ಮುಂಬೈ: ವರುಣನ ರುದ್ರನರ್ತನಕ್ಕೆ ದೇಶದ ವಾಣಿಜ್ಯ ರಾಜಧಾನಿ ನಲುಗಿದ್ದು, 2005ರ ವರುಣನ ಆರ್ಭಟದ ನೆನಪು ಮತ್ತೆ ಮರುಕಳಿಸಿದೆ.
ಶುಕ್ರವಾರದಂದು ಮುಂಬೈ- ಕೊಲ್ಲಾಪುರದ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲು ಜಲಾವೃತದಿಂದ ಸುಮಾರು 2 ಸಾವಿರಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಗಿದ್ದು, ಮಹಾಮಳೆಯ ಭೀಕರತೆಗೆ ಹಿಡಿದ ಕೈಗನ್ನಡಿ.
ಬದ್ಲಾಪುರ್, ಕಲ್ಯಾಣ್, ನವಿ ಮುಂಬೈ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 200 ಮಿ.ಮೀ ಅಧಿಕ ಮಳೆ ಸುರಿದಿದೆ. ಥಾಣೆ ದಾಖಲೆಯ 236 ಮಿ.ಮೀ, ಕಲ್ಯಾಣ್ 231 ಮಿ.ಮೀ, ಅಂಬೇರ್‌ನಾಥ್ 280 ಮಿ.ಮೀ ಮತ್ತು ಮುಂಬೈ ಸಮೀಪದ ಬದ್ಲಾಪುರದಲ್ಲಿ ಅತ್ಯಧಿಕ ಪ್ರಮಾಣ 447 ಮಿ.ಮೀ ಮಳೆ ಸುರಿದಿದೆ. ಇದು 2005ರಲ್ಲಿ 14 ವರ್ಷಗಳ ಹಿಂದಿನ ಮಳೆಯ ನೆಪನ್ನು ಮತ್ತೆ ಮರುಕಳಿಸಿದೆ.
ಮುಂಬೈ ಹೊರವಲಯ ಮತ್ತು ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸವಾರರು, ಚಾಲಕರು, ಪ್ರಯಾಣಿಕರು ಪರದಾಡುವಂತಾಗಿದೆ. ರೈಲು, ವಿಮಾನ ಸಂಚಾರಕ್ಕೆ ತೊಡಕುಂಟಾಗಿದೆ. ಇಡೀ ವಾಣಿಜ್ಯ ನಗರವೇ ಜಲಪ್ರವಾಹಕ್ಕೆ ಸಿಲುಕಿದ್ದು, ಸಾವಿರಾರು ಜನರು ರಸ್ತೆಯಲ್ಲಿ ನಿಲ್ಲುವಂತಾಗಿದೆ. ಪ್ರವಾಹ ಪರಿಸ್ಥಿತಿಯಿಂದ ವಿದ್ಯಾರ್ಥಿಗಳು ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ, ಶಾಲಾ- ಕಾಲೇಜುಗಳಿಗೆ ಎರಡು ದಿನಗಳ ಕಾಲ ಶಾಲಾ, ಕಾಲೇಜಿಗೆ ರಜೆ ನೀಡಲಾಗಿದೆ.