ETV Bharat / bharat

ಎನ್​ಕೌಂಟರ್​ಗೆ ಕೆಲವೇ ಗಂಟೆಗಳ ಮುಂಚೆ ದುಬೆಗೆ ಭದ್ರತೆ ಒದಗಿಸುವಂತೆ ಸುಪ್ರೀಂಗೆ ಸಲ್ಲಿಕೆಯಾಗಿತ್ತು ಅರ್ಜಿ! - ದುಬೆ ಎನ್​ಕೌಂಟರ್ ಸುದ್ದಿ

ಮಹಾರಾಷ್ಟ್ರ ಮೂಲದ ವಕೀಲ ಘನಶ್ಯಾಮ್ ಉಪಾಧ್ಯಾಯ ಎಂಬುವರು, ತಡರಾತ್ರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ದುಬೆಗೆ ಸೂಕ್ತ ಭದ್ರತೆ ನೀಡದಿದ್ದರೆ, ಪೊಲೀಸರನ್ನು​ ಹತ್ಯೆ ಮಾಡಿದ್ದ ದುಬೆ ಸಹಚರರು ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇದೇ ರೀತಿ ದುಬೆಯನ್ನು ಕೂಡಾ ಪೊಲೀಸರು ಎನ್​ಕೌಂಟರ್​ ಮಾಡುವ ಸಾಧ್ಯತೆಯಿದೆ ಎಂದು ವಕೀಲರು ಆತಂಕ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ.

dubey
ದುಬೆ
author img

By

Published : Jul 10, 2020, 12:54 PM IST

Updated : Jul 10, 2020, 2:55 PM IST

ನವದೆಹಲಿ: ಉತ್ತರ ಪ್ರದೇಶದ 8 ಪೊಲೀಸರ ಎನ್​ಕೌಂಟರ್​ಗೆ ಕಾರಣನಾದ ಕುಖ್ಯಾತ ರೌಡಿ ವಿಕಾಸ್ ದುಬೆ ಇಂದು ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ. ಇದಕ್ಕೂ ಮುಂಚೆ ವಿಕಾಸ್​ ದುಬೆಗೆ ಭದ್ರತೆ ಒದಗಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ಕೋರಿ ಕಳೆದ ರಾತ್ರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಮಹಾರಾಷ್ಟ್ರ ಮೂಲದ ವಕೀಲ ಘನಶ್ಯಾಮ್ ಉಪಾಧ್ಯಾಯ ಎಂಬುವರು, ತಡರಾತ್ರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ದುಬೆಗೆ ಸೂಕ್ತ ಭದ್ರತೆ ನೀಡದಿದ್ದರೆ, ಪೊಲೀಸರನ್ನು​ ಹತ್ಯೆ ಮಾಡಿದ್ದ ದುಬೆ ಸಹಚರರು ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇದೇ ರೀತಿ ದುಬೆಯನ್ನು ಕೂಡಾ ಪೊಲೀಸರು ಎನ್​ಕೌಂಟರ್​ ಮಾಡುವ ಸಾಧ್ಯತೆಯಿದೆ ಎಂದು ವಕೀಲರು ಆತಂಕ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ.

ಇದರೊಂದಿಗೆ ಪೊಲೀಸ್​ ಎನ್‌ಕೌಂಟರ್‌ನಲ್ಲಿ ಇತರ ಐವರು ಆರೋಪಿಗಳನ್ನು ಹತ್ಯೆಗೈದ ಬಗ್ಗೆ ಸಿಬಿಐ ತನಿಖೆಗೆ ಅವರು ಕೋರಿದ್ದರು. ಅಲ್ಲದೆ ವಸತಿ ಕಟ್ಟಡ, ಶಾಪಿಂಗ್ ಮಾಲ್, ದುಬಾರಿ ವಾಹನಗಳು ಸೇರಿದಂತೆ ವಿಕಾಸ್ ದುಬೆಯ ಆಸ್ತಿ-ಪಾಸ್ತಿಗಳ ನಾಶದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್​ಗೆ ಕೋರಲಾಗಿದೆ.

Last Updated : Jul 10, 2020, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.