ETV Bharat / bharat

ಬಾಲಾಕೋಟ್ ದಾಳಿ ವೇಳೆ ಕಲಿತ ಪಾಠ: ಸೇನೆ ಸೇರಲಿದೆ 'ಬಂಕರ್​ ಬಸ್ಟರ್'​ - ಭಾರತೀಯ ಸರ್ಕಾರ

ಭಾರತೀಯ ಸೇನೆಗೆ 'ಬಂಕರ್​ ಬಸ್ಟರ್'​ ಬಾಂಬ್​ ಖರೀದಿ ಮಾಡಲು ಸರ್ಕಾರ ಮುಂದಾಗಿದೆ.

ಬಂಕರ್​ ಬಸ್ಟರ್
author img

By

Published : May 8, 2019, 3:08 PM IST

ನವದೆಹಲಿ: ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೋಸ್ಕರ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಜಲಾಂತರ್ಗಾಮಿ ಐಎನ್​ಎಸ್​​ ವೇಲಾ ಸೇರಿಕೊಂಡಿತ್ತು. ಇದೀಗ ಸೇನೆಗೆ 'ಬಂಕರ್​ ಬಸ್ಟರ್' ಎಂಬ ಹೊಸ ಬಾಂಬ್​ ಖರೀದಿಸಲು ಸರ್ಕಾರ ಮುಂದಾಗಿದೆ.

ಪಾಕಿಸ್ಥಾನದ ಮೇಲೆ ಏರ್‌ಸ್ಟ್ರೈಕ್​ ಮಾಡಿದ ಭಾರತ, ಮೀರಜ್​ 2000 ಯುದ್ಧ​ ವಿಮಾನದ ಮೂಲಕ ಜೈಶ್​ ಉಗ್ರ ಗುಂಪಿನ ಮೇಲೆ ಬಾಂಬ್​ ದಾಳಿ ಮಾಡಿತ್ತು. ಇದೀಗ ಹೊಸದಾಗಿ ಖರೀದಿಸಲು ಹೊರಟಿರುವ 'ಬಂಕರ್​ ಬಸ್ಟರ್'​ ಬಾಂಬ್​ ಕಟ್ಟಡಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಶಕ್ತಿಯನ್ನು ಹೊಂದಿದೆಯಂತೆ.

ಸರ್ಕಾರವು ಸೇನೆಗೆ ತುರ್ತಾಗಿ ಬೇಕಾಗಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು 300 ಕೋಟಿ ರೂ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಬಂಕರ್​ ಬಸ್ಟರ್​ ಖರೀದಿ ಮಾಡಲು ಸೇನೆ ಉತ್ಸುಕವಾಗಿದೆ. ಈ ಬಾಂಬ್​ ಇಸ್ರೇಲ್​ ದೇಶದ್ದಾಗಿದ್ದು, ಇದನ್ನು ಕೊಂಡರೆ ಸೇನೆಗೆ ಹೆಚ್ಚು ಬಲ ಬಂದಂತಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Intro:Body:

giri


Conclusion:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.