ಪ್ರತಾಪಗಢ್(ಉತ್ತರಪ್ರದೇಶ): ಮರ್ಯಾದಾ ಹತ್ಯೆ ಪ್ರಕರಣದಲ್ಲಿ ತಂದೆ ತನ್ನ 18 ವರ್ಷದ ಮಗಳನ್ನು ಮಗನೊಂದಿಗೆ ಸೇರಿ ಕೊಂದಿರುವ ಘಟನೆ ಚೌಪೈ ಗ್ರಾಮದ ಕಂಧೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಡುಗಿ ಸ್ಥಳೀಯ ಯುವಕನೊಂದಿಗೆ ಪ್ರೀತಿ ಸಂಬಂಧ ಹೊಂದಿದ್ದಳು. ಆದರೆ ಹುಡುಗಿಯ ಕುಟುಂಬವು ಆ ಪ್ರೀತಿಗೆ ಒಪ್ಪಿಗೆ ನೀಡಿರಲಿಲ್ಲ.
ಆಕೆ ಹುಡುಗನನ್ನು ಭೇಟಿಯಾಗಲು ಮಂಗಳವಾರ ರಾತ್ರಿ ಮನೆಯಿಂದ ಹೊರಟು ಮರುದಿನ ಮನೆಗೆ ಮರಳಿದ್ದಾಳೆ. ಅವಳು ಯುವಕರನ್ನು ಭೇಟಿಯಾಗಲು ಹೋಗಿದ್ದಾಳೆಂದು ತಿಳಿದ ತಂದೆ ಸೂರ್ಯಮಣಿ ಮತ್ತು ಸಹೋದರ ಧನಂಜಯ್ ಮೌರ್ಯ ಆಕೆಯನ್ನ ಚೆನ್ನಾಗಿ ಥಳಿಸಿದ್ದಾರೆ. ಬಾಲಕಿಯನ್ನು ಥಳಿಸುವಾಗ ಆರೋಪಿ ವಿಡಿಯೋ ಕೂಡಾ ಮಾಡಿದ್ದಾನೆ ಎಂದು ಎಸ್‌ಎಚ್‌ಒ ತಿಳಿಸಿದೆ.
ಅವರು ಆ ಯುವಕನ ಹೆಸರನ್ನು ಹೇಳುವಂತೆ ಒತ್ತಾಯ ಮಾಡುತ್ತಾರೆ. ಆತ ಆಕೆಯ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದನೆಂದು ಹೇಳಲು ಒತ್ತಾಯಿಸುತ್ತಾರೆ. ಆಕೆ ಯಾವುದಕ್ಕೂ ಒಪ್ಪದಿದ್ದಾಗ ಆಕೆಗೆ ಬಡಿಗೆ ಹಾಗೂ ಬೆಲ್ಟ್ನಿಂದ ಚೆನ್ನಾಗಿ ಹೊಡೆಯುತ್ತಾರೆ.
ತಂದೆ ಚೆನ್ನಾಗಿ ಥಳಿಸುತ್ತಿದ್ದಂತೆ ಹುಡುಗಿ ಸಹಾಯಕ್ಕಾಗಿ ಕೂಗುತ್ತಿದ್ದಳು. ಅದನ್ನು ಕಂಡ ಗ್ರಾಮಸ್ಥರು ಸೂರ್ಯಮಣಿಯನ್ನು ನಿಲ್ಲಿಸುವಂತೆ ಕೇಳಿಕೊಂಡರು ಕೂಡಾ ಆತ ಹೊಡೆಯುತ್ತಲೇ ಇದ್ದನು. ಬಳಿಕ ಬಾಲಕಿ ಪ್ರಜ್ಞೆ ತಪ್ಪಿದ್ದಳು. ಕೂಡಲೇ ಆಕೆಯನ್ನ ಕುಟುಂಬಸ್ಥರು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು, ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಯುವಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಕತೆಕಟ್ಟಿ ಪ್ರಕರಣ ದಾಖಲಿಸುವ ಪ್ಲಾನ್ ತಂದೆ ಮಗನದ್ದಾಗಿತ್ತು. ಸೂರ್ಯಮಣಿ ಪೊಲೀಸರನ್ನು ದಾರಿ ತಪ್ಪಿಸಲು ಶತ ಪ್ರಯತ್ನ ಪಟ್ಟಿದ್ದನು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ. ಆದರೆ ಮರಣೋತ್ತರ ವರದಿಯು ಕತ್ತು ಹಿಸುಕಿ ಸತ್ತಿರುವುದಾಗಿ ವರದಿ ನೀಡಿತ್ತು.