ಪಾಲ್ಗಢ್: ಜಿಲ್ಲೆಯಲ್ಲಿ ಸೋಮವಾರದಂದು ಐದು ಬಾರಿ ಲಘು ಭೂಕಂಪನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಲಾಸರಿ ತಾಲೂಕಿನ ಗ್ರಾಮಗಳಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಐದು ಬಾರಿ ಭೂ ಕಂಪಿಸಿದೆ. ಇದರಿಂದಾಗಿ ಜನ ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದರು. ಆದ್ರೆ ಭೂಕಂಪನದಿಂದ ಯಾವುದೇ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.4 ರಿಂದ 2.4ರವರೆಗೆ ಇದೆ ಎಂದು ಹೇಳಲಾಗಿದೆ. ಪಾಲ್ಗಢ್ ಜಿಲ್ಲೆಯಲ್ಲಿ 2018 ನವಂಬರ್ದಿಂದ ಇಲ್ಲಿಯವರೆಗೆ ಆಗಾಗ ಭೂಕಂಪನ ಸಂಭವಿಸುತ್ತಲೇ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.