ಗುವಾಹಟಿ: ಗುವಾಹಟಿಯ ಕಸದ ತೊಟ್ಟಿಯಿಂದ ಇತ್ತೀಚೆಗೆ ಕೆಲವು ಪಿಪಿಇ ಕಿಟ್‌ಗಳು ದೊರೆತಿರುವುದು ಅಸ್ಸೋಂ ರಾಜ್ಯದ ಕ್ವಾರಂಟೈನ್ ಕೇಂದ್ರಗಳಿಂದ ಉತ್ಪತ್ತಿಯಾಗುವ ಬಯೋಮೆಡಿಕಲ್ ತ್ಯಾಜ್ಯವನ್ನು ವಿಲೇವಾರಿ ಮಾಡುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನಗರದ ಲೋಖ್ರಾ ಪ್ರದೇಶದಲ್ಲಿರುವ ಕಸದ ತೊಟ್ಟಿಯೊಳಗೆ ಪಿಪಿಇ ಕಿಟ್ ಧರಿಸಿದ ವ್ಯಕ್ತಿಯ (ಮಾನಸಿಕವಾಗಿ ಅಸ್ಥಿರ ಎಂದು ಶಂಕಿಸಲಾಗಿದೆ) ಬಗ್ಗೆ ಈಟಿವಿ ಭಾರತ್ ಗುರುವಾರ ವಿಶೇಷ ವರದಿ ಬಿತ್ತರಿಸಿತ್ತು. ಕಸದ ತೊಟ್ಟಿ ಕ್ವಾರಂಟೈನ್ ಕೇಂದ್ರದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ. ಕಸದ ತೊಟ್ಟಿಗಳಲ್ಲಿ ಒಟ್ಟು 7 ಬಳಸಿದ ಪಿಪಿಇ ಕಿಟ್‌ಗಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಸಹ, ಕೆಲವು ಪಿಪಿಇ ಕಿಟ್‌ಗಳನ್ನು ನಗರದ ಲಖ್ಟೋಕಿಯಾ ಪ್ರದೇಶದ ರಸ್ತೆಬದಿಯಲ್ಲಿ ಎಸೆಯಲಾಗಿದೆ. ಈ ಕುರಿತು ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವುಗಳನ್ನು ಸುಡಲಾಗಿದೆ.
ಬಯೋಮೆಡಿಕಲ್ ತ್ಯಾಜ್ಯವನ್ನು ವಿಲೇವಾರಿ ಮಾಡಲು ಒಂದು ಏಜೆನ್ಸಿಯನ್ನು ನಿಯೋಜಿಸಲಾಗಿದೆ. ಈ ತ್ಯಾಜ್ಯ ವಿಲೇವಾರಿ ಮಾಡುವಾಗ ಅವರು ಎಲ್ಲಾ ಮಾರ್ಗ ಸೂಚಿಗಳನ್ನು ಅನುಸರಿಸುತ್ತಾರೆ ಎಂದು ಕಮರೂಪ್ ಜಿಲ್ಲಾಧಿಕಾರಿ ಬಿಸ್ವಾಜಿತ್ ಪೆಗು ತಿಳಿಸಿದ್ದಾರೆ.
ಆದರೆ, ಕ್ವಾರಂಟೈನ್ ಕೇಂದ್ರಗಳಿಂದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ವಿಧಾನದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ.
ಲೋಖ್ರಾದಲ್ಲಿನ ಕಸದ ತೊಟ್ಟಿಯಿಂದ ಪಡೆದ ಪಿಪಿಇ ಕಿಟ್ ಧರಿಸಿದ ವ್ಯಕ್ತಿಯು ನಗರದ ಬೀದಿಗಳಲ್ಲಿ ಓಡಾಡುತ್ತಿದ್ದಾನೆ. ಈತನಿಗೆ ತಗುಲಿರುವ ಸೋಂಕು ಇತರರಿಗೆ ತಗುಲಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.