ಪಣಜಿ: ಲಾಕ್ಡೌನ್ ಸಂಪೂರ್ಣ ತೆರವಾಗಿ ದೇಶದಲ್ಲಿ ಕೊರೊನಾ ಸಂಕಷ್ಟ ನಿಯಂತ್ರಣಕ್ಕೆ ಬಂದ ಮೇಲಷ್ಟೆ ಪ್ರವಾಸಿಗರ ಪ್ರವೇಶಕ್ಕೆ ರಾಜ್ಯವನ್ನು ಮುಕ್ತ ಮಾಡಲಾಗುವುದು ಎಂದು ಗೋವಾ ಬಂದರು ಖಾತೆ ಸಚಿವ ಮೈಕೆಲ್ ಲೋಬೊ ಹೇಳಿದ್ದಾರೆ.
ಕೊರೊನಾ ಹರಡದಂತೆ ಸಾರ್ವಜನಿಕರು ಗುಂಪಾಗಿ ಸೇರುವುದನ್ನು ತಡೆಯುವುದು ಅಗತ್ಯ. ಲಾಕ್ಡೌನ್ ತೆರವಾದ ತಕ್ಷಣ ರಾಜ್ಯದ ಗಡಿಗಳನ್ನು ತೆರೆಯಲಾಗದು. ಆರೋಗ್ಯ ಸಂಬಂಧಿ ಮಾರ್ಗಸೂಚಿಗಳನ್ವಯ ಸಮಸ್ಯೆಗಳು ಪರಿಹಾರವಾದ ನಂತರವೇ ಪ್ರವಾಸೋದ್ಯಮ ಆರಂಭಿಸಲಾಗುವುದು ಎಂದು ಲೋಬೊ ತಿಳಿಸಿದರು.
ಒಳಬರುವ ವ್ಯಕ್ತಿಗೆ ಕೊರೊನಾ ಸೋಂಕು ಇಲ್ಲವೆಂಬುದನ್ನು ದೃಢಪಡಿಸಿಕೊಂಡೇ ಗೋವಾಗೆ ಪ್ರವೇಶ ನೀಡಲಾಗುವುದು ಎಂದು ಲೋಬೊ ನುಡಿದರು.
ನಯನ ಮನೋಹರ ಬೀಚ್ಗಳು, ಕ್ಯಾಸಿನೊ ಮುಂತಾದುವುಗಳಿಗೆ ಹೆಸರಾದ ಗೋವಾ ಅಂತಾರಾಷ್ಟ್ರೀಯ ಖ್ಯಾತಿಯ ಪ್ರವಾಸಿ ತಾಣವಾಗಿದೆ. ಆದರೆ ಸದ್ಯ ಕೊರೊನಾ ವೈರಸ್ ತಣ್ಣಗಾಗುವವರೆಗೆ ಗೋವಾಗೆ ಹೋಗುವಂತಿಲ್ಲ.