ETV Bharat / bharat

ಕೇಂದ್ರದ ಪ್ಯಾಕೇಜ್​​ನಿಂದ ಆಗುವ ಲಾಭ ಏನು...? ಆಗೋ ನಷ್ಟವೇನು? - ಕೋವಿಡ್-19

54 ದಿನಗಳ ಸುದೀರ್ಘ ಚಟುವಟಿಕೆ ಸ್ಥಗಿತದಿಂದಾಗಿ ಕೈಗಾರಿಕಾಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಇತರೆಡೆಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕಿತರ ದ್ವಿಗುಣಗೊಳ್ಳುವಿಕೆ ಸಮಯ ಕಡಿಮೆಯಾಗಬಹುದು.

ಕೋವಿಡ್-19
ಕೋವಿಡ್-19
author img

By

Published : May 18, 2020, 11:11 PM IST

ಹೈದರಾಬಾದ್: ದೇಶದ 100 ಕೋಟಿಗೂ ಅಧಿಕ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ಕೋವಿಡ್-19 ಹೊಡೆತದಿಂದಾಗಿ ಭಾರತವು ಹಿಂದೆಂದೂ ಕಂಡು ಕೇಳರಿಯದ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿದೆ. ಈ ಮಾರಕ ಸೋಂಕಿಗೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆ ಇಲ್ಲದ್ದರಿಂದ ಬೇರೆ ರಾಷ್ಟ್ರಗಳ ರೀತಿಯೇ ಭಾರತವು ಲಾಕ್ ಡೌನ್ ಹೇರಿಕೆ ಮಾಡಿತ್ತು.

54 ದಿನಗಳ ಸುದೀರ್ಘ ಚಟುವಟಿಕೆ ಸ್ಥಗಿತದಿಂದಾಗಿ ಕೈಗಾರಿಕಾಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಇತರೆಡೆಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಸೋಂಕಿತರ ದ್ವಿಗುಣಗೊಳ್ಳುವಿಕೆ ಸಮಯ ಕಡಿಮೆಯಾಗಬಹುದು. ಆದರೆ, ಉತ್ಪಾದನೆ ನಷ್ಟ, ಉದ್ಯೋಗ ಮತ್ತು ಆದಾಯದ ವಿಷಯದಲ್ಲಿ ದೇಶ ಭಾರಿ ಆರ್ಥಿಕ ನಷ್ಟದ ಬೆಲೆತೆತ್ತಿದೆ. ಕ್ರಮವಾಗಿ 2019 ಮತ್ತು 2018 ರಲ್ಲಿ 4.3 ಮತ್ತು 6.8 ಪ್ರತಿಶತದಷ್ಟು ಬೆಳವಣಿಗೆಯಾಗಿದ್ದ ಭಾರತದ ಅರ್ಥವ್ಯವಸ್ಥೆಯು 2020ರಲ್ಲಿ ಶೇ.1.2 ರಷ್ಟು ಬೆಳವಣಿಗೆ ಕಾಣಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಮತ್ತೊಂದೆಡೆ, ಏಪ್ರಿಲ್ 2020ರಲ್ಲಿ 114 ಮಿಲಿಯನ್(11 .4 ಕೋಟಿ ) ಉದ್ಯೋಗ ನಷ್ಟವಾಗಿವೆ. ಇದರಲ್ಲಿ 2.7 ಕೋಟಿಯಷ್ಟು 20-30 ವಯಸ್ಸಿನ ವಯಸ್ಸಿನ ಉದ್ಯೋಗಿಗಳೇ ಕೆಲಸ ಕಳೆದುಕೊಂಡಿರುವುದು ಆತಂಕಕಾರಿಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ(ಸಿಎಮ್ಐಇ) ಅಂದಾಜಿಸಿದೆ. ಈ ನಡುವೆ ದೇಶ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರದಿಂದ 20 ಲಕ್ಷ ಕೋಟಿ ರು. ಪ್ಯಾಕೇಜ್ ಹೊರಬಿದ್ದಿದೆ.

ಈ ಪ್ಯಾಕೇಜ್ ಪ್ರಮುಖವಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಗತ್ಯ ನಗದು ಲಭ್ಯತೆ ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಂದ ಹಿಡಿದು ಬೀದಿ ಬದಿ ವ್ಯಾಪಾರಿಗಳವರೆಗೆ ವಿವಿಧ ಸ್ತರಗಳಲ್ಲಿ ಬ್ಯಾಂಕ್ ಗಳು ನೀಡುವ ಸಾಲಕ್ಕೆ ಸರ್ಕಾರದ ಖಾತ್ರಿ ನೀಡುವ ಅಂಶಗಳ ಸಂಯೋಜನೆಯಾಗಿದೆ. ಮತ್ತೊಂದೆಡೆ, ಕೃಷಿ ಸಂಬಂಧಿತ ಪ್ರಮುಖ ಸುಧಾರಣೆ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ವ್ಯವಹಾರವನ್ನು ಸುಗಮಗೊಳಿಸಲಾಗುತ್ತಿದೆ.

ಇದರ ಜೊತೆಗೆ ಕೊನೆಯದಾಗಿ ಅತ್ಯಂತ ಪ್ರಮುಖವಾಗಿ, ಎಲ್ಲ ಸಾರ್ವಜನಿಕ ವಲಯಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಬೃಹತ್ ಬಾಗಿಲನ್ನ ತೆರೆಯಲಾಗಿದ್ದು, ಇದಕ್ಕೆ ಅನುವು ಮಾಡಿಕೊಡಲು ಅಗತ್ಯ ಕಾಯ್ದೆ ಬದಲಾವಣೆ ಮಾಡುವುದಾಗಿ ತಮ್ಮ ಸರಣಿ ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಸಚಿವರು ಘೋಷಿಸಿದ್ದು, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಭಾರತವನ್ನ ಸ್ವಾವಲಂಬಿಯಾಗಿಸುವ ಸಾಮರ್ಥ್ಯ ಇರುವುದರಿಂದ ಖಾಸಗಿಯವರನ್ನ ಸ್ವಾಗತಿಸಬೇಕೆಂದು ಹೇಳಿದ್ದಾರೆ. ವಾಸ್ತವವಾಗಿ, ಈ ಸುಧಾರಣೆ ಮತ್ತು ದ್ರವ್ಯತೆ ಕ್ರಮಗಳು ಉತ್ಸಾಹದಿಂದ ಜಾರಿಗೆ ಬಂದರೆ, ದೇಶವು COVID19 ಪ್ರಭಾವಕ್ಕೆ ಒಳಗಾಗುವ ಮೊದಲೇ ಭಾರತದ ಆರ್ಥಿಕ ಬೆಳವಣಿಗೆಯ ನಿಧಾನಗತಿಗೆ ಕಾರಣವಾದ ಕೆಲ ದೋಷಗಳನ್ನು ಪರಿಹರಿಸಬಹುದಾಗಿದೆ.

ಆದರೂ, ಬಹುದೊಡ್ಡ ಪ್ಯಾಕೇಜ್ ಹೊರತಾಗಿಯೂ ಸರ್ಕಾರ ಗಮನಹರಿಸಲೇಬೇಕಾದ ಅಧಿಕ ಪ್ರಮಾಣದ ಸಮಸ್ಯೆಗಳು ಹಾಗೆಯೇ ಉಳಿದಿವೆ. ಅದೇನೆಂದರೆ, ಆರ್ಥಿಕತೆಯಲ್ಲಿ ಬೇಡಿಕೆಯನ್ನ ಪುನರ್ ನಿರ್ಮಾಣ ಮಾಡುವುದು. ಆರ್ಥಿಕ ವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಇಲ್ಲದಿರುವುದೇ ಆರ್ಥಿಕ ಬೆಳವಣಿಗೆ ಕುಸಿತ ಮತ್ತು ನಿರುದ್ಯೋಗ ಹೆಚ್ಚಲು ಕಾರಣವಾಗಿದೆ. ಪೂರೈಕೆ ಸರಪಳಿಯಲ್ಲಿ ತೊಡಕು ಮಾಡುವ ಅಂಶಗಳಿದ್ದರು ಅನುಭೋಗ ಹೆಚ್ಚಿಸುವ ಪಾಲಿಸಿಗೆ ಒಟ್ಟು ನೀಡುವುದು ಅತ್ಯಂತ ಮುಖ್ಯವಾಗಿದೆ. ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡು ಆದಾಯ ಕುಸಿತ ಕಂಡಿದೆ. ಆರ್ಥಿಕ ಉತ್ತೇಜನದ ಹೊರತು ಅನುಭೋಗಿತ್ವದ ವೆಚ್ಚ ಹೆಚ್ಚಳದ ನಿರೀಕ್ಷೆ ಕಾರ್ಯಸಾಧುವಲ್ಲ.

ಇಂತಹ ಆರ್ಥಿಕ ದುಃಸ್ಥಿತಿ ಹೊರತಾಗಿಯೂ, ಚಿಲ್ಲರೆ ವ್ಯಾಪಾರದಿಂದ ಕಾರ್ಪೊರೇಟ್‌ಗಳವರೆಗಿನ ವ್ಯವಹಾರಗಳು ತಮ್ಮದೇ ನಿಗದಿತ ಖರ್ಚನ್ನ ಹೊಂದಿವೆ. ಇದು ಅವರ ವ್ಯವಹಾರದ ಚೇತರಿಕೆ ಮೇಲೆ ಮತ್ತಷ್ಟು ಒತ್ತಡ ಹಾಕುತ್ತದೆ. ಸರ್ಕಾರ ಘೋಷಿಸಿದ ಪ್ಯಾಕೇಜ್ ನಲ್ಲಿ ಅವರಿಗೆ ನೇರವಾಗಿ ಸ್ಥಿರ ವೆಚ್ಚಗಳಲ್ಲಿ ಸಬ್ಸಿಡಿ ಒದಗಿಸದೇ ಸಾಲ ನೀಡಿಕೆಯತ್ತ ಮಾತ್ರ ಕೇಂದ್ರೀಕರಿಸಲಾಗಿದೆ. ಈ ಸಂದರ್ಭ ಗಮನಿಸಬೇಕಾದ ಅಂಶವೆಂದರೆ, ತಾವು ಪಡೆದುಕೊಂಡ ಸಾಲದಿಂದ ತಮಗೆ ಲಾಭವಾಗುತ್ತದೆ ಅಥವಾ ಕಟ್ಟುವ ಬಡ್ಡಿ ಕಳೆದು ಹಾಕಿದ ಬಂಡವಾಳವಾದರೂ ವಾಪಸ್ ಬರುತ್ತದೆ ಎಂದಾದರೆ ಉದ್ಯಮಗಳು ಸಾಲ ಪಡೆಯಲು ಮುಂದಾಗುತ್ತದೆ. ಪ್ರಸ್ತುತ ಇರುವ ಕೆಟ್ಟ ಪರಿಸ್ಥಿತಿಯಲ್ಲಿ, ಸರಕು ಮತ್ತು ಸೇವೆಗಳ ಬಳಕೆ ಪಾತಾಳ ಮುಟ್ಟಿದೆ. ಹೀಗಿರುವಾಗ, ಪ್ಯಾಕೇಜ್ ಮೂಲಕ ಎಷ್ಟು ಸಾಲ ನೀಡಿದರೆ ಏನಂತೆ, ಆರ್ಥಿಕ ವ್ಯವಸ್ಥೆಯಲ್ಲಿ ಬಳಕೆಯ ಬೇಡಿಕೆ ಎಷ್ಟು ಬೇಗ ಸುಧಾರಿಸುತ್ತದೆ ಎಂಬುದು ಪ್ರಮುಖವಾಗುತ್ತದೆ. ಹೀಗಾಗಿ, ಆರ್ಥಿಕ ಸುಧಾರಣೆಗೆ ಬೇಡಿಕೆ ಹೆಚ್ಚಿಸುವ ಮಾರ್ಗವೊಂದೇ ಅಂತಿಮವಾಗಿ ಉಳಿಯಲಿದೆ.

ಬಳಕೆಗೆ ಹೆಚ್ಚಿಸುವ ಯತ್ನದಲ್ಲಿ ಆರ್ಥಿಕ ಉತ್ತೇಜಕ ಪಾಲಿಸಿ ಅಗತ್ಯವಿದೆ. ಸಾರ್ವಜನಿಕ ವೆಚ್ಚ ಹೆಚ್ಚಿಸುವ ಅಗತ್ಯವಿದೆ. ಇದರಿಂದ ಮತ್ತೊಂದು ಕಡೆ ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ. ರೈತರಿಗೆ ಸಬ್ಸಿಡಿಗಳನ್ನು ಒದಗಿಸುವುದು, ಹಣಕಾಸಿನ ಪ್ರೋತ್ಸಾಹ ಮತ್ತು ಸಣ್ಣ ಚಿಲ್ಲರೆ ವ್ಯಾಪಾರ ಮತ್ತು ಎಂಎಸ್‌ಎಂಇಗಳ ನಿಗದಿತ ವೆಚ್ಚದ ಅವಶ್ಯಕತೆಗಳ ಒಂದು ಭಾಗವನ್ನು ಪೂರೈಸುವುದು. ಸಮಾನಾಂತರವಾಗಿ ಬಡವರಿಗೆ ಮತ್ತು ದುರ್ಬಲ ವರ್ಗಕ್ಕೆ ನಗದು ವರ್ಗಾವಣೆ ಹೆಚ್ಚಿಸುವುದರಿಂದ ಅವರು ತಮ್ಮ ದೈನಂದಿನ ಅಗತ್ಯ ವಸ್ತುಗಳಿಗಾಗಿ ತಮ್ಮ ಆದಾಯದ ಗರಿಷ್ಠ ಹಣವನ್ನ ಖರ್ಚು ಮಾಡುತ್ತಾರೆ. ಮತ್ತೊಂದು ಕಡೆ ಇದು ಕೃಷಿ ಮತ್ತು ಸಣ್ಣ, ಮಧ್ಯಮ ಕೈಗಾರಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುತ್ತದೆ. ಈ ರೀತಿ ಜಂಟಿಯಾಗಿ ಪ್ರತಿಶತ 80ರಷ್ಟು ಶ್ರಮಿಕ ವರ್ಗಕ್ಕೆ ಕೊಡುಗೆ ನೀಡುವ ಮೂಲಕ ಮತ್ತು ಆರ್ಥಿಕ ಉತ್ತೇಜನದ ಮೂಲಕ ಈ ವಲಯಗಳನ್ನ ಪುಂಸಚೇತನಗೊಳಿಸುವುದರಿಂದ ಭವಿಷ್ಯದ ಔದ್ಯೋಗಿಕ ಪ್ರಗತಿ ಸಾಧ್ಯವಾಗುತ್ತದೆ. ಇದು ಆದಾಯ ನೀಡಿ ಬಳಿಕ ಬಳಕೆಗೆ ಉತ್ತೇಜನ ಕೊಡುತ್ತದೆ.

ಆದ್ದರಿಂದ ನಾವು ಮಾಡಬೇಕಿರುವ ಕೆಲಸವೆಂದರೆ, ಈ ವಲಯಗಳಿಗೆ ಹಣಕಾಸಿನ ಕ್ರಮ ಕೈಗೊಂಡು ನೆರವು ಒದಗಿಸಿ, ಆರ್ಥಿಕ ಪುನಶ್ಚೇತನಕ್ಕೆ ಬೆಂಬಲ ನೀಡುವುದು. ಇದರಿಂದ, ಆರ್ಥಿಕ ಕುಸಿತದ ಸಮಸ್ಯೆ ಖಂಡಿತಾ ಸುಧಾರಿಸಲಿದೆ ಆದರೆ ಇದು ಬಹುಸಂಖ್ಯಾತ ಭಾರತೀಯರ ಜೀವನ ಮತ್ತು ಜೀವನೋಪಾಯಕ್ಕಿಂತ ದೊಡ್ಡದಾಗಿರಬಾರದು.

(ಈ ಲೇಖನದ ಅಭಿಪ್ರಾಯವು ಉತ್ತರಾಖಂಡದ ಹೆಚ್.ಎನ್.ಬಿ. ಗರವಾಲ್ ಕೇಂದ್ರ ವಿಶ್ವವಿದ್ಯಾಲಯದ ಲೇಖಕ, ಸಹಾಯಕ ಪ್ರಾಧ್ಯಾಪಕ, ಡಾ. ಮಹೇಂದ್ರ ಬಾಬು ಕುರುವಾ ಅವರದ್ದಾಗಿದೆ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.