ಹೈದರಾಬಾದ್: ಅಮೆರಿಕಾದ ಉತ್ತರ ಕರೋಲಿನಾದಲ್ಲಿ ಹೈದರಾಬಾದ್ ಮೂಲದ ಯುವತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, 38 ವರ್ಷದ ಗೃಹಿಣಿ ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿದೆ.
ನಾಗೋಲ್ನ ವನಿತಾ ಎಂಬ ಮಹಿಳೆ ಕಳೆದ 15 ವರ್ಷಗಳ ಹಿಂದೆ ಆರ್.ಶಿವಕುಮಾರ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು. ಸಾಫ್ಟವೇರ್ ಎಂಜಿನಿಯರ್ ಆಗಿದ್ದ ಈತ ಅಮೆರಿಕಾದಲ್ಲಿ ಪತ್ನಿ ಜೊತೆ ವಾಸವಾಗಿದ್ದನು. ಕೆಲ ಮಾತ್ರೆ ತೆಗೆದುಕೊಂಡು ವನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಇದೀಗ ಈತನ ಕಿರುಕುಳ ಹಾಗೂ ಚಿತ್ರಹಿಂಸೆಯಿಂದಲೇ ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ವನಿತಾ ಪೋಷಕರು ದೂರು ದಾಖಲು ಮಾಡಿದ್ದಾರೆ.
ಈ ಹಿಂದೆ ತನ್ನ ಇಬ್ಬರು ಮಕ್ಕಳು ಹಾಗೂ ಪೋಷಕರೊಂದಿಗೆ ಹೈದರಾಬಾದ್ನ ನಾಗೋಲ್ನಲ್ಲಿದ್ದ ವನಿತಾ, ಜುಲೈ ತಿಂಗಳಲ್ಲಿ ಅಮೆರಿಕಾಗೆ ತೆರಳಿದ್ದರು. ಇದಾದ ಬಳಿಕ ಪೋಷಕರೊಂದಿಗೆ ಈಕೆ ಯಾವುದೇ ರೀತಿಯಲ್ಲೂ ಮಾತುಕತೆ ನಡೆಸಿರಲಿಲ್ಲ. ರವಿವಾರ ಸಂಜೆ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ವಿಷಯ ಗೊತ್ತಾಗಿದೆ. ಇದೀಗ ಮಗಳ ಮೃತದೇಹ ವಾಪಸ್ ಭಾರತಕ್ಕೆ ತರಲು ಸರ್ಕಾರದಿಂದ ಎಲ್ಲ ರೀತಿಯ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.