ETV Bharat / bharat

ರೈತರ ಹೋರಾಟ ಬೆಂಬಲಿಸಿ ಬಿಜೆಪಿ ಮಿತ್ರಪಕ್ಷ ಜೆಜೆಪಿಯ ನಾಯಕ ರಾಜೀನಾಮೆ - ಜೆಜೆಪಿ ನಾಯಕ ಇಂದರ್​ಜಿತ್ ರಾಜಿನಾಮೆ

ಜೆಜೆಪಿ ನಾಯಕರು ಈ ಸಂದರ್ಭದಲ್ಲಿ ರೈತರ ಪರ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಳ್ಳಿಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ರೈತರ ಆಂದೋಲನದ ವಿಷಯದಲ್ಲಿ ಪಕ್ಷದ ನಿಲುವಿನಿಂದ ನನಗೆ ನೋವಾಗಿದೆ. ದುಶ್ಯಂತ್​ ಚೌಟಾಲಾ ಅವರ ಮುತ್ತಜ್ಜ ದೇವಿಲಾಲ್​ ಅವರಂತೆ ರೈತರ ಪರ ನಿಲ್ಲಬೇಕು. ನಮಗೆ ಮತ ಚಲಾಯಿಸಿದ ರೈತರ ಕಲ್ಯಾಣವನ್ನು ಸಾಧಿಸಲು ಸಾಧ್ಯವಿಲ್ಲದಿದ್ದರೆ ಪಕ್ಷದಲ್ಲಿ ಉಳಿದುಕೊಳ್ಳಲು ಅರ್ಥವಿಲ್ಲ ಎಂದು ಗೋರಾಯ ತಿಳಿಸಿದ್ದಾರೆ.

ಇಂದರ್ಜಿತ್ ಸಿಂಗ್ ಗೋರಾಯ
ಇಂದರ್ಜಿತ್ ಸಿಂಗ್ ಗೋರಾಯ
author img

By

Published : Feb 4, 2021, 4:41 AM IST

Updated : Feb 4, 2021, 6:16 AM IST

ನವದೆಹಲಿ : ಕೇದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಬಿಜೆಪಿ ಮಿತ್ರ ಪಕ್ಷವಾದ ಜನನಾಯಕ ಜನತಾ ಪಕ್ಷದ ಕರ್ನಾಲ್ ಜಿಲ್ಲಾಧ್ಯಕ್ಷ ಇಂದರ್ಜಿತ್ ಸಿಂಗ್ ಗೋರಾಯ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ಮಿತ್ರಪಕ್ಷವಾಗಿ ಆಡಳಿತ ನಡೆಸುತ್ತಿವೆ. ರೈತರು ಕಳೆದ 70 ದಿನಗಳಿಂದ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ನಾನು ಕೂಡ ಮೊದಲು ರೈತನಾಗಿದ್ದೆ, ಈಗ ರಾಜಕಾರಣಿಯಾಗಿದ್ದೇನೆ. ಇಂತಹ ಸಂದರ್ಭದಲ್ಲಿ ರೈತರ ಹಿತಚಿಂತನೆ, ಕ್ಷೇಮಾಭ್ಯುದಯವನ್ನು ಖಾತರಿ ಪಡಿಸಲು ವಿಫಲವಾದ ಪಕ್ಷದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೆ ವಿವಾದಿತ ಕೃಷಿ ಕಾನೂನಗಳನ್ನು ವಾಪಸ್​ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕೆಂದು ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲರನ್ನು ಒತ್ತಾಯಿಸಿದ್ದಾರೆ.

Last Updated : Feb 4, 2021, 6:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.