ETV Bharat / bharat

ಶಿಕ್ಷಣ ಮಗುವನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನವೆಂದರು ಬಾಪೂ - ಶಿಕ್ಷಣ

ಇಂತಹ ಸಂದಿಗ್ದತೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಶಿಕ್ಷಣದ ಆಲೋಚನೆಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತವೆ. ತಂತ್ರಜ್ಞಾನದ ಆಗಮನದೊಂದಿಗೆ ಅಡ್ಡರಸ್ತೆಗೆ ಬಂದು ನಿಂತ ಶಿಕ್ಷಣದ ಸಂಕಟವನ್ನು ಗಾಂಧೀಜಿಯವರು ಈ ಮೊದಲೇ ಗ್ರಹಿಸಿದ್ದರು. ತಾಂತ್ರಿಕ ಜ್ಞಾನ ಮತ್ತು ಮೃದು ಕೌಶಲ್ಯಗಳು ಒಳಗೊಂಡ ಸಮಗ್ರ ಶಿಕ್ಷಣದ ಅಗತ್ಯತೆಯನ್ನು ಅವರು ಬಹಿರಂಗವಾಗಿ ಪ್ರತಿಪಾದಿಸಿದ್ದರು. ' ಶಿಕ್ಷಣ ಎಂದರೆ ಮಗುವನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನ. ದೇಹ, ಮಿದುಳು ಹಾಗೂ ಚೈತನ್ಯ ಎಲ್ಲವನ್ನೂ ರೂಪಿಸುವುದೇ ಶಿಕ್ಷಣ' ಎಂದಿದ್ದರು.

ಸಾಂದರ್ಭಿಕ ಚಿತ್ರ
author img

By

Published : Sep 13, 2019, 5:01 AM IST

ಶಿಕ್ಷಣವು ಮನುಕುಲದ ಪ್ರಬುದ್ಧ ಸಾಧನ. ಮಾನವ ಜನಾಂಗದ ನಾಗರಿಕತೆಯ ಆರಂಭಿಕ ಅಜ್ಞಾನದ ಅಡೆತಡೆಗಳನ್ನು ಮೀರಿ ಆಧುನಿಕ ಸಮಾಜದ ನವ ಮಾನವರನ್ನಾಗಿ ರೂಪಾಂತರಗೊಳ್ಳುವಂತಹ ಅವಕಾಶಗಳನ್ನು ಮಾಡಿಕೊಟ್ಟಿದ್ದು ಶಿಕ್ಷಣ. ಶಿಕ್ಷಣ ಎಂಬ ಮರದ ಬೇರುಗಳು ವಿಶ್ವದಾದ್ಯಂತ ಹರಡಿಕೊಂಡು ಪ್ರತಿಯೊಂದು ಬೇರಿನ ಮೂಲವು ತನ್ನದೇ ಆದ ಸ್ವತಂತ್ರ ರೂಪ ಹೊಂದುವಂತೆ ಮಾಡಿದೆ. ದುರದೃಷ್ಟವಶಾತ್, ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಅದರ ವಿಷಯ ಹಾಗೂ ಅನುಷ್ಠಾನದಲ್ಲಿ ಅನೇಕ ನ್ಯೂನತೆಗಳಿದ್ದು, ಇಂದಿನ ಪೀಳಿಗೆಗೆ ಉದ್ಯೋಗ ಒದಗಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ.

ಇಂತಹ ಸಂದಿಗ್ದತೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಶಿಕ್ಷಣದ ಆಲೋಚನೆಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತವೆ. ತಂತ್ರಜ್ಞಾನದ ಆಗಮನದೊಂದಿಗೆ ಕವಲು ದಾರಿಗೆ ಬಂದು ನಿಂತ ಶಿಕ್ಷಣದ ಸಂಕಟವನ್ನು ಗಾಂಧೀಜಿ ಈ ಮೊದಲೇ ಗ್ರಹಿಸಿದ್ದರು. ತಾಂತ್ರಿಕ ಜ್ಞಾನ ಮತ್ತು ಮೃದು ಕೌಶಲ್ಯಗಳನ್ನು ಒಳಗೊಂಡ ಸಮಗ್ರ ಶಿಕ್ಷಣದ ಅಗತ್ಯತೆಯನ್ನು ಅವರು ಬಹಿರಂಗವಾಗಿ ಪ್ರತಿಪಾದಿಸಿದ್ದರು. ' ಶಿಕ್ಷಣ ಎಂದರೆ ಮಗುವನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನ. ದೇಹ, ಮಿದುಳು ಹಾಗೂ ಚೈತನ್ಯ ಎಲ್ಲವನ್ನೂ ರೂಪಿಸುವುದೇ ಶಿಕ್ಷಣ' ಎಂದಿದ್ದರು.

ಇಂದಿನ ವಿದ್ಯಾರ್ಥಿಗಳು ಹೆಚ್ಚುಹೆಚ್ಚು ಅಂಕಗಳಿಸುತ್ತಿದ್ದರೂ ಸೂಕ್ತವಾದ ಉದ್ಯೋಗ ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಶಿಕ್ಷಣವು ಉದ್ಯಮಿಗಳನ್ನು ಸೃಷ್ಟಿಸಬೇಕೇ ವಿನ: ಉದ್ಯೋಗಿಗಳನ್ನು ಅಲ್ಲ ಎಂದು ಗಾಂಧೀಜಿ ಒತ್ತಿ ಹೇಳಿದ್ದರು. ಪರಿಶ್ರಮ ಮತ್ತು ತಾಳ್ಮೆಯ ಅಸ್ತ್ರಗಳು ಗಾಂಧಿ ತಂತ್ರಗಳ ಯಶಸ್ಸಿನ ಕಿರಣಗಳಾಗಿವೆ. ಕಠಿಣ ಶ್ರಮವಿಲ್ಲದೆ ತ್ವರಿತ ಫಲಿತಾಂಶಕ್ಕಾಗಿ ಆಶಿಸುವ ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಅವರ ನಿರಂತರ ಪರಿಶ್ರಮ ಮತ್ತು ದೂರದೃಷ್ಟಿಯನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು.

ಶಿಕ್ಷಣ ಜೀವನದ ಉದ್ದಕ್ಕೂ ಜತೆ ಸಾಗುವ ಆಜೀವ ಪ್ರಕ್ರಿಯೆ. ಅದು ಪ್ರಯಾಣದುದ್ದಕ್ಕೂ ಗೌರವ ಮತ್ತು ಪ್ರತಿಬಿಂಬವಾಗಿರಬೇಕು. ಜ್ಞಾನ ಮತ್ತು ಬುದ್ಧಿವಂತಿಕೆ ಪಡೆಯುವ ನಿಜವಾದ ಆಧಾರ ಸ್ತಂಭವೆಂದು ನಂಬಿದ್ದ ಬಾಪೂ, ಪ್ರಶ್ನಿಸುವ ಮತ್ತು ಕುತೂಹಲದಿಂದ ಕಲಿಯುವ ಸ್ವಾನುಭವವನ್ನು ಪ್ರೋತ್ಸಾಹಿಸಿದ್ದರು. 'ನಿರಂತರವಾಗಿ ಪ್ರಶ್ನಿಸುವಿಕೆ ಮತ್ತು ಆರೋಗ್ಯಕರ ಜಿಜ್ಞಾಸೆಯ ಮೂಲಕ ಕಲಿಕೆಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ' ಎಂದಿದ್ದರು.

ಗಾಂಧೀಜಿಯವರು ಸಾಕ್ಷರತೆಯ ಮೂಲಕ ಭಾರತವನ್ನು ಸ್ವತಂತ್ರಗೊಳಿಸಲು ಶ್ರಮಿಸಿದ್ದರು. ಒತ್ತಡ ಮುಕ್ತ ಸಂವಾದಾತ್ಮಕ ವಾತಾವರಣದ ಮೇಲೆ ಕೇಂದ್ರೀಕರಿಸಿದ್ದ ಅವರು, ಇಲ್ಲಿ ತಾರ್ಕಿಕತೆಯು ವಾಕ್ಚಾತುರ್ಯವನ್ನು ಸುಗಮಗೊಳಿಸುತ್ತದೆ. ಶಿಕ್ಷಣವು ನಾಲ್ಕು ಗೋಡೆಗಳಿಗೆ ಸೀಮಿತವಾಗಿರಬಾರದು ಮತ್ತು ಪ್ರಾಯೋಗಿಕ ಕಲಿಕೆಗೆ ಯಾವಾಗಲೂ ತೆರೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಗಾಂಧಿಯವರ ಸತ್ಯ ಮತ್ತು ಅಹಿಂಸೆ ಪರಿಕಲ್ಪನೆಯಡಿ ನಮ್ಮ ಶಾಲಾ- ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಸಹಾನುಭೂತಿಯ ಶಿಸ್ತು ಆಧಾರಿತ ಜ್ಞಾನ ಸಂಪಾದನೆಯನ್ನು ಪ್ರಚಾರ ಮಾಡಿದ್ದರು. ಶಿಕ್ಷಣವು ನಮ್ಮ ಭಾವನೆಗಳಿಗೆ ಮನವರಿಕೆಯಾಗಬೇಕು. ಭಾವನಾತ್ಮಕ ಕಲಿಕೆಯ ಒಂದು ಹೊಸ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತದೆ ಎಂದು ಬಾಪೂ ಮಕ್ಕಳಿಗೆ ಇಕ್ಯೂ (ಎಮೋಷನಲ್ ಕೋಶೆಂಟ್: ಭಾವನಾತ್ಮಕ ಅಂಶ) ಶಿಕ್ಷಣ ಬೇಕು ವಿನ: ಐಕ್ಯೂ (ಇಂಟೆಲಿಜೆನ್ಸ್ ಕೋಶೆಂಟ್‌ : ಬುದ್ಧಿಮತ್ತೆಯ ಪ್ರಮಾಣ) ಅಲ್ಲ. ಏಕೆಂದರೆ, ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳಲು 'ಇಕ್ಯೂ' ಕಡ್ಡಾಯ ಸಾಧನವಾಗಲಿದೆ ಎಂದಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.