ಹೈದರಾಬಾದ್: ವಿಶ್ವದೆಲ್ಲೆಡೆ ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಅಡಿ ಮೆಸಾಚುಸೆಟ್ಸ್ ಐ ಅಂಡ್ ಇಯರ್ ಮತ್ತು ಮೆಸಾಚುಸೆಟ್ಸ್ ಜನರಲ್ ಹಾಸ್ಪಿಟಲ್ (ಎಂಜಿಎಚ್) ಹೊಸ ಲಸಿಕೆಯ ಪ್ರಯೋಗ ಮತ್ತು ಅಭಿವೃದ್ಧಿ ಕುರಿತು ಪ್ರಗತಿ ಸಾಧಿಸಿರುವುದಾಗಿ ವರದಿ ಮಾಡಿವೆ. ಈ ಲಸಿಕೆಯನ್ನು ಎಎವಿ ಕೋವಿಡ್ ಎಂದು ಹೆಸರಿಸಲಾಗಿದೆ.
ಈ ಎಎವಿ ಕೋವಿಡ್ ಲಸಿಕೆಯು ವಂಶವಾಹಿ ಆಧರಿತ ಲಸಿಕೆಯಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿ ಸಾರ್ಸ್-ಸಿಒವಿ2ಗೆ ಪರಿಣಾಮಕಾರಿಯಾಗಿರಲಿದೆ. ವಿಶಿಷ್ಟ ವಂಶವಾಹಿ ಆಧರಿತ ವಿಧಾನವನ್ನು ಇದರಲ್ಲಿ ಬಳಸಲಾಗಿದೆ. ಇದು ಅಡೆನೋ ಅಸೋಸಿಯೇಟೆಡ್ ವೈರಲ್ (ಎಎವಿ) ವೆಕ್ಟರ್‌ನ ಬಳಸುತ್ತದೆ. ಈ ತಂತ್ರಜ್ಞಾನವು ಈಗಾಗಲೇ ಸಾಬೀತಾಗಿದ್ದು, ವಂಶವಾಹಿ ವರ್ಗಾವಣೆ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗುತ್ತದೆ. ಸಾರ್ಸ್-ಸಿಒವಿ-2 ಸ್ಪೈಕ್ ಆಂಟಿಜೆನ್‌ನ ಜೆನೆಟಿಕ್ ಸೀಕ್ವೆನ್ಸ್‌ಗಳನ್ನು ಉತ್ಪಾದಿಸಲು ಈ ಎಎವಿ ವಿಧಾನವನ್ನು ಬಳಸಲಾಗುತ್ತದೆ. ಇದರಿಂದಾಗಿ ಕೊರೊನಾ ವೈರಸ್ ವಿರುದ್ಧ ನಮ್ಮ ದೇಹ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ. ಈ ತಂತ್ರಜ್ಞಾನವನ್ನು ಜೀನ್ ಥೆರಪಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಎಎವಿ ಆಧರಿತ ಔಷಧಗಳನ್ನು ಬಳಸುವಲ್ಲಿ ವ್ಯಾಪಕ ಅನುಭವ ಮತ್ತು ಸಾಮರ್ಥ್ಯವು ಉತ್ಪಾದನೆ ವಲಯದಲ್ಲಿ ಈಗಾಗಲೇ ಇದೆ.
ಈ ಲಸಿಕೆಯ ಬಗ್ಗೆ ಮಾತನಾಡಿದ ಮಸಾಚುಸೆಟ್ಸ್ ಅಂಡ್ ಇಯರ್‌ನ ಗ್ರೂಸ್‌ಬೆಕ್ ಜೀನ್ ಥೆರಪಿ ಸೆಂಟರ್‌ನ ನಿರ್ದೇಶಕ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಆಪ್ಥಮಾಲಜಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಲುಕ್ ಹೆಚ್ ವಾಂಡೆನ್‌ಬರ್ಘ್ ಸದ್ಯ ಇದು ಪ್ರೀ ಕ್ಲಿನಿಕಲ್ ಅಭಿವೃದ್ಧಿ ಹಂತದಲ್ಲಿದೆ. ಇದರ ನಂತರ ವರ್ಷಾಂತ್ಯದಲ್ಲಿ ಮಾನವರ ಮೇಲೆ ಪ್ರಯೋಗವನ್ನು ನಡೆಸಲಾಗುತ್ತದೆ. “ಸುರಕ್ಷಿತ ಮತ್ತು ದಕ್ಷವಾದ ವಂಶವಾಹಿನಿಯನ್ನು ಕಸಿ ಮಾಡಲು ಎಎವಿ ಅತ್ಯಂತ ಉತ್ತಮ ತಂತ್ರಜ್ಞಾನವಾಗಿದೆ. ನಾವು ಎಎವಿಕೋವಿಡ್‌ಗೆ ಅಳವಡಿಸುವ ವಿಶಿಷ್ಟ ತಂತ್ರಜ್ಞಾನದಿಂದಾಗಿ ಒಂದು ಚುಚ್ಚುಮದ್ದಿನಲ್ಲಿ ಸಾರ್ಸ್-ಸಿಒವಿ-2ಗೆ ನಮ್ಮ ದೇಹ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ ಎಂದಿದ್ದಾರೆ.
ವ್ಯೂಹಾನ್‌ನಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆಯೇ ವಾಂಡೆನ್‌ಬರ್ಘ್ ಮತ್ತು ಅವರ ಲ್ಯಾಬ್ ಜನವರಿ ಮಧ್ಯಭಾಗದಲ್ಲಿ ಈ ಲಸಿಕೆ ತಯಾರಿಕೆ ಆರಂಭಿಸಿತ್ತು. ಜೆನೆಟಿಕ್ ಸೀಕ್ವೆನ್ಸ್‌ನ ಮೊದಲ ಬಾರಿಗೆ ಪ್ರಕಟಿಸಿದ್ದೂ ಇದೇ ಲ್ಯಾಬ್. ಈ ವಿಪತ್ತಿನಲ್ಲಿ ನಾವು ಮಾಲೆಕ್ಯುಲರ್ ಬಯಾಲಜಿಯನ್ನು ಬಳಸಿಕೊಳ್ಳಬಹುದು ಮತ್ತು ವಾರಗಳಲ್ಲೇ ಲಸಿಕೆಯನ್ನು ಸಿದ್ಧಪಡಿಸಬಹುದು. ಇದೇ ಕೆಲಸವನ್ನು ನಾವೂ ಮಾಡಿದ್ದೇವೆ. ಈಗ ಇದರ ಸುರಕ್ಷತೆ ಮತ್ತು ದಕ್ಷತೆಯನ್ನು ಸಾಬೀತುಪಡಿಸಲು ಕ್ಲಿನಿಕಲ್ ಅಧ್ಯಯನವನ್ನು ನಡೆಸಬೇಕಿದೆ ಎಂದು ಅವರು ಹೇಳಿದ್ದಾರೆ. ಎಎವಿ ತುಂಬಾ ಬೇಗ ಅಳವಡಿಸಿಕೊಳ್ಳಬಹುದಾದ ತಂತ್ರಜ್ಞಾನ. ಸಾರ್ಸ್-ಸಿಒವ-2 ಹೊಸ ತಳಿ ಕಂಡು ಬಂದರೆ, ಎಎವಿ ಕೋವಿಡ್ ಲಸಿಕೆಯಲ್ಲಿನ ಜೆನೆಟಿಕ್ ಕೋಡ್‌ನ ಅಪ್‌ಡೇಟ್ ಮಾಡಬಹುದು ಮತ್ತು ವಾರಗಳಲ್ಲೇ ಇದನ್ನು ಮಾಡಿ ಮುಗಿಸಲು ಸಾಧ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಎಎವಿಕೋವಿಡ್ ಲಸಿಕೆಯನ್ನು ಮಾಂಸಖಂಡದ ಒಳಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಸದ್ಯ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗುತ್ತದೆ ಮತ್ತು ಆರಂಭಿಕ ಉತ್ಪಾದನೆ ಚಟುವಟಿಕೆಯೂ ಆರಂಭವಾಗಿದೆ. ಪ್ರೀ ಕ್ಲಿನಿಕಲ್ ಪ್ರಯೋಗದಲ್ಲಿ ಕಂಡುಕೊಳ್ಳುವ ಫಲಿತಾಂಶದ ಆಧಾರದಲ್ಲಿ ಮಾನವರಲ್ಲಿ ಪರೀಕ್ಷೆ ನಡೆಸಲು ಮುಂದಾಗುತ್ತೇವೆ. ಈ ಬಗ್ಗೆ ಇನ್ನಷ್ಟು ವಿವರ ನೀಡಿದ ಹೆಚ್‌ಎಂಎಸ್‌ನಲ್ಲಿ ಆಪ್ಥಮಾಲಜಿ ಪ್ರೊಫೆಸರ್ ಮತ್ತು ಮಾಸ್‌ನಲ್ಲಿ ಆಪ್ಥಮಾಲಜಿ ಮುಖ್ಯಸ್ಥ ಡೇವಿಡ್ ಗ್ಲೆಂಡೆನಿಂಗ್ ಕೋಗನ್ “ಇದೊಂದು ಅದ್ಭುತ ಸಂಶೋಧನೆ. ವ್ಯಾಂಡೆನ್‌ಬರ್ಘ್ ಮತ್ತು ಅವರ ತಂಡದ ವೈಜ್ಞಾನಿಕ ಒಳನೋಟ ಹಾಗೂ ಸಂಸ್ಥೆಯ ಸಹಕಾರದಿಂದ ಇದು ಸಾಧ್ಯವಾಗಿದೆ.
ಈ ಕಲ್ಪನೆಯನ್ನು ಸಾಕಾರಗೊಳಿಸಲು ಹಲವು ದಾನಿಗಳೂ ಮುಂದೆ ಬಂದಿದ್ದಾರೆ. ಇದೇ ಕಾರಣಕ್ಕೆ ಇಷ್ಟು ವೇಗವಾಗಿ ಲಸಿಕೆ ಸಿದ್ಧವಾಗಿದೆ. ಮಾಸ್ ಜನರಲ್ ಮತ್ತು ಮಾಸ್ ಜನರಲ್ ಬ್ರಿಘಮ್ ಇನೋವೇಶನ್ ಫಂಡ್ ಈ ತಂಡಕ್ಕೆ ತಜ್ಞರ ಸಲಹೆ ನೀಡಿದೆ ಮತ್ತು ಲಸಿಕೆ ತಯಾರಿಕೆ, ನಿಯಂತ್ರಕಗಳು ಮತ್ತು ಉತ್ಪಾದನೆಯಲ್ಲಿ ಪರಿಣಿತಿ ಹೊಂದಿರುವ ಉದ್ಯಮದ ಪರಿಣಿತರೂ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಡಬ್ಲ್ಯೂವೈಸಿ ಗ್ರೊಸ್ಬೆಕ್, ಎಮಿಲಿಯಾ ಫಝಲರಿ ಮತ್ತು ಇತರರ ದತ್ತಿ ನೆರವಿನಿಂದಲೂ ಈ ಸಂಶೋಧನೆ ನಡೆದಿದೆ ಎಂಬುದನ್ನು ಇಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.