ETV Bharat / bharat

ದೆಹಲಿಯಲ್ಲಿ ಅಪಾಯದ ಮಟ್ಟ ಮೀರಿದ ವಾಯುಮಾಲಿನ್ಯ: ಸಮ - ಬೆಸ ಸಂಖ್ಯೆ ನಿಯಮ ಜಾರಿ - heavy pollution in Delhi news

ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಇಂದಿನಿಂದ ದೆಹಲಿ ಸರ್ಕಾರ ಸಮ - ಬೆಸ ಸಂಖ್ಯೆ ನಿಯಮ ಮತ್ತೆ ಜಾರಿಗೆ ತಂದಿದೆ.

ಸಮ-ಬೆಸ ಸಂಖ್ಯೆ ನಿಯಮ ಜಾರಿ
author img

By

Published : Nov 4, 2019, 2:36 PM IST

Updated : Nov 4, 2019, 3:04 PM IST

ನವದೆಹಲಿ: ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಇಂದಿನಿಂದ ದೆಹಲಿ ಸರ್ಕಾರ ಸಮ - ಬೆಸ ಸಂಖ್ಯೆ ನಿಯಮ ಮತ್ತೆ ಜಾರಿಗೆ ತಂದಿದೆ.

ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಭಾನುವಾರ ಮಳೆ ಸುರಿದ ಬಳಿಕ ಮಾಲಿನ್ಯದ ಮಟ್ಟ ಅಧಿಕಗೊಂಡಿದೆ. ದಟ್ಟ ಹೊಗೆ ಮತ್ತು ಮಂಜಾದ ಗೋಚರತೆಯಿಂದ ಸಂಚಾರ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಏರ್ ಕ್ವಾಲಿಟಿ ಅಂಡ್ ವೆದರ್ ಪೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಎಸ್‍ಎಎಫ್‍ಆರ್) ಸೆಂಟರ್​ ಪ್ರಕಾರ ಉಸಿರಾಟಕ್ಕೆ ಅತೀವವಾದ ಅಪಾಯವಿದೆ. ವಿಪರೀತ ವಾಯುಮಾಲಿನ್ಯದಿಂದಾಗಿ ನಿನ್ನೆಯಿಂದಲೇ ದಟ್ಟವಾದ ಹೊಗೆ ಆವರಿಸಿಕೊಂಡಿದೆ.

  • नमस्ते दिल्ली! प्रदूषण कम करने के लिए आज से Odd Even शुरू हो रहा है। अपने लिए, अपने बच्चों की सेहत के लिए और अपने परिवार की साँसों के लिए Odd Even का ज़रूर पालन करें। कार शेयर करें। इस से दोस्ती बढ़ेगी, रिश्ते बनेंगे, पेट्रोल बचेगा और प्रदूषण भी कम होगा।

    दिल्ली फिर कर दिखायेगी

    — Arvind Kejriwal (@ArvindKejriwal) November 4, 2019 " class="align-text-top noRightClick twitterSection" data=" ">

ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್​​ ನೇತೃತ್ವದ ಆಪ್​​ ಸರ್ಕಾರ ಸಮ - ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ತಂದಿದೆ. ನವೆಂಬರ್​​​ 5 ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಇದು ಮೂರನೇ ಬಾರಿ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಜಾರಿಗೊಳಿಸಲಾಗಿದೆ. ಇಂದಿನಿಂದ ನವೆಂಬರ್ 15 ರವರೆಗೂ ಈ ಸಮ - ಬೆಸ ವಾಹನ ಸಂಚಾರ ನಿಯಮ ಜಾರಿಯಲ್ಲಿರಲಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ 4000 ರೂ. ದಂಡ ವಿಧಿಸಲಾಗುವುದು ಎಂದು ಸಿಎಂ ಅರವಿಂದ್​​ ಕೇಜ್ರಿವಾಲ್​​​​ ಎಚ್ಚರಿಕೆ ನೀಡಿದ್ದಾರೆ.

  • मेरे दिल्ली के लोगों पर मुझे गर्व है। उन्होंने मुश्किल से मुश्किल काम भी इतनी सहजता से कर दिखाए https://t.co/AYnzmcm1FJ

ನಗರದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ವಿಪರೀತ ವಾಯುಮಾಲಿನ್ಯಕ್ಕೆ ದಟ್ಟ ಹೊಗೆಯೂ ಆವರಿಸಿಕೊಂಡಿದೆ. ನಗರದ ಪುಸಾ, ಮಂದಿರ್​​​ ಮಾರ್ಗ್​​​, ಮುಂಡ್ಕಾ, ಶ್ರೀನಿವಾಸ್ಪುರಿ, ಚಾಂದಿನಿ ಚೌ ರೋಹಿಣಿ, ಸೋನಿಯಾ ವಿಹಾರ್​​, ಶಹ್ದಾರ ಓಖ್ಲಾ, ಮೇಜಾರ್​ ಧ್ಯಾನ್​​​​ ಚಾಂದ್​​ ಮೈದಾನ, ಆನಂದ್​ ವಿಹಾರ್​​, ಪಂಜಾಬಿ ಬಾಗ್​ನ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಪಿಎಂ 17 ರ ಮಟ್ಟದ ವಾಯು ಗುಣಮಟ್ಟವಿದ್ದು, 900 ಎಕ್ಯೂಐ ಹೊಂದಿದೆ. ವಿಮಾನ ನಿಲ್ದಾಣ ಮತ್ತು ದೆಹಲಿ ವಿಶ್ವವಿದ್ಯಾಲಯದ ಪ್ರದೇಶಗಳಲ್ಲಿಯೂ 999 ಎಕ್ಯೂಐ ದಾಖಲಾಗಿದೆ.

ನಾವು ಎಲ್ಲ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಬೇರೆ ಏನಾದರೂ ಪರಿಹಾರ ಕಂಡು ಹಿಡಿಯಬೇಕೆಂದು ಸಿಎಂ ಅರವಿಂದ್​ ಕೇಜ್ರಿವಾಲ್​​ ಒತ್ತಾಯಿಸಿದ್ದಾರೆ.

ಸಮ-ಬೆಸ ಸಂಚಾರ ನಿಯಮ ಅಂದರೇನು?

ನವೆಂಬರ್‌ 4, 6, 8, 10, 12, 14 ರಂದು ಸಮ ಸಂಖ್ಯೆ ನೋಂದಣಿಯ ವಾಹನಗಳಲ್ಲಿ ಸಂಚರಿಸಬೇಕು. ಇನ್ನುಳಿದ ದಿನಗಳಲ್ಲಿ ಮಾತ್ರ ಬೆಸ ಸಂಖ್ಯೆ ನೋಂದಣಿ ವಾಹನಗಳು ರಸ್ತೆಗಿಳಿಯುವ ಅವಕಾಶವಿದೆ. ಇನ್ನು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​​ ಟ್ವೀಟ್​ ಮಾಡಿ, ಜನತೆಗೆ ಸಹಕರಿಸುವಂತೆ ಕೋರಿದ್ದರು.

Intro:Body:

soniya

Conclusion:
Last Updated : Nov 4, 2019, 3:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.