ETV Bharat / bharat

ಸೋಂಕು ಹರಡುವಿಕೆ 2ನೇ ಹಂತದಲ್ಲಿ ಭಾರತ: ಕಟ್ಟೆಚ್ಚರ ಅಗತ್ಯ - ಭಾರತೀಯ ವೈದ್ಯಕೀಯ ಮಂಡಳಿ

ಪ್ರಪಂಚದಾದ್ಯಂತ ಬಹುತೇಕ ರಾಷ್ಟ್ರಗಳು ಸ್ತಬ್ಧವಾಗುವಂತೆ ಮಾಡಿರುವ ಕೊರೊನಾ ವೈರಸ್ ದೇಶದ ಜನಜೀವನದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರಿದೆ.

India at stage 2 of COVID 19 Pandemic,ಹರಡುವಿಕೆಯ 2ನೇ ಹಂತದಲ್ಲಿ ಭಾರತ
ಹರಡುವಿಕೆಯ 2ನೇ ಹಂತದಲ್ಲಿ ಭಾರತ
author img

By

Published : Mar 21, 2020, 2:10 PM IST

ಹೈದರಾಬಾದ್: ಕೊರೊನಾ ವೈರಸ್ ಪ್ರಪಂಚದ ಜನರ ಜೀವನವನ್ನು ತೀವ್ರವಾಗಿ ಬಾಧಿಸಿದೆ. ಜನರು ಈಗಾಗಲೇ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುತ್ತಿದ್ದು(Social Distancing) ಮಾರಣಾಂತಿಕ ವೈರಸ್​ನಿಂದ ದೂರವಿರಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

India at stage 2 of COVID 19 Pandemic,ಹರಡುವಿಕೆಯ 2ನೇ ಹಂತದಲ್ಲಿ ಭಾರತ
ಕೊರೊನಾ ವೈರಸ್ ಹರಡುವಿಕೆಯ ಹಂತಗಳು

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅನುಮತಿಸಿವೆ. ಇದೀಗ ಪ್ರತಿಯೊಬ್ಬರಿಗೂ ಆರೋಗ್ಯವೇ ಮೊದಲ ಆದ್ಯತೆಯಾಗಿದೆ. ಈ ನಡುವೆ ಭಾರತವು ಕೊರೊನಾ ಸಾಂಕ್ರಾಮಿಕ ರೋಗದ 2ನೇ ಹಂತದಲ್ಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಕೊರೊನಾ ವೈರಸ್ ಹರಡುವಿಕೆಯನ್ನು ಭಾರತೀಯ ವೈದ್ಯಕೀಯ ಮಂಡಳಿ ನಾಲ್ಕು ಹಂತಗಳಾಗಿ ವಿಂಗಡಿಸಿದೆ. ಮೊದಲ ಹಂತವು ವಿದೇಶದಿಂದ ಪ್ರಯಾಣ ಮಾಡಿದವ ಇತಿಹಾಸವನ್ನು ಹೊಂದಿರುವ ಜನರಲ್ಲಿ ಸೋಂಕು ಪತ್ತೆಯಾಗುವುದು. ಇತರ ದೇಶಗಳಿಂದ ಬಂದವರಲ್ಲಿ ಅಥವಾ ವಿದೇಶ ಪ್ರವಾಸ ಮಾಡಿದ ಜನರು ಸೋಂಕಿಗೆ ತುತ್ತಾಗುವುದು.

ಎರಡನೇ ಹಂತ ಎಂದರೆ ಸೋಂಕಿತ ವ್ಯಕ್ತಿಯಿಂದ ಸ್ಥಳೀಯರಿಗೆ ವೈರಸ್ ಹರಡುವುದು. ವಿದೇಶದಿಂದ ಆಗಮಿಸಿದ ಸೋಂಕಿತ ವ್ಯಕ್ತಿ ಜೊತೆ ಸಂಪರ್ಕ ಬೆಳೆಸಿದ ಇತರೆ ವ್ಯಕ್ತಿಗಳಿಗೆ ಸೋಂಕು ಹರಡುವುದು ಎರಡನೇ ಹಂತ. ಸದ್ಯ ಭಾರತ ಈ ಹಂತದಲ್ಲಿದೆ.

ವೈರಸ್ ಹರಡುವಿಕೆಯು ಸಮುದಾಯ ಹಂತದಲ್ಲಿ ಪ್ರಾರಂಭವಾಗುತ್ತದೆ. ವ್ಯಕ್ತಿಯು ಸೋಂಕಿತ ವ್ಯಕ್ತಿ ಜೊತೆ ಸಂಪರ್ಕಕ್ಕೆ ಬಾರದಿದ್ದರೂ ಅಥವಾ ವೈರಸ್ ಪೀಡಿತ ದೇಶಕ್ಕೆ ಪ್ರಯಾಣಿಸದಿದ್ದರೂ ಸಹ ಕೊರೊನಾ ಸೋಂಕು ಪತ್ತೆಯಾಗುವುದು. ಈ ಹಂತದಲ್ಲಿ ವೈರಸ್‌ನ ಮೂಲವನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಇಟಲಿ, ಚೀನಾ ಮತ್ತು ಫ್ರಾನ್ಸ್ 3ನೇ ಹಂತದಲ್ಲಿವೆ.

ಸಾಂಕ್ರಾಮಿಕ ರೋಗವು ಕೊರೊನಾ ವೈರಸ್​ನ ಕೊನೆಯ ಮತ್ತು ಅಂತಿಮ ಹಂತವಾಗಿದೆ. ಈ ಹಂತದಲ್ಲಿ, ಸ್ಪಷ್ಟವಾದ ಅಂತಿಮ ಬಿಂದುವಿಲ್ಲದೆ ವೈರಸ್ ಹರಡುತ್ತದೆ. ಇದನ್ನು ಅಂತಿಮ ಹಂತ ಎಂದು ಕರೆಯಲಾಗುತ್ತದೆ. ಇದನ್ನು ಸಾಂಕ್ರಾಮಿಕ ಎಂದು ಪರಿಗಣಿಸಲಾಗುತ್ತದೆ.

ಜನರ ಆರೋಗ್ಯದ ರಕ್ಷಣೆ ಮುಖ್ಯವಾಗಿರುವ ಕಾರಣ ಸಾರ್ವಜನಿಕರು ಯಾವುದೇ ಭೀತಿಗೆ ಒಳಗಾಗಬಾರದು. ಮನೆಯಲ್ಲಿ ಉಳಿಯುವುದು, ಆಗಾಗ್ಗೆ ಕೈ ತೊಳೆಯುವುದು, ಸಾರ್ವಜನಿಕವಾಗಿ ಸಭೆ ಸಮಾರಂಭ ನಿರ್ಬಂಧಿಸುವುದು, ಜನರೊಂದಿಗೆ ಅಂತರ ಕಾಪಾಡಿಕೊಳ್ಳುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು ಸಹ ವೈರಸ್ ವಿರುದ್ಧ ಹೋರಾಡಲು ಒಂದು ಹೆಚ್ಚುವರಿ ಮಾರ್ಗವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.