ETV Bharat / bharat

ಆಕಸ್ಮಿಕವೋ ಅಥವಾ ಬೇಜವಾಬ್ದಾರಿಯೋ..  ಇಲ್ಲಿದೆ ರೈಲು ದುರಂತಗಳ ಮಾಹಿತಿ..!

ರೈಲು ಹಳಿಯ ಮೇಲೆ ವಿಶ್ರಾಂತಿಗಾಗಿ ಮಲಗಿದ್ದವರ ಮೇಲೆ ರೈಲು ಹರಿದು 16 ಮಂದಿ ಮೃತಪಟ್ಟಿದ್ದಾರೆ. ಇಂಥವೇ ಕೆಲವು ಘಟನೆಗಳ ವಿವರ ಇಲ್ಲಿದೆ.

train accidents
ರೈಲ್ವೆ ದುರಂತ
author img

By

Published : May 8, 2020, 2:08 PM IST

ಭೋಪಾಲ್​​​ (ಮಧ್ಯಪ್ರದೇಶ) ​: ಮಧ್ಯಪ್ರದೇಶದ ಔರಂಗಾಬಾದ್​ನಲ್ಲಿ ಗೂಡ್ಸ್​​​ ರೈಲು ಹರಿದು ಹಳಿಯ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಐದು ಮಂದಿ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥವೇ ಕೆಲವು ಘಟನೆಗಳ ವಿವರ ಇಲ್ಲಿದೆ.

ಅಮೃತಸರ ದುರಂತ: ಪಂಜಾಬ್​ನ ಅಮೃತಸರ ಬಳಿಯ ಜೋಡಾ ಫಟಕ್‌ನಲ್ಲಿ ಅಕ್ಟೋಬರ್ 19, 2018ರಂದು ಈ ರೈಲು ದುರಂತ ನಡೆಯಿತು. ದಸರಾ ಸಂಭ್ರಮದಲ್ಲಿ ರಾವಣನ ಪ್ರತಿಕೃತಿ ದಹಿಸುತ್ತಿದ್ದವರ ಮೇಲೆ ರೈಲು ಹರಿದು 62 ಮಂದಿ ಸಾವನ್ನಪ್ಪಿ 72 ಮಂದಿ ಗಾಯಗೊಂಡಿದ್ದರು.

ಧಮರಾ ಘಾಟ್ ದುರಂತ: 19 ಆಗಸ್ಟ್​ 2013ರಲ್ಲಿ ಬಿಹಾರದ ಖಗರಿಯಾ ಧಮರಾಘಾಟ್​ನಲ್ಲಿ ರೈಲು ದುರಂತ ನಡೆದಿದ್ದು, ಕನ್ವಾರಾ ಭಕ್ತರ ಎಕ್ಸ್​ಪ್ರೆಸ್​ ರೈಲು ಹರಿದು 37 ಮಂದಿ ಸಾವನ್ನಪ್ಪಿದ್ದರು.

ವಿಜಿನಗರಂ ರೈಲ್ವೆ ದುರಂತ: ಆಂಧ್ರಪ್ರದೇಶದ ವಿಜಿನಗರಂ ಬಳಿ ವೇಗವಾಗಿ ಬಂದ ರೈಲೊಂದು ಹರಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಅಲೆಪ್ಪಿಯಿಂದ- ಧನ್​​​​​ಬಾದ್​​ಗೆ ತೆರಳುತ್ತಿದ್ದ ಬೊಕಾರೋ ಎಕ್ಸ್​ಪ್ರೆಸ್​ನ ಕಂಪಾರ್ಟ್​​ಮೆಂಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ಚೈನ್​ ಎಳೆದು ಕೆಳಗೆ ಜಿಗಿದಿದ್ದ ಪ್ರಯಾಣಿಕರ ಮೇಲೆ ರಾಯಗಢ, ವಿಜಯವಾಡ ಪ್ಯಾಸೆಂಜರ್​ ಟ್ರೇನ್​ ಹರಿದಿತ್ತು.

ಇಟವಾ ದುರಂತ: ಉತ್ತರ ಪ್ರದೇಶದ ಇಟವಾದಲ್ಲಿ 2019ರ ಜೂನ್​ 10ರಂದು ರಾಜಧಾನಿ ಎಕ್ಸ್​ಪ್ರೆಸ್​ ಹರಿದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದರು.

ಹರ್ಡೋಯಿ ದುರಂತ: ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ 2018ರ ನವೆಂಬರ್​ 5ರಂದು ಈ ಘಟನೆ ನಡೆದಿತ್ತು. ರೈಲ್ವೆ ಲೇನ್​ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಗ್ಯಾಂಗ್​​ಮನ್​ಗಳ ಮೇಲೆ ಅಜಾಗಕರೂಕತೆಯ ಕಾರಣಕ್ಕೆ ರೈಲು ಹರಿದು ಅವರೆಲ್ಲರೂ ಸಾವನ್ನಪ್ಪಿದ್ದರು

ಕೈಮಿರ್​ ದುರಂತ: ಬಿಹಾರದ ಕೈಮಿರ್​ ಜಿಲ್ಲೆಯಲ್ಲಿ 13 ಅಕ್ಟೋಬರ್ 2018ರಂದು ಹಳಿ ದಾಟುವ ವೇಳೆ ರೈಲು ಹರಿದು ಐದು ಮಂದಿ ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.