ETV Bharat / bharat

ಹೈಕಮಾಂಡ್‌ ಕ್ಷಮಿಸಿದರೆ ಸಚಿನ್‌ ಪೈಲಟ್‌ ಬಣವನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.. ಸಿಎಂ ಗೆಹ್ಲೋಟ್‌

ಕಾಂಗ್ರೆಸ್‌ ವಿರುದ್ಧ ತೊಡೆತಟ್ಟು ನಿಂತಿರುವ ರೆಬಲ್‌ ಶಾಸಕರನ್ನು ಹೈಕಮಾಂಡ್‌ ಕ್ಷಮಿಸಿದರೆ ಅವರನ್ನು ನಾನು ಮರಳಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ ಹೇಳಿದ್ದಾರೆ. ಇದೇ ವೇಳೆ ಸಚಿನ್‌ ಪೈಲಟ್‌ಗೆ ಜನಸೇವೆ ಮಾಡಲು ವೈಯಕ್ತಿಕ ಆಸಕ್ತಿ ಇಲ್ಲ ಎಂದಿದ್ದಾರೆ..

if-high-command-forgives-rebels-i-will-welcome-them-back-gehlot
ಹೈಕಮಾಂಡ್‌ ಕ್ಷಮಿಸಿದರೆ ಸಚಿನ್‌ ಪೈಲಟ್‌ ಬಣವನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ: ಗೆಹ್ಲೋಟ್‌
author img

By

Published : Aug 1, 2020, 10:32 PM IST

ಜೈಸಲ್ಮೇರ್‌/ಜೈಪುರ್‌ (ರಾಜಸ್ಥಾನ) : ಒಂದು ವೇಳೆ ಕಾಂಗ್ರೆಸ್‌ ಹೈಕಮಾಂಡ್ ಕ್ಷಮಿಸಿದರೆ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಸೇರಿ ಅತೃಪ್ತ ಬಣದ ಶಾಸಕರು ಪಕ್ಷಕ್ಕೆ ವಾಪಸ್‌ ಬಂದ್ರೇ ಸ್ವಾಗತಿಸುತ್ತೇನೆ ಎಂದು ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ಜೈಸಲ್ಮೇರ್‌ನ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ತಮ್ಮ ಬೆಂಬಲಿಗ ಶಾಸಕರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಆರೋಪ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಳಿ ಬಂದಿದೆ ಎಂದರಲ್ಲದೆ, ಪಕ್ಷದ ಹೈಕಮಾಂಡ್‌ ಕಾಂಗ್ರೆಸ್‌ನ ರೆಬಲ್‌ ಶಾಸಕರನ್ನು ಕ್ಷಮಿಸಿದರೆ ಅವರನ್ನು ನಾನು ಅಪ್ಪಿಕೊಳ್ಳುವೆ ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಪಕ್ಷಕ್ಕೆ ವಾಪಸ್‌ ಬನ್ನಿ ಎಂದು ಸಚಿನ್‌ ಪೈಲಟ್‌ ಬಣಕ್ಕೆ ಸಂದೇಶವನ್ನು ರವಾನಿಸಿದ್ದಾರೆ.

ಅಧಿಕಾರಕ್ಕಾಗಿ ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ಭಾರಿ ವಾಗ್ವಾದ ನಡೆಯುತ್ತಲೇ ಇದೆ. ಕಾಂಗ್ರೆಸ್‌ನ ಹಿರಿಯ ನಾಯಕರು ಮಾಜಿ ಡಿಸಿಎಂ ಪೈಲಟ್‌ ವಿರುದ್ಧ ಕಠಿಣ ಪದಗಳನ್ನು ಈಗಾಗಲೇ ಪ್ರಯೋಗಿಸಿದ್ದಾರೆ. ಒಮ್ಮೆ ಕೆಲಸಕ್ಕೆ ಬಾರದವನು ಅಂತಲೂ ನಿಂದಿಸಿದ್ದಾರೆ. ಆದರೆ, ಸಿಎಂ ಗೆಹ್ಲೋಟ್‌ ಮಾತ್ರ ಕಾಂಗ್ರೆಸ್‌ ನಾಯಕತ್ವ ಬೇಕಾದರೆ ಆತ ಏನು ಬೇಕಾದರೂ ಮಾಡುತ್ತಾನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.