ಅಹ್ಮದ್‌ನಗರ: ರಿಮೋಟ್ನಿಂದ ಸ್ಟಾರ್ಟ್ ಬಟನ್ ಒತ್ತಿದರೆ ಸಾಕು ಶುರುವಾಗುತ್ತೆ ಈ ಕಾರು. ಅರೇ ಇದೇನಿದು ನೋಡ್ಲಿಕ್ಕೆ ವಿಂಟೇಜ್ ಕಾರಿನ ಹಾಗಿದೆಯಲ್ಲಾ ಅಂತಾ ನಿಬ್ಬೆರಗಾಗಬೇಡಿ. ಹೌದು, ಇದು ವಿಂಟೇಜ್ ಕಾರು. ಆದರೆ ಇದನ್ನು ಇದು ದ್ವಿಚಕ್ರ ವಾಹನದ ಇಂಜಿನ್ ಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ.
ಮಹಾರಾಷ್ಟ್ರದ ಅಹ್ಮದ್‌ನಗರದ ನಿಂಬಾರಿ ಗ್ರಾಮದ ಯುವರಾಜ್ ಜನಾರ್ದನ್ ಪವಾರ್ ಕಾರನ್ನು ತಯಾರಿಸಿದ್ದಾರೆ. ಎಂಜಿನಿಯರಿಂಗ್ ಮೂರನೇ ವರ್ಷದಲ್ಲಿ ಓದುತ್ತಿರುವ ಯುವರಾಜ್, ಪಲ್ಸರ್ ಬೈಕ್ನ ಇಂಜಿನ್ ಹಾಗೂ ಮನೆಯ ವಸ್ತುಗಳನ್ನು ಬಳಸಿ ನಾಲ್ಕು ಚಕ್ರಗಳ ವಿಂಟೇಜ್ ಕಾರನ್ನು ನಿರ್ಮಿಸಿದ್ದಾರೆ. 10 ನೇ ತರಗತಿಯಲ್ಲಿ ಓದುತ್ತಿರುವ ಅವರ ಸಹೋದರ ಪ್ರತಾಪ್ ಯುವರಾಜ್ಗೆ ಈ ಕೆಲಸದಲ್ಲಿ ಸಹಾಯ ಮಾಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ 1500 ಸಿಸಿ ಬೈಕ್ನ್ನು ವಿಂಟೇಜ್ ಕಾರ್ ಆಗಿ ಪರಿವರ್ತಿಸಿದ್ದಾರೆ.
ದ್ವಿಚಕ್ರ ವಾಹನದ ಇಂಜಿನ್ ಹೊಂದಿದ್ದರೂ ಈ ಕಾರನ್ನು ರಿವರ್ಸ್ ಗೇರ್‌ನಲ್ಲಿ ಹಾಕಬಹುದು. 4 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ.
ಯುವರಾಜ್ ಅವರ ಈ ಸಾಧನೆ ಹಲವು ಯುವಕರಿಗೆ ಸ್ಫೂರ್ತಿ ನೀಡಿದೆ. ಇವರ ಸಾಧನೆಗೆ ತಂದೆ - ತಾಯಿ ಹಾಗೂ ಮನೆಯವರು ಸಂತಸ ವ್ಯಕ್ತಪಡಿಸಿದ್ದಾರೆ.