ETV Bharat / bharat

'ಈಟಿವಿ ಭಾರತ' ವರದಿಗಾರನ ಮೇಲೆ ಅಕ್ರಮ ದೂರುಗಳು: ಕಲ್ಕತ್ತಾ ಹೈಕೋರ್ಟ್​ ಗರಂ

ಅಕ್ರಮ ಮರಳು ದಂಧೆಯನ್ನು ಬೆಳಕಿಗೆ ತಂದಿದ್ದ ಈಟಿವಿ ಭಾರತದ ವರದಿಗಾರನ ವಿರುದ್ಧವೇ ಪಶ್ಚಿಮ ಬಂಗಾಳದ ಮೂರು ಕಡೆಗಳಲ್ಲಿ ದೂರುಗಳು ದಾಖಲಾಗಿದ್ದು, ಇವು ಅಕ್ರಮ ದೂರುಗಳೆಂದು ಕಲ್ಕತ್ತಾ ಹೈಕೋರ್ಟ್​ ಹೇಳಿದೆ.

culcutta high court
ಕಲ್ಕತ್ತಾ ಹೈಕೋರ್ಟ್​
author img

By

Published : Aug 4, 2020, 4:40 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮಾಧ್ಯಮದ ಕತ್ತು ಹಿಸುಕುವ ದೃಷ್ಟಿಯಿಂದಲೇ 'ಈಟಿವಿ ಭಾರತ' ವರದಿಗಾರನ ವಿರುದ್ಧ ದೂರುಗಳನ್ನು ದಾಖಲಿಸಲಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಬೀರ್​ಭೂಮ್​ ಜಿಲ್ಲೆಗೆ ಸೇರಿದ ಈಟಿವಿ ಭಾರತ ವರದಿಗಾರ ಅಭಿಷೇಕ್​ ದತ್ತಾ ರಾಯ್​ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ರೀತಿಯಾಗಿ ಕೋರ್ಟ್​ ವ್ಯಾಖ್ಯಾನ ನೀಡಿದೆ.

ಅಭಿಷೇಕ್​ ಪರವಾಗಿ ನ್ಯಾಯವಾದಿಗಳಾದ ಜಯಂತ ನಾರಾಯಣ ಚಟ್ಟೋಪಾಧ್ಯಾಯ, ನಜೀರ್ ಅಹ್ಮದ್ ವಾದ ಮಂಡಿಸಿದ್ದರು. ವಾದ ಮಂಡನೆಯಾದ ನಂತರ ನ್ಯಾಯಮೂರ್ತಿ ವಿವೇಕ್​ ಚೌಧರಿ, ನ್ಯಾಯಮೂರ್ತಿ ಸೌಮೇಂದ್ರ ಸೇನ್ ಅವರಿದ್ದ ಪೀಠ ಈ ದೂರುಗಳು ಅಕ್ರಮವೆಂದು ಅಭಿಪ್ರಾಯಪಟ್ಟು, ಈಟಿವಿ ಭಾರತ ವರದಿಗಾರನಿಗೆ ಜಾಮೀನು ಮಂಜೂರು ಮಾಡಿದೆ.

ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರಿಯಾಗಿ ಸುದ್ದಿಯನ್ನು ಪ್ರಕಟಿಸುವ ಹಕ್ಕು ಮಾಧ್ಯಮಗಳಿಗಿದೆ. ಅಕ್ರಮಗಳ ವಿರುದ್ಧದ ತನಿಖೆಗಾಗಿ ಈ ಸುದ್ದಿಗಳು ಸಹಕರಿಸುತ್ತವೆ. ಇದನ್ನು ಹೊರತುಪಡಿಸಿ ಮಾಧ್ಯಮಗಳ ಕತ್ತು ಹಿಸುಕಲು ದೂರುಗಳು ದಾಖಲಾಗಿರುವುದು ಗೊತ್ತಾಗುತ್ತಿದೆ.

- ಕಲ್ಕತ್ತಾ ಹೈಕೋರ್ಟ್​

ವಿಚಾರಣೆಗೆ ಆದೇಶ

ಈಟಿವಿ ಭಾರತ ವರದಿಗಾರ ಅಭಿಷೇಕ್​ ಮೇಲೆ ಎಫ್​ಐಆರ್​ ದಾಖಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಬೀರ್​ಭೂಮ್​ ಎಸ್​ಪಿಗೆ ಹೈಕೋರ್ಟ್​ ಆದೇಶ ನೀಡಿದೆ. ಇದರ ಜೊತೆಗೆ ವರದಿಗಾರರು ಬೆಳಕಿಗೆ ತಂದಿದ್ದ ಅಕ್ರಮ ಮರಳು ದಂಧೆಯ ಬಗ್ಗೆ ತನಿಖೆ ನಡೆಸಬೇಕೆಂದು ಆದೇಶಿಸಿದೆ.

ನಡೆದಿದ್ದೇನು?

ಈಟಿವಿ ಭಾರತದ ವರದಿಗಾರ ಅಭಿಷೇಕ್​ ದತ್ತಾ ರಾಯ್ ಬೆಳಕಿಗೆ ತಂದಿದ್ದ ಅಕ್ರಮ ಮರಳು ದಂಧೆಯ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು, ವರದಿಗಾರನ ವಿರುದ್ಧವೇ ಮೂರು ಕಡೆಗಳಲ್ಲಿ ದೂರು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಭಿಷೇಕ್​ ದತ್ತಾ ರಾಯ್​ ಜಾಮೀನಿಗಾಗಿ ಕಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.