್ಲಿ ಇತ್ಯರ್ಥವಾಗಿತ್ತು.

ಭಾರತದಲ್ಲಿ ವರದಿಯಾದ ಪ್ರಸಕ್ತ ಘಟನಾವಳಿಗಳನ್ನು ಕಾಲಾನುಕ್ರಮದಲ್ಲಿ ನೋಡುವುದಾದರೆ, ಏಪ್ರಿಲ್‌ ಮೂರನೇ ವಾರದಲ್ಲಿ ಪಿಎಲ್‌ಎ ಸೈನಿಕರು ಲಡಾಖ್‌ನಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ, ಎದ್ದು ಕಾಣದ ರೀತಿ (?) ತಮ್ಮ ಠಾಣ್ಯಗಳನ್ನು ಬಲಪಡಿಸಿಕೊಳ್ಳುತ್ತಿದ್ದರು. ಆದರೆ, ಇದು ಭಾರತದ ಗಮನಕ್ಕೆ ಬಂದಿದ್ದು ತೀರಾ ಇತ್ತೀಚೆಗಷ್ಟೇ. ಮೇ ತಿಂಗಳ ಪ್ರಾರಂಭದಲ್ಲಿ, ಪಿಎಲ್‌ಎ ಸೈನ್ಯದ ಹಠಾತ್‌ ದಾಳಿ ಮತ್ತು ಅತಿಕ್ರಮಣವು ಇತರ ತಾಣಗಳಿಗೂ ಹರಡಿತಲ್ಲದೇ ಪಿಎಲ್‌ಎ ಸೈನಿಕರ ಸಂಖ್ಯೆ ೫೦೦೦ಕ್ಕಿಂತ ಹೆಚ್ಚಾಯಿತು. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ಪಿಎಲ್‌ಎ ಸೈನಿಕರ ಪ್ರಮಾಣದಷ್ಟೇ ಸೈನ್ಯವನ್ನು ನಿಯೋಜಿಸುವ ಮೂಲಕ ಪರಿಸ್ಥಿತಿ ಈಗ ಗಡುಸಾಗಿ ಪರಿಣಮಿಸಿದೆ.

ಪ್ರಸಕ್ತ ಬಿಕ್ಕಟ್ಟು ಪ್ರಮಾಣ ಹಾಗೂ ಗುಣಮಟ್ಟದ ದೃಷ್ಟಿಯಿಂದ ಭಿನ್ನವಾಗಿ ಕಾಣುತ್ತಿದ್ದು, ಸಾರಾಂಶ ರೂಪದಲ್ಲಿ ಹೇಳುವುದಾದರೆ – ಪೂರ್ವ ಲಡಾಖ್‌ನ ಹಲವಾರು ಸ್ಥಳಗಳಲ್ಲಿ ಅತಿಕ್ರಮಣ ಮಾಡಿರುವ ಚೀನಾದ ಸೈನಿಕರ ಸಂಖ್ಯೆ ಈ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಇದು ಸೂಚಿಸುತ್ತದೆ.

ಗುಣಾತ್ಮಕ ನಿಲುವಿನ ದೃಷ್ಟಿಯಿಂದ ನೋಡುವುದಾದರೆ, ವಾಸ್ತವ ಗಡಿ ನಿಯಂತ್ರಣ ರೇಖೆಯ ೪೮೯ ಕಿಮೀಗಳನ್ನು ಹೊಂದಿರುವ ಲಡಾಖ್‌ನ ಯಾವ ಪ್ರದೇಶ / ತಾಣದಲ್ಲಿ ಈ ನಿಯೋಜನೆ ನಡೆದಿದೆ ಹಾಗೂ ಯಾವ ರೀತಿಯಲ್ಲಿ ನಡೆದಿದೆ ಎಂಬುದು ಗಮನಾರ್ಹ. ಉದಾಹರಣೆಗೆ ಹೇಳುವುದಾದರೆ, ಐತಿಹಾಸಿಕವಾಗಿ ದಶಕಗಳ ಕಾಲ ಈ ರೀತಿಯ ಯಾವ ಅತಿಕ್ರಮಣವಾಗಲಿ / ಪಹರೆಯಾಗಲಿ ನಡೆದಿರದ ಗಲ್ವನ್‌ ಕಣಿವೆಯಲ್ಲಿ, ಈ ವರ್ಷದ ಏಪ್ರಿಲ್‌ ತಿಂಗಳಿನಿಂದ ಹಲವಾರು ಸಲ ಹಠಾತ್‌ ದಾಳಿಗಳು ನಡೆದಿವೆ. ಸ್ಥಳೀಯ ಸೈನ್ಯ ಸಾಮಾನ್ಯವಾಗಿ ನಿತ್ಯ ನಡೆಸುವ ವಾಡಿಕೆಯ ವ್ಯೂಹಾತ್ಮಕ ನಡೆಗಿಂತ ಭಿನ್ನವಾದ ದಾಳಿ ಇದಾಗಿದ್ದು, ಉನ್ನತ ಮಟ್ಟದ ಕಾರ್ಯತಂತ್ರ ಇದರ ಹಿಂದಿದೆ ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ. ದಾಖಲೆಗಾಗಿ ಹೇಳುವುದಾದರೆ, ಇಡೀ ವಾಸ್ತವ ಗಡಿ ನಿಯಂತ್ರಣ ರೇಖೆಯದ್ದಕ್ಕೂ ವಾರ್ಷಿಕ ೬೦೦ಕ್ಕೂ ಹೆಚ್ಚು ಇಂತಹ ಹಠಾತ್‌ ದಾಳಿಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ, ಪ್ರಸಕ್ತ ಬಿಕ್ಕಟ್ಟು “ಗಂಭೀರ” ಪರಿಸ್ಥಿತಿ ತಳೆಯುವ ಎಲ್ಲಾ ಸಾಧ್ಯತೆಗಳಿದ್ದು, ತಕ್ಷಣದ ರಾಜಕೀಯ ನಿರ್ಧಾರವೊಂದನ್ನು ಕೈಗೊಳ್ಳಬೇಕಿದೆ. ಚೀನಾದ ಈ ನಡೆಯ ಹಿಂದಿನ ತರ್ಕ ಅಸ್ಪಷ್ಟವಾಗಿದೆ. ನನ್ನ ಅನಿಸಿಕೆ ಏನೆಂದರೆ, ಒಂದು ದೇಶ ಅಥವಾ ಉಭಯ ದೇಶಗಳು ನಡೆಸುತ್ತಿರುವ ಆಕ್ರಮಣಕಾರಿ ಗಸ್ತು, ಹೆಚ್ಚಿರುವ ಮೂಲಸೌಕರ್ಯಗಳು / ಇನ್ನೊಂದು ಕಡೆಯವರ ಸೈನ್ಯದ ನಿಯೋಜನೆಗಳನ್ನು ಗುರುತಿಸಲು ನಡೆಸಿರುವ ಹೆಚ್ಚಿನ ಪ್ರಮಾಣದ ಕಣ್ಗಾವಲು ಕ್ರಮಗಳು ಪ್ರಸಕ್ತ ಪರಿಸ್ಥಿತಿ ಉಲ್ಬಣಿಸಲು ಪ್ರೇರಕ ಅಂಶಗಳಾಗಿರುವ ಸಾಧ್ಯತೆಯಿದೆ. ಏಕೆಂದರೆ, ಇವ್ಯಾವನ್ನೂ ಈ ಮುಂಚೆ ಯಾರೂ ಗಮನಿಸಿರಲಿಲ್ಲ.

ಇದಕ್ಕೂ ಹೆಚ್ಚಾಗಿ, ಆಸಿಯನ್‌ ದೇಶಗಳೊಂದಿಗೆ ಸಂಪರ್ಕ ಹೊಂದಿರುವ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಅಥವಾ ಭಾರತದೊಂದಿಗಿನ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚುತ್ತಿರುವ ಪಿಎಲ್‌ಎ ಸೈನ್ಯದ ಆಕ್ರಮಣಶೀಲತೆಯ ಕೆಲವು ವಿಧಾನಗಳು ನಿರ್ದಿಷ್ಟವಾಗಿವೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಡಳಿತದಲ್ಲಿ ಚೀನಾದ “ಪ್ರಾದೇಶಿಕತೆ” ಪಾವಿತ್ರ್ಯತೆಗೆ ಬೀಜಿಂಗ್‌ ಹೆಚ್ಚಿನ ಗಮನ ಹರಿಸಿದ್ದು ತೈವಾನ್‌ಗೆ ಸಂಬಂಧಿಸಿದಂತೆ ಇದು ಹೆಚ್ಚು ತೀವ್ರವಾಗಿ ಕಂಡು ಬರುತ್ತಿದೆ.

ಪ್ರಸಕ್ತ ಬಿಕ್ಕಟ್ಟು ಇನ್ನೂ ಉನ್ನತ ಮಟ್ಟದ ಸೈನಿಕ ಉದ್ವೇಗಕ್ಕೆ ಕಾರಣವಾಗುತ್ತದೋ ಇಲ್ಲವೋ ಎಂಬುದು ಇದುವರೆಗೆ ಅಸ್ಪಷ್ಟ. ಪ್ರಾದೇಶಿಕ “ಅತಿಕ್ರಮಣ” ರೀತಿ ಕುರಿತಂತೆ ಉಭಯ ದೇಶಗಳು ತಮ್ಮವೇ ಆದ ವಿವರಣೆಗಳನ್ನು ಹೊಂದಿದ್ದು, ಭಾವನಾತ್ಮಕ ರಾಷ್ಟ್ರೀಯತೆ, ದೃಶ್ಯ – ‍ಶ್ರಾವ್ಯ ಮಾಧ್ಯಮಗಳಲ್ಲಿ ಕಂಡುಬರುತ್ತಿರುವ ಅಬ್ಬರದ ಪ್ರಚಾರ ಹಾಗೂ ಸಾಮಾಜಿಕ ತಾಣಗಳ ಯೋಧರ ಹೇಳಿಕೆಗಳ ಮೂಲಕ ತೀವ್ರ ಉತ್ತುಂಗತೆಗೆ ಏರಿದ್ದು, ಇದರಿಂದ ಪರಿಸ್ಥಿತಿ ಇನ್ನಷ್ಟು ತ್ವೇಷಮಯವಾಗಬಹುದು.

ಉಭಯ ದೇಶಗಳ ರಾಜಕೀಯ ಪರಾಕಾಷ್ಠತೆಗೆ ಕೋವಿಡ್‌ 19 ಸಾಂಕ್ರಾಮಿಕ ರೋಗವು ಗಂಭೀರ ಸವಾಲನ್ನು ಒಡ್ಡಿರುವ ಈ ಸಂದರ್ಭದಲ್ಲಿ, ಎರಡೂ ದೇಶಗಳು ದೂರದೃಷ್ಟಿ ಮತ್ತು ಸಂಯಮವನ್ನು ಪ್ರದರ್ಶಿಸುವ ನಿರೀಕ್ಷೆ ಇದೆ.

-ಸಿ. ಉದಯ ಭಾಸ್ಕರ, ನಿರ್ದೇಶಕ, ಸೊಸೈಟಿ ಫಾರ್‌ ಪಾಲಿಸಿ ಸ್ಟಡೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.