ಹೈದರಾಬಾದ್: ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) 8 ಕಂಪನಿಗಳ ₹ 1,289 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್ ಸೃಷ್ಟಿಸಿ ₹ 224 ಕೋಟಿ ಜಿಎಸ್‌ಟಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಎಂಟು ಕಂಪನಿಗಳಲ್ಲಿ ವಿಎಸ್ ಫೆರಸ್ ಎಂಟರ್ಪ್ರೈಸಸ್, ಭರಣಿ ಕಮೊಡಿಟೀಸ್, ಇನ್ಫಿನಿಟಿ ಮತ್ತು ಹಿಂದೂಸ್ತಾನ್ ಸ್ಟೀಲ್ಸ್ ಎಂದು ಗುರುತಿಸಲಾಗಿದೆ. ಈ ಕಂಪನಿಗಳು ₹ 1,289 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್ ಸೃಷ್ಟಿಸುವ ಮೂಲಕ ₹ 224 ಕೋಟಿ ಜಿಎಸ್‌ಟಿ ವಂಚನೆ ನಡೆಸಿವೆ ಎಂದು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.
ಇವರಲ್ಲಿ ಕೆಲವು ತೆರಿಗೆಪಾವತಿದಾರರು ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಂಚಕರೇ ಈ 8 ಕಂಪನಿಗಳ ನಿರ್ದೇಶಕರು/ಪಾಲುದಾರರು/ಪ್ರವರ್ತಕರ ಹುದ್ದೆಯಲ್ಲಿದ್ದಾರೆ. ಈ ಕಂಪನಿಗಳು ನಕಲಿ ವ್ಯಾಪಾರ ಮತ್ತು ವಹಿವಾಟಿನ ಸುತ್ತೋಲೆಗಳನ್ನು ಹೊರಡಿಸುವುದರಲ್ಲಿ ಹಾಗೂ ಅಂತಹ ನಕಲಿ ಇನ್‌ವಾಯ್ಸ್ ಮತ್ತು ಇ- ವೇ ಬಿಲ್‌ಗಳನ್ನು ಬೇರೆಯವರಿಗೆ ಪೂರೈಸುವ ಮೂಲಕವೂ ವಂಚನೆ ಎಸಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.