ಕೋಯಿಕೋಡ್: ಜನಪ್ರಿಯ ಜಾಗತಿಕ ಫ್ಲೈಟ್ ಟ್ರ್ಯಾಕರ್ ವೆಬ್‌ಸೈಟ್‌ನ ದತ್ತಾಂಶವು ಕೇರಳದ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಟೇಬಲ್‌ಟಾಪ್ ರನ್‌ವೇಯಿಂದ ಹೋದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಎರಡು ಬಾರಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸಿದಂತೆ ಕಂಡುಬಂದಿತ್ತು ಎಂದು ಹೇಳಿದೆ.
ಈ ವಿಮಾನ ಅಪಘಾತದಲ್ಲಿ ಪೈಲಟ್ ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 190 ಪ್ರಯಾಣಿಕರಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹಾರಾಟದ ನೈಜ ಸಮಯದಲ್ಲಿ ಟ್ರ್ಯಾಕ್ ಮಾಡುವ 'ಫ್ಲೈಟ್ರಾಡಾರ್ 24', ವಿಮಾನವು ನಿಲ್ದಾಣದಲ್ಲಿ ಎರಡು ಬಾರಿ ಇಳಿಯಲು ಪ್ರಯತ್ನಿಸಿತ್ತು ಎಂದು ಹೇಳಿದೆ. ವಿಮಾನವು ಇಳಿಯಲು ಪ್ರಯತ್ನಿಸುವ ಮೊದಲು ವಿಮಾನ ನಿಲ್ದಾಣದ ಸುತ್ತಲೂ ಲೂಪ್ ಮಾಡುವುದನ್ನು ಡೇಟಾ ತೋರಿಸಿದೆ.
ವಿಮಾನವು ಇಳಿಯುವ ಮೊದಲು ಹಲವು ಬಾರಿ ಮೇಲಕ್ಕೆ ಮತ್ತು ಕೆಳಕ್ಕೆ ವಾಲಾಡಿತು. ವಿಮಾನವು ರನ್‌ವೇಯನ್ನು ಸ್ಪಷ್ಟವಾಗಿ ಮುಟ್ಟಿದ ನಂತರ ಈ ಅನಾಹುತ ಸಂಭವಿಸಿದೆ ಎಂದು ಅವಘಡದಲ್ಲಿ ಬದುಕುಳಿದವರೊಬ್ಬರು ಸ್ಥಳೀಯ ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.