ETV Bharat / bharat

ಪುಣೆ - ಮುಂಬೈ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಐವರು ಸಾವು - Five killed in road accident on Pune-Mumbai highway

ಪುಣೆ-ಮುಂಬೈ ಹೆದ್ದಾರಿಯ ಖಂಡಾಲಾ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.

Five killed in road accident on Pune-Mumbai highway
ಪುಣೆ-ಮುಂಬೈ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ
author img

By

Published : Mar 2, 2020, 8:53 AM IST

ಮುಂಬೈ : ಪುಣೆ-ಮುಂಬೈ ಹೆದ್ದಾರಿಯ ಖಂಡಾಲಾ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.

ಪುಣೆ-ಮುಂಬೈ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ

ಮಧ್ಯರಾತ್ರಿ ಅಪಘಾತ ಸಂಭವಿಸಿದ್ದು,ಮೂರು ಬೈಕ್​ಗಳಲ್ಲಿ ಆರು ಜನರು ಅಲಿಬಾಗ್‌ಗೆ ಆಗಮಿಸಿದ್ದರು. ಅಲಿಬಾಗ್‌ನಿಂದ ತಲೆಗಾಂವ್‌ಗೆ ಹಿಂದಿರುಗುವಾಗ, ಲೋನಾವಾಲಾದಿಂದ ಮುಂಬೈ ಕಡೆಗೆ ಹೊರಟಿದ್ದ ಐಷರ್ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ.

ಮೃತರನ್ನು ಅಮೋಲ್ ಬಾಲಾಜಿ ಚಿಲ್ಮೆ (29), ಅರ್ಜುನ್ ರಾಮ್ ಗುಂಡಲೆ (31), ಗೋವಿಂದ್ ನಲ್ವಾಡ್ (35), ಪ್ರದೀಪ್ ಪ್ರಕಾಶ್ ಚೋಲೆ (31), ನಾರಾಯಣ್ ರಾಮ್ ಗುಂಡಲೆ (27) ಎಂದು ಗುರುತಿಸಲಾಗಿದೆ. ಬಾಲಾಜಿ ಹರಿಶ್ಚಂದ್ರ ಭಂಡಾರಿ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಬಳಿಕ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಘಟನೆ ಬಳಿಕ ಟೆಂಪೊ ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.