ETV Bharat / bharat

ಚೀನಾ ಆ್ಯಪ್‌ ಬ್ಯಾನ್​: ಇದು ಭಾರತೀಯರ ಡೇಟಾ ರಕ್ಷಿಸುವ 'ಡಿಜಿಟಲ್ ಸ್ಟ್ರೈಕ್' ಎಂದ ಸಚಿವರು - ಚೀನಾ ಆ್ಯಪ್‌ ಬ್ಯಾನ್​

ನಮ್ಮ ದೇಶವು 20 ಯೋಧರನ್ನು ಕಳೆದುಕೊಂಡಿದ್ದರೆ, ಇದಕ್ಕೂ ದುಪ್ಪಟ್ಟು ಚೀನಾ ಸೈನಿಕರು ಬಲಿಯಾಗಿದ್ದಾರೆ. ಇದೀಗ ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದು ಭಾರತದ ಡಿಜಿಟಲ್ ಸ್ಟ್ರೈಕ್ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

RS Prasad
ರವಿಶಂಕರ್ ಪ್ರಸಾದ್
author img

By

Published : Jul 2, 2020, 5:16 PM IST

ನವದೆಹಲಿ: ದೇಶವಾಸಿಗಳ ಡೇಟಾವನ್ನು ರಕ್ಷಿಸಲು ಚೀನಾದ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಇದೊಂದು ಡಿಜಿಟಲ್ ಸ್ಟ್ರೈಕ್ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಸಚಿವರು, ಭಾರತ ಶಾಂತಿಯನ್ನು ಬಯಸುತ್ತದೆ. ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದರ ಮೇಲೆ ಯಾರಾದರೂ ವಕ್ರದೃಷ್ಟಿ ಹಾಕಿದರೆ, ಅದಕ್ಕೆ ತಕ್ಕ ಉತ್ತರ ನೀಡುತ್ತದೆ. ನಮ್ಮ ದೇಶವು 20 ಯೋಧರನ್ನು ಕಳೆದುಕೊಂಡಿದ್ದರೆ, ಇದಕ್ಕೂ ದುಪ್ಪಟ್ಟು ಚೀನಾ ಸೈನಿಕರನ್ನು ಬೇಟೆಯಾಡಿದ್ದಾರೆ. ಇದೀಗ ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದನ್ನು ಭಾರತದ ಡಿಜಿಟಲ್ ಸ್ಟ್ರೈಕ್ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ವರ್ಚುವಲ್​ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ವಿಚಿತ್ರ ಬೆಳವಣಿಗೆಗಳು ಕಂಡುಬರುತ್ತಿದೆ. ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚೀನಾದ ಆ್ಯಪ್‌ಗಳ ನಿಷೇಧವನ್ನು ವಿರೋಧಿಸುತ್ತಿದೆ. ಈ ಹಿಂದೆ ಯಾಕೆ ಆ್ಯಪ್‌ಗಳನ್ನು ನಿಷೇಧಿಸುತ್ತಿಲ್ಲ ಎಂದು ಕೇಳಿತ್ತು. ಈಗ ಯಾಕೆ ಬ್ಯಾನ್​ ಮಾಡಿದ್ದೀರಿ ಎಂದು ಕೇಳುತ್ತಿದೆ. ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಯಾಕೆ ಟಿಎಂಸಿ ಕೈಜೋಡಿಸುತ್ತಿಲ್ಲ? ಎಂದು ಮಮತಾ ಬ್ಯಾನರ್ಜಿ ಸರ್ಕಾರವನ್ನು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.