ನವದೆಹಲಿ: ತಬ್ಲಿಘಿ ಜಮಾಅತ್ ಮುಖಂಡ ಮೌಲಾನಾ ಸಾದ್ ಕಂಧಲ್ವಿ ದೆಹಲಿ ಪೊಲೀಸ್ ಅಪರಾಧ ಶಾಖೆಗೆ ಪತ್ರ ಬರೆದಿದ್ದು, ತಾನು ತನಿಖೆಗೆ ಸಹಕರಿಸಲು ಸಿದ್ಧವೆಂದು ತಿಳಿಸಿದ್ದಾರೆ.
ಅದರ ಜೊತೆಗೆ, ಹೊಸ ಎಫ್‌ಐಆರ್‌ನ ಪ್ರತಿಯನ್ನು ಒದಗಿಸುವಂತೆ ತನಿಖಾ ಸಂಸ್ಥೆಗೆ ಕೇಳಿಕೊಂಡಿದ್ದಾರೆ.
ಏಪ್ರಿಲ್ 1 ಮತ್ತು 2 ರಂದು ನೀಡಿದ ಎರಡು ನೋಟಿಸ್‌ಗಳಿಗೆ ಉತ್ತರಿಸುವ ಮೂಲಕ ನಾನು ಈಗಾಗಲೇ ತನಿಖೆಗೆ ಸಹಕರಿಸುತ್ತಿದ್ದೇನೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ನಿಜಾಮುದ್ದೀನ್ನಲ್ಲಿ ತಬ್ಲಿಘಿ ಜಮಾಅತ್ ಅನುಯಾಯಿಗಳು ಸಭೆ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸ್ ಅಪರಾಧ ವಿಭಾಗವು ಮಾರ್ಚ್ 31ರಂದು ಮೌಲ್ವಿ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.