ನವದೆಹಲಿ: ಸರ್ಕಾರಿ ಯೋಜನೆಗಳಿಗೆ 'ಸಿಟ್-ಡೌನ್ ಇಂಡಿಯಾ', 'ಶಟ್-ಡೌನ್ ಇಂಡಿಯಾ' ಹಾಗೂ 'ಶಟ್-ಅಪ್ ಇಂಡಿಯಾ' ಎಂದು ಹೆಸರಿಡಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಲೇವಡಿ ಮಾಡಿದರು.
ಕಳೆದ ಆರು ವರ್ಷಗಳಿಂದ ದೇಶದ ಆಡಳಿತ ನಡಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಕಿಡಿಕಾರಿದ ಶಶಿ ತರೂರ್,ಸ್ಟಾ ರ್ಟ್-ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಬದಲಾಗಿ ಸರ್ಕಾರಿ ಯೋಜನೆಗಳಿಗೆ ಸಿಟ್-ಡೌನ್ ಇಂಡಿಯಾ, ಶಟ್-ಡೌನ್ ಇಂಡಿಯಾ ಹಾಗೂ ಶಟ್-ಅಪ್ ಇಂಡಿಯಾ ಎಂದು ಹೆಸರಿಡಬೇಕು. ಸ್ಟಾಂಡ್-ಅಪ್ ಹಾಸ್ಯಗಾರರಿಗೆ ನೀವು ಈಗಾಗಲೇ ನಿಷೇಧಗಳನ್ನ ಹೇರಿರುವುದರಿಂದ 'ಸ್ಟಾಂಡ್-ಅಪ್ ಇಂಡಿಯಾ'ದ ಬಗ್ಗೆ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಫೆ.1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಅನ್ನು ಟೀಕಿಸಿದ್ದ ತರೂರ್, ಇದೊಂದು ಸಿಟ್-ಡೌನ್ ಬಜೆಟ್. ಸೀತಾರಾಮನ್ ಅವರ ಭಾಷಣ ಎಷ್ಟು ದೀರ್ಘವಾಗಿತ್ತೆಂದರೆ ಟಿ-ಟ್ವೆಂಟಿ ಪಂದ್ಯ ಮುಗಿಸಿದಂತಿತ್ತು, ಆದರೆ ಪಂದ್ಯದಷ್ಟು ಉತ್ಸಾಹಭರಿತವಾಗಿರಲಿಲ್ಲ ಎಂದು ಹೇಳಿದ್ದರು.