ಪುಣೆ: ನನ್ನ ಮುಂದೆ ಸವಾಲು ಇತ್ತು. ಹಾಗಾಗಿ ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 50 ರನ್ ಗಳಿಸುವ ಮೂಲಕ ಭಾರತ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೇಳಿದರು.
-
Two opening slots and three consistent openers? Trust @SDhawan25 to not take unnecessary stress 😄😅. His job is to score runs and he is happy doing that. #TeamIndia #INDvSL pic.twitter.com/qYHicVBTDT
— BCCI (@BCCI) January 10, 2020 " class="align-text-top noRightClick twitterSection" data="
">Two opening slots and three consistent openers? Trust @SDhawan25 to not take unnecessary stress 😄😅. His job is to score runs and he is happy doing that. #TeamIndia #INDvSL pic.twitter.com/qYHicVBTDT
— BCCI (@BCCI) January 10, 2020Two opening slots and three consistent openers? Trust @SDhawan25 to not take unnecessary stress 😄😅. His job is to score runs and he is happy doing that. #TeamIndia #INDvSL pic.twitter.com/qYHicVBTDT
— BCCI (@BCCI) January 10, 2020
'ನಾವು ಸರಣಿ ವಶಪಡಿಸಿಕೊಂಡಿದ್ದೇವೆ. ನಾನು ಗಾಯದ ನಂತರ ತಂಡಕ್ಕೆ ಹಿಂತಿರುಗುತ್ತಿದ್ದೇನೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳಿವೆ ಎಂದು ಧವನ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶುಕ್ರವಾರ ಇಲ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ 78 ರನ್‌ಗಳ ಭಾರಿ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 202 ರನ್‌ಗಳ ಬೃಹತ್ ಗುರಿ ದಾಖಲಿಸಿತ್ತು. ಶ್ರೀಲಂಕಾ 123 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಸವಾಲಿನ ಗುರಿ ದಾಖಲಿಸುವಲಲ್ಲಿ ಭಾರತಕ್ಕೆ ತಂಡಕ್ಕೆ ಧವನ್ 52 ನಿರ್ಣಾಯಕ ರನ್ ಗಳಿಸಿದರು. ಶ್ರೀಲಂಕಾ ವಿರುದ್ಧದ 3ನೇ ಟಿ-20 ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆಗಳೊಂದಿಗೆ ಕಣಕಿಳಿದಿತ್ತು. ಟಿ- 20 ವಿಶ್ವಕಪ್ ಹತ್ತಿರವಿರುವುದರಿಂದ ಈ ಸರಣಿಯಲ್ಲಿ ಹೊಸ ಪ್ರಯೋಗಕ್ಕೆ ಪ್ರಯತ್ನಿಸಬಹುದು ಎಂದು ಧವನ್ ಹೇಳಿದರು.
'ಈ ಸರಣಿಯಲ್ಲಿ, ನಾವು ಪ್ರಯೋಗವನ್ನು ಮಾಡಬಹುದು. ಆರಂಭಿಕ ಬ್ಯಾಟ್ಸ್‌ಮನ್‌ಗಳ ಪ್ರಯೋಗ ಮಾಡುವುದರಿಂದ ಟಿ-20 ವಿಶ್ವಕಪ್‌ಗೆ ಸಹಕಾರಿಯಾಗಲಿದೆ' ಎಂದರು. 'ನಾವು ಮೊ
ದಲ ಪಂದ್ಯವನ್ನು ಗೆದ್ದಿದ್ದೇವೆ ಅದು ಆತ್ಮವಿಶ್ವಾಸವನ್ನು ತರುತ್ತದೆ ಮತ್ತು ಅದಕ್ಕಾಗಿಯೇ ನಾವು ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೇವೆ' ಎಂದು ಇದೇ ವೇಳೆ ಧವನ್ ಹೇಳಿದರು.