ETV Bharat / bharat

'ಕಾಂಗ್ರೆಸ್'​ಗೆ ವೋಟ್​ ಮಾಡಿ ಎಂದು ಪ್ರಚಾರ ಸಭೆಯಲ್ಲಿ ಸಿಂಧಿಯಾ ಎಡವಟ್ಟು - Scindia slip of tongue, said to vote congress

ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಗ್ವಾಲಿಯರ್​​ನ ದಾಬ್ರಾದಲ್ಲಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ನಗೆಪಾಟಲಿಗೀಡಾಗಿದ್ದಾರೆ.

Jyotiraditya Scindia
ಜ್ಯೋತಿರಾದಿತ್ಯ ಸಿಂಧಿಯಾ
author img

By

Published : Nov 1, 2020, 8:53 AM IST

ಗ್ವಾಲಿಯರ್ (ಮಧ್ಯಪ್ರದೇಶ): ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾ ಚುನಾವನಾ ಪ್ರಚಾರ ಸಭೆಯಲ್ಲಿ 'ಕಾಂಗ್ರೆಸ್​ಗೆ ವೋಟ್​ ಮಾಡಿ' ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ಪ್ರಚಾರ ಸಭೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಎಡವಟ್ಟು

ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಕೊನೆಯ ಸುತ್ತಿನ ಪ್ರಚಾರ ನಡೆಯುತ್ತಿದೆ. ಗ್ವಾಲಿಯರ್​​ನ ದಾಬ್ರಾದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ಶನಿವಾರ ಭರ್ಜರಿ ಪ್ರಚಾರ ಕೈಗೊಂಡಿದ್ದರು.

ಈ ವೇಳೆ ಪ್ರಚಾರ ಸಭೆಯನ್ನುದ್ದೇಶಿ ಮಾತನಾಡಿದ ಸಿಂಧಿಯಾ, 'ಕಮಲ' ಚಿಹ್ನೆ ಎಂದು ಹೇಳುವ ಬದಲು 'ಹಾಥ್​ ಕಾ ಪಂಜಾ' ('ಕೈ' ಚಿಹ್ನೆ) ಮುಂದೆ ಬಟನ್​ ಒತ್ತಿ ಎಂದು ಹೇಳಿದ್ದಾರೆ. ತಕ್ಷಣವೇ ಇದನ್ನು ಸರಿಪಡಿಸಿಕೊಂಡು ಭಾಷಣ ಮುಂದುವರೆಸಿದ್ದಾರೆ. ಇದನ್ನು ಕೇಳಿ ವೇದಿಕೆ ಮೇಲಿದ್ದ ಬಿಜೆಪಿ ಅಭ್ಯರ್ಥಿ ಸೇರಿ ನೆರೆದಿದ್ದ ಜನರು ನಕ್ಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.